Publish Date: Fri, 28 Sep 2018 (09:18 IST)
Updated Date: Fri, 28 Sep 2018 (09:19 IST)
ಬೆಂಗಳೂರು: ಗರ್ಭಿಣಿಯಾಗಲು ಬಯಸುವವರು ಮತ್ತು ಸದ್ಯಕ್ಕೆ ಮಗುವಾಗದಂತೆ ತಡೆಯಬೇಕೆಂದು ಬಯಸುವವರಿಗೆ ತಮ್ಮ ಫಲಪ್ರದ ದಿನಗಳನ್ನು ತಿಳಿಯುವುದು ಕಷ್ಟವೇ.
ಇದು ತಾಂತ್ರಿಕ ಯುಗ. ಈಗ ಮಹಿಳೆಯರ ಫಲಪ್ರದ ದಿನ ತಿಳಿಯಲೂ ಆಪ್ ಗಳು ಬಂದಿದ್ದು ಅವು ಯಾವುವು ಹೇಗೆ ಕೆಲಸ ಮಾಡುತ್ತವೆ ನೋಡೋಣ.
ಡಾಟ್
ಡಾಟ್ ಆಪ್ ನಿಮ್ಮ ಋತುಮತಿಯಾದ ದಿನದ ಲೆಕ್ಕಾಚಾರದ ಅನುಸಾರ ಯಾವ ದಿನದಲ್ಲಿ ಅಂಡಾಣು ಬಿಡುಗಡೆಯಾಗುತ್ತವೆ, ಯಾವ ದಿನ ಫಲಪ್ರದ, ಯಾವ ದಿನ ರಿಸ್ಕ್ ಎಂದೆಲ್ಲಾ ಲೆಕ್ಕಾಚಾರ ಹಾಕಿ ನಿಖರವಾದ ಮಾಹಿತಿ ನಿಮಗೆ ನೀಡುತ್ತದೆ.
ಕ್ಲೂ
ಈ ಆಪ್ ನಿಮ್ಮ ಫಲವಂತಿಕೆ ದಿನ ಹೇಳುವುದು ಮಾತ್ರವಲ್ಲದೆ, ಯಾವ ದಿನ ನಿಮ್ಮ ಮೂಡ್ ಹೆಚ್ಚಿರುತ್ತದೆ, ದೈಹಿಕವಾಗಿ ಸಿದ್ಧರಾಗಿದ್ದೀರಿ ಎಂಬುದನ್ನೂ ಹೇಳುತ್ತದೆ.
ಗ್ಲೋ
ಈ ಆಪ್ ಗರ್ಭಿಣಿಯಾಗಲು ಟ್ರೀಟ್ ಮೆಂಟ್ ಪಡೆಯುತ್ತಿರುವವರಿಗೂ ಅನುಕೂಲ. ಯಾವ ದಿನ ನೀವು ಟ್ರೀಟ್ ಮೆಂಟ್ ಗೆ ಹೋಗಬೇಕು, ಯಾವ ದಿನ ನಿಮಗೆ ಫಲಪ್ರದ ಎಂಬುದನ್ನು ಇದು ಸೂಚಿಸುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.