ಬೆಂಗಳೂರು: ಮದುವೆಯಾಯಿತು ಎಂದರೆ ಕೆಲವರು ತಮ್ಮ ಸ್ವಭಾವಗಳನ್ನೇ ಬದಲಾಯಿಸಿಕೊಳ್ಳುತ್ತಾರೆ. ಆದರೆ ಮದುವೆಯಾದ ಮೇಲೂ ಸಂಗಾತಿಗೆ ಆಗಾಗ ಈ ಒಂದು ಶಬ್ಧ ಹೇಳುತ್ತಿದ್ದರೆ ನಿಮ್ಮ ನಡುವೆ ಪ್ರೀತಿ ಹೆಚ್ಚುತ್ತದೆ ಎನ್ನುತ್ತಾರೆ ತಜ್ಞರು!
ಐ ಲವ್ ಯೂ ಎನ್ನುವ ಮ್ಯಾಜಿಕಲ್ ಶಬ್ಧವನ್ನು ಸಂಗಾತಿ ಅದರಲ್ಲೂ ಹೆಣ್ಣು ಮಕ್ಕಳು ತಮ್ಮ ಸಂಗಾತಿಯಿಂದ ಕೇಳಿಸಿಕೊಳ್ಳಲು ಬಯಸುತ್ತಾರೆ. ಮದುವೆಯಾದ ಮೇಲೆ ಲವ್ ಲೈಫ್ ಮುಂದುವರಿಸಿದರೆ ಆ ದಂಪತಿಗಳ ಜೀವನ ಚೆನ್ನಾಗಿರುತ್ತದೆ. ಆಗಾಗ ಇಷ್ಟವಾಗುವ ಕೆಲಸ ಮಾಡಿದಾಗ, ಭಾವುಕರಾಗಿದ್ದಾಗ ಒಬ್ಬರ ಕಣ್ಣಲ್ಲಿ ಒಬ್ಬರು ಕಣ್ಣು ನೆಟ್ಟು ಐ ಲವ್ ಯೂ ಎಂದು ಹೇಳುತ್ತಿದ್ದರೆ ಇಬ್ಬರ ನಡುವಿನ ಸಂಬಂಧ ಗಟ್ಟಿಯಾಗುತ್ತದೆ.