Select Your Language

Notifications

webdunia
webdunia
webdunia
webdunia

ಮೊಟ್ಟೆಯನ್ನು ಸಾಲ್ಮೊನೆಲ್ಲಾದಿಂದ ರಕ್ಷಿಸಲು 3 ಸುಲಭ ವಿಧಾನಗಳು

ಮೊಟ್ಟೆಯನ್ನು ಸಾಲ್ಮೊನೆಲ್ಲಾದಿಂದ ರಕ್ಷಿಸಲು 3 ಸುಲಭ ವಿಧಾನಗಳು
ಬೆಂಗಳೂರು , ಶುಕ್ರವಾರ, 8 ಜೂನ್ 2018 (16:17 IST)
ಮೊಟ್ಟೆಗಳು ಸಾಲ್ಮೊನೆಲ್ಲಾ ರೀತಿಯ ಬ್ಯಾಕ್ಟೀರಿಯಾದ ಸಂತಾನೋತ್ಪತ್ತಿಯ ಆಧಾರವಾಗಿರಬಹುದು. ಸಾಲ್ಮೊನೆಲ್ಲಾ ಒಂದು ಪುಡ್ ಪಾಯಿಸನಿಂಗ್ ಉಂಟು ಮಾಡುವ ಬ್ಯಾಕ್ಟೀರಿಯಾಗಳ ಗುಂಪಿನ ಹೆಸರಾಗಿದೆ. ಸ್ವಚ್ಛ ಮತ್ತು ಯಾವುದೇ ಬಿರುಕಿಲ್ಲದೆ ಇರುವ ಕವಚಗಳನ್ನು ಹೊಂದಿರುವ ತಾಜಾ ಮೊಟ್ಟೆಗಳೂ ಕಾಯಿಲೆಗಳನ್ನು ತರಬಹುದು ಎಂದು ಅಧ್ಯಯನವೊಂದು ತಿಳಿಸಿದೆ.
 
ಈ ರೀತಿಯ ಬ್ಯಾಕ್ಟೀರಿಯಾಗಳಿಂದ ಸುರಕ್ಷಿತವಾಗಿ ಮೊಟ್ಟೆಯನ್ನು ಸೇವಿಸುವುದು ಹೇಗೆ ಎಂದು ನೋಡೋಣ
 
- ನಿಮ್ಮ ಕೈಗಳನ್ನು ಸ್ವಚ್ಛವಾಗಿ ತೊಳೆಯಿರಿ
 
ಮೊದಲ ಮುನ್ನೆಚ್ಚರಿಕೆಯಾಗಿ ನಿಮ್ಮ ಕೈಗಳನ್ನು ಸ್ವಚ್ಛವಾಗಿ ತೊಳೆಯಿರಿ. ಕಚ್ಚಾ ಮೊಟ್ಟೆಗಳನ್ನು ಸ್ಪರ್ಶಿಸುವ ಮೊದಲು ಮತ್ತು ನಂತರ ನಿಮ್ಮ ಕೈಗಳನ್ನು ಬಿಸಿ ನೀರು ಮತ್ತು ಸಾಬುನಿನಿಂದ ತೊಳೆಯಬೇಕು. ಹೀಗೆ ಮಾಡುವುದರಿಂದ ಸಾಲ್ಮೊನೆಲ್ಲಾ ಅಥವಾ ಇತರ ಬ್ಯಾಕ್ಟೀರಿಯಾಗಳು ಇತರ ಆಹಾರಗಳಿಗೆ ಹರಡದಂತೆ ತಡೆಯುತ್ತದೆ.
 
- ಹೆಚ್ಚಿನ ತಾಪಮಾನ
 
ಕಚ್ಚಾ ಮೊಟ್ಟೆಗಳನ್ನು ಪ್ರವೇಶಿಸುವ ಬ್ಯಾಕ್ಟೀರಿಯಾವನ್ನು ಕೊಲ್ಲಲು ಕನಿಷ್ಟ 160 ಡಿಗ್ರಿ ಆಂತರಿಕ ಉಷ್ಣಾಂಶದಲ್ಲಿ ಮೊಟ್ಟೆಗಳನ್ನು ಬೇಯಿಸಿ. ಪರಿಣಿತರ ಪ್ರಕಾರ, ಸುರಕ್ಷಿತವಾದ ಮೊಟ್ಟೆಯ ಪಾಕವಿಧಾನಗಳೆಂದರೆ ಚೆನ್ನಾಗಿ ಬೇಯಿಸಿದ ಮೊಟ್ಟೆಗಳು, ಮೊಟ್ಟೆ ಬುರ್ಜಿ, ಮತ್ತು ಬೇಯಿಸಿದ ಮೊಟ್ಟೆಯ ಪದಾರ್ಥಗಳಂತಹವುಗಳನ್ನು ಶಿಫಾರಸು ಮಾಡಲಾಗಿದೆ.
 
 
- ಸುರಕ್ಷಿತ ಸಂಗ್ರಹಣೆ
 
ಬ್ಯಾಕ್ಟೀರಿಯಾ ಮತ್ತು ಸೂಕ್ಷ್ಮಜೀವಿಗಳ ವರ್ಗಾವಣೆ ಆಗುವುದನ್ನು ತಪ್ಪಿಸಲು ನಿಮ್ಮ ರೆಫ್ರಿಜರೇಟರ್‌ನಲ್ಲಿ ತಾಜಾ ಹಣ್ಣುಗಳು ಮತ್ತು ತಾಜಾ ತರಕಾರಿಗಳಿಂದ ಕಚ್ಚಾ ಮೊಟ್ಟೆಗಳನ್ನು ದೂರವಿಡಿ. ನಿಮ್ಮ ಸಂಪೂರ್ಣ ಅಡುಗೆ ಮನೆಯಲ್ಲಿ ಬ್ಯಾಕ್ಟೀರಿಯಾವನ್ನು ಹರಡುವುದನ್ನು ತಡೆಯಲು ಕಚ್ಚಾ ಮೊಟ್ಟೆಗಳು ಇತರ ತಾಜಾ ಆಹಾರಗಳೊಂದಿಗೆ ಸಂಪರ್ಕ ಹೊಂದದ ಹಾಗೆ ನೋಡಿಕೊಳ್ಳಿ.
 

Share this Story:

Follow Webdunia kannada

ಮುಂದಿನ ಸುದ್ದಿ

ಗ್ರೀನ್ ಟೀ ಚಮತ್ಕಾರ