Select Your Language

Notifications

webdunia
webdunia
webdunia
webdunia

ಕೀಲು, ಮಂಡಿ ನೋವು ಸಮಸ್ಯೆ ಇರುವವರು ಈ ಕಷಾಯ ಕುಡಿಯಿರಿ

ಕೀಲು, ಮಂಡಿ ನೋವು ಸಮಸ್ಯೆ ಇರುವವರು ಈ ಕಷಾಯ ಕುಡಿಯಿರಿ
ಬೆಂಗಳೂರು , ಭಾನುವಾರ, 29 ಏಪ್ರಿಲ್ 2018 (06:40 IST)
ಬೆಂಗಳೂರು : ನಮ್ಮಲ್ಲಿ ದೈಹಿಕ ಸಮಸ್ಯೆಗಳು ಒಂದಲ್ಲ ಒಂದು ರೀತಿಯಲ್ಲಿ ಬರುತ್ತಿರುತ್ತವೆ ಅವುಗಳನ್ನು ಹೋಗಲಾಡಿಸಲು ನಿಮ್ಮ ಮನೆಯಲ್ಲಿಯೇ ಸುಲಭವಾಗಿ ಸಿಗುವಂತ ಮನೆ ಮದ್ದು ನಿಮ್ಮ ಸಹಾಯಕ್ಕೆ ಬರುತ್ತದೆ. ನೀವು ಹಲವು ದಿನಗಳಿಂದ ಇಂತಹ ಕೀಲು ನೋವು ಮಂಡಿ ನೋವು ಸಮಸ್ಯೆಯಿಂದ ಬಳಲುತ್ತಿದ್ದೀರಾ ಎಂದರೆ ಈ ವಿಧಾನವನ್ನು ಮಾಡಿ ನೋಡಿ ಅವುಗಳಿಂದ ಮುಕ್ತರಾಗಿ.


ಪಾರಿಜಾತ ಗಿಡದಎಲೆಗಳನ್ನು 6, 7 ರಷ್ಟು ತೆಗೆದುಕೊಂಡು ನುಣ್ಣಗೆ ಫೇಸ್ಟ್ ಮಾಡಿಕೊಳ್ಳಬೇಕು. ಅದನ್ನು ಒಂದು ಗ್ಲಾಸ್ ನೀರಿನಲ್ಲಿ ಚೆನ್ನಾಗಿ ಕುದಿಸಬೇಕು. ಆ ನೀರು ಅರ್ಧ ಆಗುವವರೆಗೂ ಕಷಾಯದಂತೆ ಮಾಡಿಕೊಳ್ಳಬೇಕು. ಆ ಕಷಾಯವನ್ನು ರಾತ್ರಿಯೆಲ್ಲ ಹಾಗೆಯೇ ಇಟ್ಟು ಬೆಳಿಗ್ಗೆ ತಣ್ಣಗೆ ಇರುವಾಗಲೇ ಕುಡಿಯಬೇಕು.


ಪಾರಿಜಾತ ಎಲೆಗಳ ಕಷಾಯವು, ರುಮಟಾಯಿಡ್, ಅರ್ಥರೈಟಿಸ್ ನೋವುಗಳಿಗೆ ಉತ್ತಮವಾದ ಔಷಧವಾಗಿ ಕೆಲಸ ಮಾಡುತ್ತದೆ. ಇದನ್ನು ತಯಾರಿಮಾಡಿಕೊಂಡು ಪ್ರತಿದಿನ ತೆಗೆದುಕೊಂಡರೆ ಕೇವಲ 30 ರಿಂದ 40 ದಿನಗಳಲ್ಲೇ ಎಂತಹ ಕೀಲು ನೋವು ವಾಸಿಯಾಗುತ್ತದೆ. ಮೂಳೆಗಳಲ್ಲಿ ಸವೆದುಹೋಗಿರುವ ಕಾರ್ಟಿಲೆಜ್ ಎಂಬ ಅಂಶ ಮತ್ತೆ ಉತ್ಪತ್ತಿಯಾಗುತ್ತದೆ.


ಅವುಗಳಲ್ಲದೆ ಈ ಔಷಧವು ಡೆಂಗಿ ಜ್ವರಕ್ಕೂ ಸಹ ಉಪಯುಕ್ತವಾದದ್ದು. ಡೆಂಗಿ ಕಾರಣವಾಗಿ ಬರುವ ಮೈ ನೋವುಗಳು ಗುಣಮುಖವಾಗಬೇಕೆಂದರೆ ಈ ಔಷಧವನ್ನು ಕುಡಿಯಬೇಕಾಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮದರಂಗಿಯ ರಂಗು ಮಾಸದಿರಲು ಈ ಟಿಪ್ಸ್ ಅನುಸರಿಸಿ