ನಿಮ್ಮ ಹೃದಯ ಆರೋಗ್ಯಕರವಾಗಿರಬೇಕೆ ಈ ಕೆಲಸ ಮಾಡಿ...

ಶುಕ್ರವಾರ, 8 ಜೂನ್ 2018 (14:34 IST)
ನೀವು ಆರೋಗ್ಯವಾಗಿರಲು ಮತ್ತು ಚಟುವಟಿಕೆಯಿಂದಿರಲು ಹೃದಯದ ಆರೋಗ್ಯ ತುಂಬಾನೇ ಮುಖ್ಯವಾಗಿರುತ್ತದೆ. ಹಾಗಾಗಿ ಹೃದಯದ ಆರೋಗ್ಯವನ್ನು ಹೆಚ್ಚಿಸಿಕೊಳ್ಳಬೇಕು ಮತ್ತು ಕಾಪಾಡಿಕೊಳ್ಳಬೇಕು ಎಂದಾದರೆ ನೀವು ತಪ್ಪದೇ ಈ ಸಿಂಪಲ್ ಆಗಿರುವ ಕೆಲಸ ಮಾಡಿದರೆ ಸಾಕು.
ನೀವು ದಿನವೂ ಏಳು ಗಂಟೆಗಳ ಕಾಲ ನಿದ್ರೆ ಮಾಡಿದರೆ ನಿಮ್ಮ ಹೃದಯದ ಆಯಸ್ಸು ಹೆಚ್ಚಾಗುತ್ತದೆ ಮತ್ತು ಹೃದಯ ರಕ್ತನಾಳದ ಕಾಯಿಲೆಯ ಅಪಾಯಗಳನ್ನು ಕಡಿಮೆ ಮಾಡುತ್ತದೆ ಎಂದು ಇತ್ತೀಚಿನ ಸಂಶೋಧನೆಯಲ್ಲಿ ತಿಳಿದುಬಂದಿದೆ. ಅಷ್ಟೇ ಅಲ್ಲ ವಯಸ್ಕರು ಏಳು ಗಂಟೆಗಳ ಕಾಲ ನಿದ್ರೆ ಮಾಡಿದರ ಪರಿಣಾಮ ಅವರ ಹೃದಯದ ಆಯಸ್ಸು ಹೆಚ್ಚಾಗಿರುವುದು ಮತ್ತು ಹೃದಯದ ರಕ್ತನಾಳಗಳ ತೊಂದರೆಯ ಸಮಸ್ಯೆಯು ಕಡಿಮೆ ಎಂದು ಪರೀಕ್ಷೆಗೆ ಒಳಪಡಿಸಿದಾಗ ತಿಳಿದುಬಂದಿದೆ ಎಂದು ಸಂಶೋಧನೆ ಒಂದು ತಿಳಿಸಿದೆ.
 
ಏಳು ಗಂಟೆಗಳಿಗಿಂತ ಕಡಿಮೆ ಸಮಯ ಅಥವಾ ಹೆಚ್ಚಿನ ಸಮಯ ನಿದ್ದೆ ಮಾಡುವುದರಿಂದ ಹೆಚ್ಚಿನವರ ಹೃದಯದ ಆಯಸ್ಸು ಕಡಿಮೆಯಾಗುತ್ತದೆ, ಅದರಲ್ಲೂ ಕಡಿಮೆ ನಿದ್ದೆ ಮಾಡುವವರ ಹೃದಯದ ಆಯಸ್ಸು ತುಂಬಾ ಕಡಿಮೆ ಆಗಿರುತ್ತದೆ ಎಂದು ಅಮೇರಿಕಾದ ಜಾರ್ಜಿಯಾನಲ್ಲಿರುವ ಎಮೊರಿ ವಿಶ್ವವಿದ್ಯಾಲಯದ ಜೂಲಿಯಾ ಡರ್ಮರ್ ಹೇಳಿದ್ದಾರೆ.
 
ಜನರಲ್ ಸ್ಲೀಪ್‌ನಲ್ಲಿ ಪ್ರಕಟವಾಗಿರುವ ಅಧ್ಯಯನವೊಂದರ ಪ್ರಕಾರ, 30 ರಿಂದ 74 ವರ್ಷಗಳ ನಡುವಿನ ವಯಸ್ಸಿನ 12,775 ಜನರ ಈ ಪರೀಕ್ಷೆಗೆ ಒಳಗೊಂಡಿದ್ದರು. ಅವರು ತಾವು ನಿದ್ದೆ ಮಾಡಿದ ಅವಧಿಯನ್ನು ವರದಿ ಮಾಡಿದ್ದು ಅದನ್ನು ಐದು ವಿಭಾಗಗಳಾಗಿ ವಿಂಗಡಿಸಲಾಗಿದೆ - ಐದು ಗಂಟೆಗಳು ಅಥವಾ ಅದಕ್ಕಿಂತ ಕಡಿಮೆ, ಆರು, ಏಳು, ಎಂಟು, ಒಂಬತ್ತು ಮತ್ತು / ಅಥವಾ ಹೆಚ್ಚು ಗಂಟೆಗಳ ನಿದ್ದೆ. ಇದರ ಫಲಿತಾಂಶದಲ್ಲಿ ದಿನಕ್ಕೆ ಏಳು ಗಂಟೆಗಳ ಕಾಲ ನಿದ್ದೆ ಮಾಡುವವರ ಹೃದಯದ ಆಯಸ್ಸು ಹೆಚ್ಚು ಎಂದು ದೃಢಪಟ್ಟಿದೆ ಎಂದು ಈ ಅಧ್ಯಯನದ ಮೂಲಕ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಆರೋಗ್ಯದಲ್ಲಿ ಸೀತಾಫಲದ ಉಪಯೋಗಗಳು