Publish Date: Mon, 12 Aug 2019 (09:14 IST)
Updated Date: Mon, 12 Aug 2019 (09:16 IST)
ಬೆಂಗಳೂರು : ಹಣ್ಣುಗಳು ಆರೋಗ್ಯಕ್ಕೆ ಉತ್ತಮ ನಿಜ. ಆದರೆ ಅವುಗಳನ್ನು ಊಟಕ್ಕೆ ಮೊದಲು ತಿನ್ನಬೇಕಾ? ಅಥವಾ ಊಟವಾದ ನಂತರ ತಿನ್ನಬೇಕಾ? ಎಂಬ ಗೊಂದಲ ಹಲವರಲ್ಲಿರುತ್ತದೆ. ಅದಕ್ಕೆ ಉತ್ತರ ಇಲ್ಲಿದೆ ನೋಡಿ.
ಹಣ್ಣನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುವುದು ಉತ್ತಮ. ಯಾಕೆಂದರೆ ಹಣ್ಣುಗಳಲ್ಲಿ ಶರ್ಕರಪಿಷ್ಟ, ನಾರಿನಂಶ ಹೆಚ್ಚಿರುತ್ತದೆ. ಇದನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ದೇಹಕ್ಕೆ ಗ್ಲುಕೋಸ್ ಒದಗಿಸಿದಂತಾಗುತ್ತದೆ. ಅಲ್ಲದೇ ಖಾಲಿ ಹೊಟ್ಟೆಯಲ್ಲಿ ಹಣ್ಣು ಮಾತ್ರ ಸೇವಿಸಿದಾಗ ನಮ್ಮ ಜೀರ್ಣಾಂಗ ಬಹುಬೇಗ ಅದರಲ್ಲಿರುವ ನಾರಿನಂಶ ಶರ್ಕರಪಿಷ್ಟಗಳನ್ನು ಹೀರಿಕೊಂಡು ನಮ್ಮ ಜೀರ್ಣಕ್ರಿಯೆ ಉತ್ತಮಗೊಳಿಸುವುದಲ್ಲದೆ, ಬಲ ನೀಡುತ್ತದೆ.
ಆದರೆ ಊಟವಾದ ನಂತರ ಹಣ್ಣು ಸೇವಿಸದರೆ, ಹಣ್ಣು ಮತ್ತು ಊಟ ಎರಡನ್ನೂ ದೇಹ ಅರಗಿಸಿಕೊಳ್ಳುವುದಿಲ್ಲ. ಇದರಿಂದ ಹೊಟ್ಟೆ ಉರಿ, ಅಜೀರ್ಣ ಸಮಸ್ಯೆ ಉಂಟಾಗುವುದು.