Select Your Language

Notifications

webdunia
webdunia
webdunia
webdunia

ಬಾಯಿಹುಣ್ಣಿಗೆ ಸುಲಭ ಪರಿಹಾರಗಳು

ಬಾಯಿಹುಣ್ಣು
ಕೆಲವೊಮ್ಮೆ ಸಣ್ಣ ಸಣ್ಣ ಗಾಯಗಳೂ ಸಹ ಬಹಳಷ್ಟು ನೋವನ್ನುಂಟುಮಾಡುತ್ತದೆ. ಬೇಸಿಗೆ ಕಾಲದಲ್ಲಿ ಸಾಮಾನ್ಯವಾಗಿ ಎಲ್ಲಾ ವಯೋಮಾನದವರ ಗೋಳು ಎಂದರೆ ಬಾಯಿಹುಣ್ಣು. ಇದು ಬಾಯಿಯ ಒಳಗಡೆ, ತುಟಿಯ ಒಳಭಾಗದಲ್ಲಿ ಆಗುತ್ತದೆ. ಈ ಹುಣ್ಣು ದೇಹದ ಉಷ್ಣಾಂಶ ಜಾಸ್ತಿಯಾದಾಗ, ಅಸಿಡಿಟಿ, ವಿಟಾಮಿನ್ ಸಿ, ಬಿ, ಕಬ್ಬಿಣಾಂಶ ಮತ್ತು ಇತರ ಪೋಷಕಾಂಶಗಳ ಕೊರತೆಯಿಂದ ಉಂಟಾಗುತ್ತದೆ. ಇದು ಒಂದು ರೀತಿಯ ಕಿರಿಕಿರಿಯೂ ಹೌದು. ಈ ಹುಣ್ಣಿನಿಂದ ಮಾತನಾಡಲೂ ಆಗದೇ ವಿಪರೀತ ನೋವುಂಟು ಮಾಡುತ್ತದೆ. ಇದನ್ನು ಪರಿಹರಿಸಲು ಕೆಲವು ಮನೆ ಔಷಧಿಗಳಿವೆ. 
- ಜ್ಯೇಷ್ಠಮದ್ದು (ಇಂಗ್ಲಿಷಿನಲ್ಲಿ ಇದನ್ನು ಲಿಕ್ವೊರೈಸ್ ಎನ್ನುತ್ತಾರೆ) ಇದರ ಹುಡಿಯನ್ನು ನೀರಿನೊಂದಿಗೆ ಅಥವಾ ಜೇನುತುಪ್ಪದೊಂದಿಗೆ ಸೇರಿಸಿ ಸೇವಿಸುವುದರಿಂದ ಬಾಯಿಹುಣ್ಣಿನ ಸಮಸ್ಯೆಗೆ ಮುಕ್ತಿ ದೊರೆಯುತ್ತದೆ.
 
- ನಿರಂತರವಾಗಿ ನೀರು ಕುಡಿಯುತ್ತಾ ದೇಹದ ಉಷ್ಣತೆಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದರಿಂದ ಬಾಯಿಹುಣ್ಣಿನ ಪ್ರಮಾಣ ಕಡಿಮೆಯಾಗುತ್ತದೆ.
 
- ಒಂದು ಚಮಚ ಗಸೆಗಸೆ ಮತ್ತು ಸ್ವಲ್ಪ ಒಣಕೊಬ್ಬರಿಯನ್ನು ತೆಗೆದುಕೊಂಡು ಬಾಯಿಯಲ್ಲಿ ಜಗಿದು ಅದರ ರಸವನ್ನು ಹೀರುವುದರಿಂದ ಬಾಯಿಹುಣ್ಣು ಒಂದೇ ದಿನದಲ್ಲಿ ಕಡಿಮೆಯಾಗುತ್ತದೆ.
 
- ಚೆನ್ನಾಗಿ ಕಳೆತ ಬಾಳೆಹಣ್ಣಿಗೆ ಕೊಂಚ ಜೇನು ಸೇರಿಸಿ ಕಿವುಚಿ ಲೇಪನವನ್ನು ತಯಾರಿಸಿ ಆ ಲೇಪನವನ್ನು ದಪ್ಪವಾಗಿ ಹುಣ್ಣು ಇರುವಲ್ಲಿ ಹಚ್ಚುವುದರಿಂದ ಬಾಯಿಹುಣ್ಣು ಶಮನವಾಗುತ್ತದೆ. 
 
- ಕೊತ್ತಂಬರಿ ಸೊಪ್ಪನ್ನು ನೀರಿನಲ್ಲಿ ಕುದಿಸಿ ಅದರ ನೀರನ್ನು ಸೇವಿಸುವುದರಿಂದ ಬಾಯಿಹುಣ್ಣು ಕಡಿಮೆಯಾಗುತ್ತದೆ.
 
- ಕೊತ್ತಂಬರಿ ಕಾಳನ್ನು ನೆನೆ ಹಾಕಿದ ನೀರಿನಲ್ಲಿ ಬಾಯಿ ಮುಕ್ಕಳಿಸುವುದರಿಂದಲೂ ಬಾಯಿಹುಣ್ಣು ಕಡಿಮೆಯಾಗುತ್ತದೆ.
 
- ಮೊಸರು, ಮಜ್ಜಿಗೆ, ಹಣ್ಣಿನ ಜ್ಯೂಸ್‌ಗಳು, ತಂಪಾದ ಪಾನೀಯಗಳನ್ನು ಸೇವಿಸುವುದರಿಂದಲೂ ಬಾಯಿಹುಣ್ಣು ಕಡಿಮೆಯಾಗುತ್ತದೆ.
 
- ಬಾಯಿಹುಣ್ಣಾದಾಗ ಆದಷ್ಟು ಬಿಸಿ ಪದಾರ್ಥಗಳು, ಮಸಾಲೆ ಪದಾರ್ಥಗಳು ಮತ್ತು ಉಪ್ಪಿನಂಶದ ಪದಾರ್ಥಗಳ ಸೇವನೆಯನ್ನು ಕಡಿಮೆ ಮಾಡಿದರೆ ಬಾಯಿಹಣ್ಣು ಕಡಿಮೆಯಾಗುತ್ತದೆ.
 
- ಜೇನುತುಪ್ಪವನ್ನು ಹುಣ್ಣಿನ ಮೇಲೆ ಹಚ್ಚುವುದರಿಂದ ಅಥವಾ ಸ್ವಲ್ಪ ನೆಲ್ಲಿಕಾಯಿಯ ಪುಡಿಯನ್ನು ಜೇನುತುಪ್ಪದೊಂದಿಗೆ ಮಿಶ್ರಣ ಮಾಡಿ ಹುಣ್ಣಾದ ಜಾಗಕ್ಕೆ ಸವರುವುದರಿಂದಲೂ ಸಹ ಬಾಯಿಹುಣ್ಣು ಕಡಿಮೆಯಾಗುತ್ತದೆ.
 
- 5 ರಿಂದ 6 ತುಳಸಿ ಎಲೆಗಳನ್ನು ಬಾಯಿಯಲ್ಲಿ ರಸ ಬರುವವರೆಗೆ ಅಗಿದು ಅದರ ರಸದ ಜೊತೆಗೆ ನೀರನ್ನು ಸೇವಿಸುವುದರಿಂದ ಬಾಯಿಹುಣ್ಣು ಕಡಿಮೆಯಾಗುತ್ತದೆ.
 
- ಮೆಂತೆಕಾಳನ್ನು ರಾತ್ರಿ ಮಲಗುವ ಮುನ್ನ ಬಾಯಿಯಲ್ಲಿ ಹಾಕಿ ಜಗಿದು ನುಂಗುವುದರಿಂದಲೂ ಬಾಯಿಹುಣ್ಣು ಶಮನವಾಗುತ್ತದೆ.
 
- ಬಾಯಿಹುಣ್ಣಾದ ಸಂದರ್ಭದಲ್ಲಿ ಟೀ ಅಥವಾ ಕಾಫಿಯ ಸೇವನೆಯನ್ನು ವರ್ಜಿಸುವುದರಿಂದ ಬಾಯಿಹುಣ್ಣು ಕಡಿಮೆಯಾಗುತ್ತದೆ.
 
- ಅಲೋವೆರಾವು ಉರಿಯನ್ನು ಕಡಿಮೆ ಮಾಡುವ ನೈಸರ್ಗಿಕ ಗುಣವನ್ನು ಹೊಂದಿದೆ. ಇದು ಆಮ್ಲೀಯದ ಶೇಖರಮೆಯನ್ನು ತಡೆಗಟ್ಟಿ ದೇಹವನ್ನು ತಂಪಾಗಿಡುತ್ತದೆ. ಇದರಿಂದ ಬಾಯಿಹುಣ್ಣು ಶಮನವಾಗುತ್ತದೆ.
 
- ಕುಚ್ಚಿಲು ಅಕ್ಕಿಯನ್ನು ತೊಳೆದ ನೀರಿನಲ್ಲಿ ಬಾಯಿಯನ್ನು ಮುಕ್ಕಳಿಸುವುದರಿಂದಲೂ ಬಾಯಿಹುಣ್ಣು ಕಡಿಮೆಯಾಗುತ್ತದೆ.
 
- ಸಾಕಷ್ಟು ಔಷಧೀಯ ಗುಣಗಳನ್ನು ಹೊಂದಿರುವ ಅರಿಶಿನಪುಡಿಯನ್ನು ಹುಣ್ಣಾದ ಜಾಗಕ್ಕೆ ಪೇಸ್ಟ್ ಮಾಡಿ ಹಚ್ಚುವುದರಿಂದ ಬಾಯಿಹುಣ್ಣು ಶಮನವಾಗುತ್ತದೆ. ಜೊತೆಗೆ ಅರಿಶಿನವು ಬಾಯಿಹುಣ್ಣು ಬರದಂತೆ ತಡೆಯುತ್ತದೆ.
 
- ಕಲ್ಲುಸಕ್ಕರೆಪುಡಿಯನ್ನು ಕರ್ಪೂರದ ಪುಡಿಯೊಂದಿಗೆ ಮಿಶ್ರಣ ಮಾಡಿ ಹಚ್ಚುವುದರಿಂದ ಬಾಯಿಹುಣ್ಣು ಮತ್ತು ಅವುಗಳಿಂದಾಗುವ ಉರಿ ಹಾಗೂ ಬಾತುಕೊಳ್ಳುವುದನ್ನು ಕಡಿಮೆಯಾಗುತ್ತದೆ.
 
- ಸೀಬೆಕಾಯಿಯ ಚಿಗುರು ಎಲೆಯನ್ನು ಬಾಯಿಯಲ್ಲಿ ಹಾಕಿ ರಸವನ್ನು ನುಂಗುವುದರಿಂದಲೂ ಸಹ ಬಾಯಿಹುಣ್ಣು ಕಡಿಮೆಯಾಗುತ್ತದೆ.
 
- ತೆಂಗಿನಎಣ್ಣೆಯಲ್ಲಿಯೂ ಸಹ ನೈಸರ್ಗಿಕವಾಗಿ ಉರಿಯನ್ನು ಕಡಿಮೆ ಮಾಡುವ ಗುಣವಿದೆ. ಮಲಗುವ ಮುನ್ನ ಹುಣ್ಣಿನ ಮೇಲೆ ತೆಂಗಿನ ಎಣ್ಣೆಯನ್ನು ಹಚ್ಚುವುದರಿಂದ ಬಾಯಿಹುಣ್ಣು ಕಡಿಮೆಯಾಗುತ್ತದೆ.
 
- ಅದೇ ರೀತಿ  ಹುಣ್ಣಿನ ಮೇಲೆ ತುಪ್ಪವನ್ನು ಹಚ್ಚುವುದರಿಂದಲೂ ಬಾಯಿಹುಣ್ಣು ಕಡಿಮೆಯಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸೌತೆಕಾಯಿಯ ಸ್ಯಾಂಡ್‌ವಿಚ್