Select Your Language

Notifications

webdunia
webdunia
webdunia
webdunia

ಆರೋಗ್ಯದಲ್ಲಿ ಸೀತಾಫಲದ ಉಪಯೋಗಗಳು

ಆರೋಗ್ಯದಲ್ಲಿ ಸೀತಾಫಲದ ಉಪಯೋಗಗಳು
ಬೆಂಗಳೂರು , ಶುಕ್ರವಾರ, 8 ಜೂನ್ 2018 (14:12 IST)
ಸೀತಾಫಲ ರುಚಿಕರ ಹಣ್ಣಾದರೂ ಬೀಜಗಳನ್ನು ಬೇರ್ಪಡಿಸಿ ತಿನ್ನುವುದು ಸ್ವಲ್ಪ್ ಕಷ್ಟ. ಇದು ತಿನ್ನಲು ಎಷ್ಟು ರುಚಿಕರವಾಗಿದಿಯೋ ಅಷ್ಟೇ ಕಾಯಿಲೆಗಳಿಗೂ ರಾಮಬಾಣವಾಗಿದೆ. ಸೀತಾಫಲ ವಿಟಮಿನ್ ಎ, ಮೆಗ್ನಿಷಿಯಂ, ಪೊಟಾಷಿಯಂ, ಫೈಬರ್, ವಿಟಮಿನ್ ಬಿ6, ಕಾಲ್ಸಿಯಂ, ವಿಟಮಿನ್ ಸಿ, ಐರನ್ ನಂತಹ ಅನೇಕ ಪೋಷಕಾಂಶಗಳನ್ನು ಹೊಂದಿವೆ.
- ಸೀತಾಫಲದ ಎಲೆಗಳಿಂದ ತೆಗೆದ ರಸವನ್ನು ಪ್ರತಿದಿನ ಬೆಳಿಗ್ಗೆ ಒಂದು ಟೀ ಚಮಚ ಅಳತೆಯಲ್ಲಿ ಸೇವಿಸಿದರೆ ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ ಹಾಗು ತೂಕವನ್ನು ಸಹ ಕಡಿಮೆ ಮಾಡುತ್ತದೆ.
 
- ಸೀತಾಫಲದ ಗಿಡದ ತೊಗಟೆಯನ್ನು ಜಜ್ಜಿ ಸ್ವಲ್ಪ ನೀರಿನೊಂದಿಗೆ ಸೇರಿಸಿ ಚೆನ್ನಾಗಿ ಕುದಿಸಿ. ನಂತರ ಈ ನೀರಿಗೆ ಜೇನು ತುಪ್ಪ ಬೆರೆಸಿ ಕುಡಿದರೆ ಜ್ವರ, ಕೆಮ್ಮು ಕಡಿಮೆಯಾಗುತ್ತದೆ.
 
- ಸೀತಾಫಲದಲ್ಲಿ ವಿಟಮಿನ್ ಎ ಹೆಚ್ಚಿನ ಪ್ರಮಾಣದಲ್ಲಿ ಇರುವುದರಿಂದ ದೃಷ್ಟಿ ಸಮಸ್ಯೆಗಳನ್ನು ದೂರ ಮಾಡುತ್ತದೆ.
 
- ಹೊಟ್ಟೆ ಉರಿ ಮತ್ತು ದಾಹವಿದ್ದರೆ ಸೀತಾಫಲ ಹಣ್ಣಿನ ರಸಕ್ಕೆ ಸಕ್ಕರೆ ಸೇರಿಸಿ ಸೇವಿಸಬೇಕು ಮತ್ತು ಹೊಟ್ಟೆ ಮೇಲೆ ಲೇಪನ ಮಾಡಿದರೆ, ದಾಹ ನಿವಾರಣೆಯಾಗುತ್ತದೆ.
 
- ಸೀತಾಫಲದ ಎಲೆಗಳನ್ನು ನೀರಿನಲ್ಲಿ ಹಾಕಿ ಕಷಾಯ ದಂತೆ ಕಾಯಿಸಿಕೊಂಡ ಕುಡಿದರೆ ನೆಗಡಿ ಕಡಿಮೆಯಾಗುತ್ತದೆ.
 
- ಸೀತಾಫಲವನ್ನು ಬೆಳಿಗ್ಗೆ ಉಪಹಾರವಾಗಿ ಸೇವಿಸಿದರೆ ನರಗಳ ಬಲಹೀನತೆ ನಿವಾರಣೆಯಾಗುತ್ತದೆ.
 
- ಗಾಯ ಮುಂತಾದ ಚರ್ಮ ರೋಗಗಳಿಗೆ ಸೀತಾಫಲದ ಎಲೆಗಳನ್ನು ನುಣ್ಣಗೆ ಅರಿದು ಹಚ್ಚಿ.
 
- ಶರೀರದಲ್ಲಿ ಉಷ್ಣಾಂಶ ಹೆಚ್ಚು ಇರುವವರು, ಚಿಕ್ಕ ಮಕ್ಕಳು, ಬಾಣಂತಿಯರು ಈ ಸೀತಾಫಲವನ್ನು ತಿಂದರೆ ಒಳ್ಳೆಯ ಪೋಷಕಾಂಶಗಳನ್ನು ಸಿಗುತ್ತದೆ.
 
- ಹಿಮೋಗ್ಲೋಬಿನ್ ಕಣಗಳು ರಕ್ತದಲ್ಲಿ ಕಡಿಮೆ ಇದ್ದರೆ ಪ್ರತಿದಿನ ಸೀತಾಫಲವನ್ನು ಸೇವಿದರೆ ಹಿಮೋಗ್ಲೋಬಿನ್‌ ಪ್ರಮಾಣ ಹೆಚ್ಚುತ್ತದೆ.
 
- ಸೀತಾಫಲ ಗಿಡದ ಎಲೆಗಳನ್ನು ಜಜ್ಜಿ ಕುರುವಿನ ಮೇಲೆ ಕಟ್ಟಿದರೆ, ಕುರು ಬೇಗ ಮಾಯುತ್ತದೆ.
 
- ಸೀತಾಫಲ ಗಿಡದ ತೊಗಟೆಯನ್ನು ಜಜ್ಜಿ ಕಷಾಯಾ ತಯಾರಿಸಿ ಸೇವಿಸಿದರೆ ಭೇದಿ, ಆಮಶಂಕೆ ಗುಣವಾಗುತ್ತದೆ.
 
- ಸೀತಾಫಲದಲ್ಲಿರುವ ಮೆಗ್ನಿಷಿಯಂ ಹೃದಯ ಸಂಬಂಧಿ ಕಾಯಿಗಳು ಬರದಂತೆ ತಡೆಯುತ್ತದೆ. ಇವುಗಳಲ್ಲಿರುವ ಪೋಷಕಾಂಶಗಳು ಶರೀರದಲ್ಲಿರುವ ಕೊಬ್ಬನ್ನು ಕರಗಿಸುತ್ತದೆ.
 
- ಸೀತಾಫಲದಲ್ಲಿರುವ ಕ್ಯಾಲಿಯಂನಂತಹ ಪೋಷಕಾಂಶಗಳಿಂದ ಮೂಳೆಗಳು ಗಟ್ಟಿಗೊಳ್ಳುತ್ತವೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಿಡ್ನಿಯ ಆರೋಗ್ಯವನ್ನು ಹೀಗೂ ಹೆಚ್ಚಿಸಬಹುದು