Publish Date: Wed, 06 Dec 2017 (07:16 IST)
Updated Date: Wed, 06 Dec 2017 (07:18 IST)
ಬೆಂಗಳೂರು: ನಿಮ್ಮ ಸಂಗಾತಿ ಜತೆ ಎಷ್ಟು ಬಾರಿ ಲೈಂಗಿಕ ಕಾಮನೆ ಪೂರೈಸುತ್ತೀರಿ ಎಂಬುದು ಎಷ್ಟು ಮುಖ್ಯವೋ, ಅದಕ್ಕೆ ನೀವು ಎಷ್ಟು ತಯಾರಾಗಿದ್ಧೀರಿ ಎಂಬುದೂ ಅಷ್ಟೇ ಮುಖ್ಯ. ಸೆಕ್ಸ್ ಗೂ ಮುನ್ನ ವಹಿಸಬೇಕಾದ ಮುನ್ನಚ್ಚರಿಕೆಗಳು ಇವು.
ಸೆಕ್ಸ್ ಗೂ ಮುನ್ನ ಬಾಯಿ ಚೆನ್ನಾಗಿ ತೊಳೆದುಕೊಳ್ಳಿ. ಬಾಯಿ ಕೆಟ್ಟ ವಾಸನೆ ಬೀರುತ್ತಿದ್ದರೆ, ಅಲ್ಲಿ ಮಧುರ ಭಾವನೆಗಿಂತ ಮುಖ ಸಿಂಡರಿಸುವ ಸಂಭವವೇ ಹೆಚ್ಚು. ಹಾಗೆಯೇ ಬೆವರು ವಾಸನೆ ಬರದಂತೆ ನೋಡಿಕೊಳ್ಳುವುದೂ ಮುಖ್ಯ.
ಸುರಕ್ಷಿತ ಲೈಂಗಿಕ ಸಂಪರ್ಕ ಆರೋಗ್ಯಕ್ಕೂ ಉತ್ತಮ. ಹಾಗಾಗಿ ಗುಪ್ತಾಂಗಗಳ ಶುಚಿತ್ವಕ್ಕೆ ಮಹತ್ವ ಕೊಡಿ. ಇದರಿಂದ ಇಬ್ಬರೂ ಆರೋಗ್ಯವಾಗಿರಬಹುದು. ನಿಮ್ಮ ಹಾಗೆಯೇ ನಿಮ್ಮ ಕೊಠಡಿಯ ಶುಚಿತ್ವವೂ ಮುಖ್ಯವಾಗಿರುತ್ತದೆ. ಇದೆಲ್ಲದರ ಬಗ್ಗೆಯೂ ಒಮ್ಮೆ ಯೋಚಿಸಿ!
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ