Publish Date: Wed, 09 Sep 2020 (09:08 IST)
Updated Date: Wed, 09 Sep 2020 (09:09 IST)
ಬೆಂಗಳೂರು : ದೇಹದ ಉಷ್ಣತೆ ಹೆಚ್ಚಾದಾಗ ಬಾಯಲ್ಲಿ ಹುಣ್ಣುಗಳಾಗುತ್ತವೆ. ಇದರಿಂದ ತಿನ್ನಲು, ಕುಡಿಯಲು ಆಗುವುದಿಲ್ಲ. ಈ ಬಾಯಿ ಹುಣ್ಣು ನಿವಾರಿಸಲು ಪ್ರತಿದಿನ ತಪ್ಪದೇ ಇದನ್ನು ತಿನ್ನಿ.
*ಉಪ್ಪು ನೀರಿನಿಂದ ಬಾಯಿ ಮುಕ್ಕಳಿಸಿದರೆ ಬಾಯಿ ಹುಣ್ಣು ಕಡಿಮೆಯಾಗುತ್ತದೆ.
*ಐದಾರು ತುಳಸಿ ಎಲೆಗಳನ್ನು ಅಗೆದು ನುಂಗಿ. ಪ್ರತಿದಿನ ನಾಲ್ಕೈದು ಬಾರಿ ಈ ರೀತಿ ಮಾಡಿದರೆ 2 ದಿನದಲ್ಲಿ ಬಾಯಿ ಹುಣ್ಣು ದೂರವಾಗುತ್ತದೆ.
*ಎಳನೀರನ್ನು ಕುಡಿದರೆ ಹಾಗೂ ಕೊಬ್ಬರಿಯನ್ನು ತಿಂದರೂ ಕೂಡ ಬಾಯಿ ಹುಣ್ಣು ನಿವಾರಣೆಯಾಗುತ್ತದೆ.