ಒಣ ಚರ್ಮ ನಿಮ್ಮದಾಗಿದ್ದರೆ ಈ ಆಹಾರ ಸೇವಿಸಿ

Webdunia
ಭಾನುವಾರ, 29 ಅಕ್ಟೋಬರ್ 2017 (07:29 IST)
ಬೆಂಗಳೂರು: ಚಳಿಗಾಲಕ್ಕೆ ಸಿದ್ಧವಾಗಿದ್ದೀರಾ? ಚಳಿಗಾಲದಲ್ಲಿ ಒಣ ಚರ್ಮದ ಗುಣವಿರುವವರದ್ದಂತೂ ಪಾಡು ಕೇಳಲಾಗದು. ಒಣ ಚರ್ಮದಿಂದ ಕಿರಿ ಕಿರಿ ಅನುಭವಿಸುತ್ತಿದ್ದರೆ ಈ ಆಹಾರವನ್ನು ಹೆಚ್ಚು ಸೇವಿಸಿ.

 
ಸಿಹಿ ಗೆಣಸು
ಸಿಹಿ ಗೆಣಸಿನಲ್ಲಿ ವಿಟಮಿನ್ ಎ ಧಾರಾಳವಾಗಿದ್ದು, ಇದರಲ್ಲಿ ಚರ್ಮಕ್ಕೆ ಬೇಕಾದ ಬೀಟಾ ಕ್ಯಾರೋಟಿನ್ ಕೂಡಾ ಹೇರಳವಾಗಿದೆ.

ಒಣ ಬೀಜಗಳು ಮತ್ತು ಬೇಳೆ ಕಾಳುಗಳು
ಒಣ ಬೀಜಗಳು ಮತ್ತು ಬೇಳೆ ಕಾಳುಗಳಲ್ಲಿ ವಿಟಮಿನ್ ಇ, ಫ್ಯಾಟಿ ಆಸಿಡ್ ಸಾಕಷ್ಟಿರುತ್ತವೆ. ಇದು ನಮ್ಮ ಚರ್ಮಕ್ಕೆ ಅತೀ ಅಗತ್ಯ.  ಹಾಗಾಗಿ ಆದಷ್ಟು ಒಣ ಹಣ್ಣುಗಳು, ಬೇಳೆ ಕಾಳುಗಳನ್ನು ಹೆಚ್ಚು ಸೇವಿಸಿ.

ಬಸಳೆ ಸೊಪ್ಪು
ಬಸಳೆ ಸೊಪ್ಪಿನಲ್ಲಿರುವ ವಿಟಮಿನ್ ಇ, ಎ ಮತ್ತು ಸಿ ಅಂಶ ನಮ್ಮ ಚರ್ಮಕ್ಕೆ ಹೇಳಿ ಮಾಡಿಸಿದ ಮದ್ದಿನ ಹಾಗೆ ಕೆಲಸ ಮಾಡುತ್ತದೆ. ಅಷ್ಟೇ ಅಲ್ಲದೆ, ಇದು ಹೆಚ್ಚು ನೀರಿನಂಶವಿರುವ ತರಕಾರಿ ಕೂಡಾ.

ಮೀನು
ಫ್ಯಾಟಿ ಆಸಿಡ್ ಅಂಶ ನಮ್ಮ ಚರ್ಮಕ್ಕೆ ಮ್ಯಾಜಿಕ್ ಮಾಡುತ್ತವೆ. ಮೀನಿನಲ್ಲಿ ಈ ಅಂಶ ಹೇರಳವಾಗಿದೆ. ಅಷ್ಟೇ ಅಲ್ಲದೆ, ಒಮೆಗಾ 3 ಕೂಡಾ ಬೇಕಾದಷ್ಟಿದೆ. ಹಾಗಾಗಿ ಇದನ್ನು ಸೇವಿಸಲೇಬೇಕು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಚಳಿಗಾಲದಲ್ಲಿ ಹಿಮ್ಮಡಿ ಒಡೆಯುವುದಕ್ಕೆ ಕ್ವಿಕ್ ಆಗಿ ಹೀಗೆ ಮಾಡಿ

ಮಕ್ಕಳಲ್ಲಿ ಒತ್ತಡ ನಿವಾರಣೆಗೆ ಇದು ಬೆಸ್ಟ್ ದಾರಿ

ರಾತ್ರಿ ನಿದ್ದೆ ಬರುತ್ತಿಲ್ಲವೆಂದರೆ ಯಾವುದೇ ಕಾರಣಕ್ಕೂ ಮಲಗುವಾಗ ಈ ತಪ್ಪು ಮಾಡಬೇಡಿ

ಋತುಚಕ್ರದ ನೋವಿಗೆ ದಿಡೀರ್ ಮುಕ್ತಿ ಬೇಕೆಂದರೆ ಹೀಗೆ ಮಾಡಿ

ಉದ್ದಿನ ದೋಸೆ ತಿಂದು ಬೇಜಾರಾಗಿದ್ರೆ ಈ ರೀತಿ ಒಮ್ಮೆ ಟ್ರೈ ಮಾಡಿ

ಮುಂದಿನ ಸುದ್ದಿ
Show comments