Publish Date: Sun, 09 Feb 2020 (08:35 IST)
Updated Date: Sun, 09 Feb 2020 (08:37 IST)
ಬೆಂಗಳೂರು : ಪಪ್ಪಾಯ ಹಣ್ಣು ಆರೋಗ್ಯಕ್ಕೆ ತುಂಬಾ ಉತ್ತಮ ಎಂಬುದು ಎಲ್ಲರಿಗೂ ತಿಳಿದಿದೆ. ಆದರೆ ಪಪ್ಪಾಯ ಬೀಜಗಳು ಕೂಡ ಆರೋಗ್ಯಕ್ಕೆ ತುಂಬಾ ಉತ್ತಮ. ಈ ಬೀಜಗಳನ್ನು ಸೇವಿಸುವುದರಿಂದ ಯಕೃತ್ತಿಗೆ ಸಂಬಂಧಪಟ್ಟ ಕಾಯಿಲೆಗಳು ನಿವಾರಣೆಯಾಗುತ್ತದೆ.
ಪಪ್ಪಾಯ ಬೀಜಗಳು ಯಕೃತ್ತಿಗೆ ಸಂಬಂಧಪಟ್ಟ ಕಾಯಿಲೆಗಳನ್ನು ಗುಣಪಡಿಸುವ ಪೋಷಕಾಂಶಗಳನ್ನು ಹೊಂದಿವೆ. 5-6 ಒಣಗಿದ ಪಪ್ಪಾಯ ಬೀಜಗಳನ್ನು ತೆಗೆದುಕೊಂಡು ಪುಡಿ ಮಾಡಿ ಅದನ್ನು ನಿಂಬೆರಸದೊಂದಿಗೆ ತೆಗೆದುಕೊಳ್ಳಿ. ಹೀಗೆ 30 ದಿನಗಳ ಕಾಲ ತೆಗೆದುಕೊಂಡರೆ ಯಕೃತ್ತಿಗೆ ಸಂಬಂಧಪಟ್ಟ ಕಾಯಿಲೆಗಳು ವಾಸಿಯಾಗುತ್ತವೆ ಮಾತ್ರವಲ್ಲ ಯಕೃತನ್ನು ಸ್ವಚ್ಚಗೊಳಿಸುತ್ತದೆ.