Publish Date: Wed, 26 Jun 2019 (09:15 IST)
Updated Date: Wed, 26 Jun 2019 (09:18 IST)
ಬೆಂಗಳೂರು: ಲೈಂಗಿಕ ಕ್ರಿಯೆ ಎನ್ನುವುದು ಮನಸ್ಸು, ದೇಹಕ್ಕೆ ಉಲ್ಲಾಸ ನೀಡುವುದು ನಿಜ. ಆದರೆ ಇದರ ಬಗ್ಗೆ ಇರುವ ಕೆಲವು ಅಜ್ಞಾನಗಳು ಭಯವನ್ನೂ ಹುಟ್ಟಿಸುತ್ತದೆ.
ಅದರಲ್ಲೂ ಮಹಿಳೆಯರಿಗೆ ಲೈಂಗಿಕತೆ ಬಗ್ಗೆ ಹಲವು ಭಯಗಳಿರುತ್ತವೆ. ಅದರಲ್ಲೂ ವಿಶೇಷವಾಗಿ ತನ್ನ ದೇಹ ಸೌಂದರ್ಯದ ಬಗ್ಗೆ ಹಲವು ಅನುಮಾನಗಳಿರುತ್ತವಂತೆ.
ಲೈಂಗಿಕ ಸಂಬಂಧಕ್ಕೆ ಮೊದಲು ನನ್ನ ದೇಹ ಸಿರಿ ಸಂಗಾತಿಗೆ ಇಷ್ಟವಾಗಬಹುದೋ ಇಲ್ಲವೋ ಎಂಬ ಅತಿಯಾದ ಭಯ ಮಹಿಳೆಗೆ ಕಾಡುತ್ತದೆ ಎಂದು ತಜ್ಞರು ಹೇಳುತ್ತಾರೆ. ಆದರೆ ದೈಹಿಕ ಸೌಂದರ್ಯದಷ್ಟೇ ಇಬ್ಬರ ಮನಸ್ಸೂ ಹೊಂದಾಣಿಕೆಯಲ್ಲಿದ್ದರೆ ಈ ರೀತಿ ಭಯಪಡಬೇಕಾಗಿಲ್ಲ ಎನ್ನುವುದು ತಜ್ಞರ ಅಭಿಪ್ರಾಯ.