Select Your Language

Notifications

webdunia
webdunia
webdunia
webdunia

ವೃದ್ಧಾಪ್ಯದಲ್ಲಿ ಕಾಡುವ ನೋವಿಗೆ ಇಂದೇ ಪರಿಹಾರ ಕಂಡುಕೊಳ್ಳಿ

ವೃದ್ಧಾಪ್ಯದಲ್ಲಿ ಕಾಡುವ ನೋವಿಗೆ ಇಂದೇ ಪರಿಹಾರ ಕಂಡುಕೊಳ್ಳಿ
ಬೆಂಗಳೂರು , ಗುರುವಾರ, 21 ಏಪ್ರಿಲ್ 2022 (15:00 IST)
ವಯಸ್ಸಾದಂತೆ ದೈಹಿಕ ಸಮಸ್ಯೆಗಳೂ ಹೆಚ್ಚಾಗುತ್ತವೆ. ವೃದ್ಧಾಪ್ಯ ದಲ್ಲಿ ಕೀಲು ನೋವು  ಮತ್ತು ಬೆನ್ನು ನೋವು ಸಾಮಾನ್ಯ.
 
ಎದ್ದು ಕೂರುವುದಕ್ಕೂ ತೊಂದರೆಯಾಗುತ್ತದೆ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ  ನೀಡದಿದ್ದರೆ, ಕ್ರಮೇಣ ಈ ಸಮಸ್ಯೆಗಳು ಹೆಚ್ಚಾಗಲು ಪ್ರಾರಂಭವಾಗುತ್ತೆ. ವಾಕಿಂಗ್  ಮತ್ತು ದೈನಂದಿನ ಚಟುವಟಿಕೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುವುದಿಲ್ಲ.

ಅಸ್ವಸ್ಥತೆ  ಸದಾ ಕಾಡುತ್ತದೆ. ನೋವು ಕಡಿಮೆ ಮಾಡಿಕೊಳ್ಳಲು ವೃದ್ಧಾಪ್ಯದಲ್ಲಿ ಜನರು ನೋವು ನಿವಾರಕ ಮಾತ್ರೆಗಳನ್ನು ಸೇವಿಸುತ್ತಾರೆ. ಈ ಔಷಧಿಗಳು ದೇಹಕ್ಕೆ ಸ್ವಲ್ಪ ಸಮಯ ವಿಶ್ರಾಂತಿ ನೀಡುತ್ತವೆ. ನಂತರ ಸಮಸ್ಯೆಗಳು ಮತ್ತೆ ಪ್ರಾರಂಭವಾಗುತ್ತವೆ.

ಇದ್ರ ಜೊತೆ ನೋವು ನಿವಾರಕಗಳ ನಿರಂತರ ಬಳಕೆಯು ದೇಹಕ್ಕೆ ಹಾನಿಕಾರಕವಾಗಿದೆ. ವೃದ್ಧಾಪ್ಯದಲ್ಲಿ ಕೀಲು ನೋವು, ಬೆನ್ನು ನೋವು ಮತ್ತು ಇತರ ದೈಹಿಕ ಸಮಸ್ಯೆಗಳನ್ನು ಹೋಗಲಾಡಿಸಲು ನೈಸರ್ಗಿಕ ಪರಿಹಾರವೆಂದ್ರೆ ಯೋಗದ ನಿಯಮಿತ ಅಭ್ಯಾಸ.

ಕೆಲವು ಯೋಗಾಸನಗಳ ನಿಯಮಿತ ಅಭ್ಯಾಸವು ನೋವಿಗೆ ಪರಿಹಾರವನ್ನು ನೀಡುತ್ತದೆ. ಇಂದು ಯಾವ ಅಭ್ಯಾಸದಿಂದ ನೋವು ದೂರ ಮಾಡಿಕೊಳ್ಳಬಹುದು ಎಂಬುದನ್ನು ನಾವು ಹೇಳ್ತೇವೆ.

ನೋವು ಕಡಿಮೆ ಮಾಡುತ್ತೆ ಯೋಗಾಸನ

ಸೇತುಬಂಧಾಸನ

ಸೇತುಬಂಧಾಸನವನ್ನು ಅಭ್ಯಾಸ ಮಾಡಲು ನಿಮ್ಮ ಬೆನ್ನಿನ ಮೇಲೆ ಆರಾಮವಾಗಿ ಮಲಗಿಕೊಳ್ಳಿ. ನಂತರ ನಿಮ್ಮ ಅಂಗೈಗಳನ್ನು ದೇಹದ ಬಳಿ ನೆಲಕ್ಕೆ ಹತ್ತಿರ ತೆಗೆದುಕೊಂಡು ಹೋಗಿ. ಇದಾದ ನಂತರ ಮೊಣಕಾಲುಗಳನ್ನು ಬಗ್ಗಿಸಿ ಮತ್ತು ಉಸಿರಾಡುವಾಗ ದೇಹವನ್ನು ನಿಧಾನವಾಗಿ ಮೇಲಕ್ಕೆತ್ತಿ. ಈ ಸ್ಥಿತಿಯಲ್ಲಿರುವಾಗ ಉಸಿರಾಟ ಸಾಮಾನ್ಯವಾಗಿರಲಿ. ಅಂದರೆ ನಿಧಾನವಾಗಿ ಉಸಿರು ತೆಗೆದುಕೊಳ್ಳಿ ಮತ್ತು ಬಿಡಿ.

ಧನುರಾಸನ

ಧನುರಾಸನವನ್ನು ಅಭ್ಯಾಸ ಮಾಡಲು ನಿಮ್ಮ ಹೊಟ್ಟೆಯ ಮೇಲೆ ಮಲಗಿ ಮತ್ತು ನಿಮ್ಮ ಕಾಲುಗಳನ್ನು ಮೇಲಕ್ಕೆ ಎತ್ತಿ. ಎರಡೂ ಕೈಗಳಿಂದ ಪಾದಗಳ ಬೆರಳುಗಳನ್ನು ಹಿಡಿದುಕೊಳ್ಳಿ. ಉಸಿರಾಡುವಾಗ ಪಾದಗಳನ್ನು ಮೇಲಕ್ಕೆ ಎಳೆಯಿರಿ. ಸ್ವಲ್ಪ ಸಮಯ ಈ ಸ್ಥಿತಿಯಲ್ಲಿದ್ದು, ನಂತರ ಸಾಮಾನ್ಯ ಸ್ಥಿತಿಗೆ ಹಿಂತಿರುಗಿ. ಇದನ್ನು ಮಾಡುವುದ್ರಿಂದ ಹೃದಯ, ಎದೆ, ಶ್ವಾಸಕೋಶಕ್ಕೆ ಬಲ ಸಿಗುತ್ತದೆ.

ಶವಾಸನ

ಈ ಆಸನವನ್ನು ಮಾಡಲು ಮೊದಲನೆಯದಾಗಿ ನಿಮ್ಮ ಬೆನ್ನಿನ ಮೇಲೆ ಮಲಗಿ ಮತ್ತು ಎರಡೂ ಕಾಲುಗಳನ್ನು ಆರಾಮವಾಗಿ ಚಾಚಿ.  ದೇಹದಿಂದ 5 ರಿಂದ 6 ಇಂಚುಗಳಷ್ಟು ದೂರದಲ್ಲಿ ಕೈಗಳನ್ನು ಇರಿಸಿ.  ಕತ್ತನ್ನು ಕೂಡ ಆರಾಮದ ಸ್ಥಿತಿಯಲ್ಲಿಸಿ. ಈಗ ನಿಮ್ಮ ಕಣ್ಣುಗಳನ್ನು ಮುಚ್ಚಿ ಮತ್ತು ಸ್ವಲ್ಪ ಸಮಯದವರೆಗೆ ಇದೇ ಸ್ಥಿತಿಯಲ್ಲಿರಿ.

ವೀರಭದ್ರಾಸನ

ಈ ಯೋಗವನ್ನು ಮಾಡಲು, ಮೊದಲನೆಯದಾಗಿ, ನೇರವಾದ ಭಂಗಿಯಲ್ಲಿ ನಿಂತು, ನಿಮ್ಮ ತೋಳುಗಳನ್ನು ನೆಲಕ್ಕೆ ಸಮಾನಾಂತರವಾಗಿ ಮೇಲಕ್ಕೆತ್ತಿ ಮತ್ತು ತಲೆಯನ್ನು ಎಡಕ್ಕೆ ತಿರುಗಿಸಿ. ಈಗ ಎಡಗಾಲನ್ನು 90 ಡಿಗ್ರಿ ಎಡಕ್ಕೆ ಬಗ್ಗಿಸಿ. ಸ್ವಲ್ಪ ಸಮಯದವರೆಗೆ ಈ ಸ್ಥಿತಿಯಲ್ಲಿರಿ. ಈಗ ಅದೇ ವ್ಯಾಯಾಮವನ್ನು ಇನ್ನೊಂದು ಬದಿಯಿಂದ ಮಾಡಿ. 


Share this Story:

Follow Webdunia kannada

ಮುಂದಿನ ಸುದ್ದಿ

ಬಾಯಾರಿಕೆಗೆ ಸಬ್ಜಾ ಬೀಜ ಮದ್ದು