Select Your Language

Notifications

webdunia
webdunia
webdunia
webdunia

ಇದು ಹೃದಯದ ವಿಷಯ! ಎಚ್ಚರಿಕೆಯಿರಲಿ!

ಇದು ಹೃದಯದ ವಿಷಯ! ಎಚ್ಚರಿಕೆಯಿರಲಿ!
ಬೆಂಗಳೂರು , ಭಾನುವಾರ, 3 ಸೆಪ್ಟಂಬರ್ 2017 (08:22 IST)
ಬೆಂಗಳೂರು: ಹೃದಯ ಎಂಬುದು ನಮ್ಮ ದೇಹದ ಜೀವಾಳ. ಅದನ್ನು ಕಾಪಾಡಿಕೊಳ್ಳುವುದು ಅಷ್ಟೇ ಮುಖ್ಯ. ಹೃದಯದ ಆರೋಗ್ಯ ಕಾಪಾಡಿಕೊಳ್ಳಲು ಕೆಲವು ಒಣ ಹಣ್ಣುಗಳನ್ನು ಸೇವಿಸಿದರೆ ಸಾಕು. ಅವು ಯಾವುವು? ನೋಡೋಣ.

 
ವಾಲ್ ನಟ್
ಮಕ್ಕಳಲ್ಲಿ ಸ್ಮರಣ ಶಕ್ತಿ ಹೆಚ್ಚಬೇಕೆಂದು ತಾಯಿಯಂದಿರು ವಾಲ್ ನಟ್ ಸೇವಿಸಲು ಕೊಡುತ್ತಾರೆ. ಇದು ಹೃದಯದ ಆರೋಗ್ಯವನ್ನೂ ಕಾಪಾಡುತ್ತದೆ. ಇದರಲ್ಲಿರುವ ಒಮೆಗಾ 3 ಫ್ಯಾಟಿ ಆಸಿಡ್ ಹೃದಯ ಬಡಿತವನ್ನು ನಿಯಂತ್ರಣದಲ್ಲಿರಿಸುತ್ತದೆ.

ಪಿಸ್ತಾ
ಪಿಸ್ತಾ ಕೊಬ್ಬು ರಹಿತವಾಗಿದ್ದು, ಸಾಕಷ್ಟು ಪೋಷಕಾಂಶಗಳನ್ನು ಹೊಂದಿದೆ. ಇದರಲ್ಲಿ ನಾರಿನಂಶ ಮತ್ತು ಆಂಟಿ ಆಕ್ಸಿಡೆಂಟ್ ಕೂಡಾ ಹೇರಳವಾಗಿದೆ. ಇದು ಬೊಜ್ಜು ಬೆಳೆಯುವುದನ್ನು ತಡೆಗಟ್ಟುವುದಲ್ಲದೆ, ಹೃದಯಾಘಾತವಾಗದಂತೆ ನೋಡಿಕೊಳ್ಳುತ್ತದೆ.

ಬಾದಾಮಿ
ಬಾದಾಮಿ ನಮ್ಮ ದೇಹದಲ್ಲಿ ಸಂಗ್ರಹವಾಗುವ ಬೇಡದ ಕೊಬ್ಬು ನಿವಾರಿಸುವ ಗುಣ ಹೊಂದಿದೆ. ಇದರಲ್ಲಿ ಉತ್ತಮ ಕೊಬ್ಬು, ಫೈಬರ್, ಕ್ಯಾಲ್ಶಿಯಂ ಮುಂತಾದ ಹಲವು ಪೋಷಕಾಂಶಗಳ ಆಗರವೇ ಇದೆ. ಇದು ಹೃದಯದ ರಕ್ತ ನಾಳಗಳಲ್ಲಿ ಸುಗಮವಾಗಿ ರಕ್ತ ಸಂಚಾರವಾಗುವಂತೆ ನೋಡಿಕೊಳ್ಳುತ್ತದೆ.

ನೆಲಗಡಲೆ
ಬಾದಾಮಿ, ಪಿಸ್ತಾ ಎಂದೆಲ್ಲಾ ಖರೀದಿಸುವುದೆಂದರೆ ದುಬಾರಿ ಎನಿಸಿದರೆ ಬಡವರ ಬಾದಾಮಿ ಎಂದೇ ಪರಿಗಣಿಸಲ್ಪಟ್ಟಿರುವ ನೆಲಗಡಲೆ ಸೇವಿಸಿ. ಇದರಲ್ಲಿರುವ ಪ್ರಬಲ ಆಂಟಿ ಆಕ್ಸಿಡೆಂಟ್ ಗುಣ ನಮ್ಮ ಹೃದಯ ರಕ್ಷಿಸುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಬೆತ್ತಲೆಯಾಗಿ ಮಲಗೋದೂ ಒಳ್ಳೆಯದೇ!