Publish Date: Fri, 28 Sep 2018 (09:21 IST)
Updated Date: Fri, 28 Sep 2018 (09:22 IST)
ಬೆಂಗಳೂರು: ನಮ್ಮ ಯುವ ಜನಾಂಗ ಎಷ್ಟೇ ಆಧುನಿಕತೆಗೆ ಒಗ್ಗಿಕೊಂಡಿದ್ದರೂ ಗರ್ಭನಿರೋಧಕಗಳ ಬಗ್ಗೆ ಹಲವು ಅನುಮಾನಗಳು, ಅಜ್ಞಾನಗಳನ್ನು ಬೆಳೆಸಿಕೊಂಡಿವೆ.
ಸಾಮಾನ್ಯವಾಗಿ ಗರ್ಭನಿರೋಧಕವಾಗಿ ಎಲ್ಲರೂ ಬಳಸುವುದು ಕಾಂಡೋಮ್ ಮತ್ತು ಮಾತ್ರೆಗಳು. ಇದರ ಹೊರತಾದ ಗರ್ಭನಿರೋಧಕ ಉಪಾಯಗಳು ಏನೇನಿವೆ ಗೊತ್ತಾ?
ಇಂಜೆಕ್ಷನ್
ಕೆಲವರಿಗೆ ಮಾತ್ರೆ ತೆಗೆದುಕೊಳ್ಳುವುದರಿಂದ ಹಾರ್ಮೋನ್ ಸಮಸ್ಯೆಗಳು ಕಾಡಬಹುದು. ಅಂತಹವರು ರಿಸ್ಕ್ ಕಡಿಮೆ ಮಾಡಿಕೊಳ್ಳಲು ಇಂಜಕ್ಷನ್ ಪಡೆದುಕೊಳ್ಳಬಹುದು. ಇದರಲ್ಲಿ ಮಾತ್ರೆಗೆ ಹೋಲಿಸಿದರೆ ಅಡ್ಡ ಪರಿಣಾಮ ಕಡಿಮೆ. ಹಾಗೆಯೇ ಕೆಲವು ತಿಂಗಳವರೆಗೆ ಸುರಕ್ಷಿತವಾಗಿರಬಹುದು.
ಐಯುಡಿ
ಇದು ಹಾರ್ಮೋನ್ ಹೊರತಾದ ಟಿ ಶೇಪ್ ವಸ್ತುವಾಗಿದ್ದು, ಇದನ್ನು ಗರ್ಭಾಶಯಕ್ಕೆ ಅಳವಡಿಸಿಕೊಳ್ಳುವುದರಿಂದ ಗರ್ಭಿಣಿಯಾಗುವ ಅಪಾಯವಿರಲ್ಲ.
ವೆಜೈನಲ್ ರಿಂಗ್
ಹಾರ್ಮೋನ್ ಫಿಲ್ ಆಗಿರುವ ವೆಜೈನಲ್ ರಿಂಗ್ ನ್ನು ಅಳವಡಿಸಿ ರಕ್ತಕಣಗಳಿಂದ ಹಾರ್ಮೋನ್ ಗಳನ್ನು ನೇರವಾಗಿ ಹೀರಿಕೊಳ್ಳುವ ಕೆಲಸ ಮಾಡುತ್ತದೆ. ಇದರಲ್ಲಿ ಮಾತ್ರೆಗಳಷ್ಟು ಅಡ್ಡಪರಿಣಾಮಗಳಿಲ್ಲ.
ಹಾಗಿದ್ದರೂ ಯಾವುದೇ ಉಪಾಯ ಮಾಡುವ ಮೊದಲು ತಜ್ಞ ವೈದ್ಯರ ಸಲಹೆ ಪಡೆಯುವುದು ಅಗತ್ಯ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.