Publish Date: Mon, 04 Sep 2017 (08:27 IST)
Updated Date: Mon, 04 Sep 2017 (08:29 IST)
ಬೆಂಗಳೂರು: ಸಾಮಾನ್ಯವಾಗಿ ಅಕ್ಕಿ ತೊಳೆದ ನೀರನ್ನು ಅಥವಾ ಗಂಜಿ ತಿಳಿಯನ್ನು ನಾವು ಬಳಸುವುದಿಲ್ಲ. ಹಾಗೇ ಸುಮ್ಮನೇ ಚೆಲ್ಲಿಬಿಡುತ್ತೇವೆ. ಆದರೆ ಇನ್ನು ಮುಂದೆ ಹಾಗೆ ಮಾಡುವ ಮೊದಲು ಈ ಸುದ್ದಿಯನ್ನು ಓದಿ.
ಅಕ್ಕಿ ತೊಳೆದ ನೀರು ಅಥವಾ ಗಂಜಿ ನೀರು ನಮ್ಮ ಚರ್ಮದ ಸೌಂದರ್ಯ ಹೆಚ್ಚಿಸುವಲ್ಲಿ ಪ್ರಧಾನ ಪಾತ್ರ ವಹಿಸಬಲ್ಲದು. ಮುಖದ ಸೌಂದರ್ಯ ಹೆಚ್ಚಿಸಲು, ಫೇಶಿಯಲ್ ಮಾಡುವ ಮುನ್ನ ಹೀಗೆ ಮಾಡಿ ನೋಡಬಹುದು.
ಅಕ್ಕಿ ತೊಳೆದ ನೀರು ಅಥವಾ ಗಂಜಿ ತಿಳಿ ಮಿಕ್ಕಿದ್ದರೆ ಅದನ್ನು ಒಂದು ಹತ್ತಿ ಅಥವಾ ಶುದ್ಧವಾದ ಬಟ್ಟೆ ಉಪಯೋಗಿಸಿಕೊಂಡು ಮುಖಕ್ಕೆ ಹಚ್ಚಿಕೊಳ್ಳಬಹುದು. ನಿಯಮಿತವಾಗಿ ಹೀಗೆ ಮಾಡುವುದರಿಂದ ಮುಖದ ಕಾಂತಿ ಹೆಚ್ಚುವುದು.
ಉಪಯೋಗ ಏನು? ಅಕ್ಕಿ ತೊಳೆದ ನೀರಿನಲ್ಲಿ ಸಾಕಷ್ಟು ವಿಟಮಿನ್ ಗಳಿದ್ದು, ಮುಖಕ್ಕೆ ಇದನ್ನು ಹಚ್ಚಿಕೊಳ್ಳುವುದರಿಂದ ಫೇಶಿಯಲ್ ನಂತೆ ಕೆಲಸ ಮಾಡುತ್ತದೆ. ಇಷ್ಟೇ ಅಲ್ಲದೆ, ಸೂರ್ಯನ ತಾಪಕ್ಕೆ ಮುಖ ಕೆಂಪಗಾಗುವುದು, ಚರ್ಮದ ಅಲರ್ಜಿ ಮುಂತಾದ ಸಮಸ್ಯೆಗಳಿಗೂ ಅಕ್ಕಿ ತೊಳೆದ ನೀರು ಮತ್ತು ಗಂಜಿ ತಿಳಿ ಉತ್ತಮ ಮನೆ ಮದ್ದಿನಂತೆ ಕೆಲಸ ಮಾಡುತ್ತದೆ. ಮಾಡಿ ನೋಡಿ!