Publish Date: Fri, 01 Jun 2018 (09:01 IST)
Updated Date: Fri, 01 Jun 2018 (09:02 IST)
ಬೆಂಗಳೂರು: ಸೆಕ್ಸ್ ಮಾಡುವಾಗ ಕೆಲವೊಂದು ವಿಚಾರಗಳ ಬಗ್ಗೆ ನೀವು ಎಚ್ಚರವಾಗಿರಬೇಕಾದುದು ತುಂಬಾ ಮುಖ್ಯ. ಇದರಿಂದ ಸೆಕ್ಸ್ ಎನ್ನುವುದು ಸುಮಧುರ, ಸುಖಕರ ಆಗಬಹುದು. ಅವು ಯಾವುವು ನೋಡೋಣ.
ಸೀದಾ ಕೊನೆ ಮುಟ್ಟದಿರಿ!
ಬೇಗನೇ ಅಂತ್ಯ ಹಾಡುವ ಅವಸರದಲ್ಲಿ ಅಂತಿಮ ಘಟ್ಟಕ್ಕೆ ಮೊದಲೇ ಹೋಗಬೇಡಿ. ಮೊದಲು ಕೊಂಚ ರೊಮ್ಯಾಂಟಿಕ್ ಆಗಿ ಸಂಗಾತಿಯನ್ನು ಒಲಿಸಿಕೊಳ್ಳುವ ಪ್ರಯತ್ನ ಮಾಡಿ. ನಂತರವೇ ಕೊನೆಯ ಕೆಲಸ!
ಸಿನಿಮಾ ಅಲ್ಲ!
ನಿಜ ಜೀವನಕ್ಕೂ ಸಿನಿಮಾಕ್ಕೂ ವ್ಯತ್ಯಾಸವಿದೆ. ಸಿನಿಮಾದಲ್ಲಿ ತೋರಿಸುವಂತೆ ನಿಜ ಜೀವನದಲ್ಲೂ ರೊಮ್ಯಾನ್ಸ್ ಇರಬೇಕೆಂದು ಬಯಸದಿರಿ. ಇದರಿಂದ ಸಂಗಾತಿಗೆ ನೋವಾಗಬಹುದು ಅಥವಾ ಕೆಲವೊಮ್ಮೆ ಕಿರಿ ಕಿರಿ ಆಗಬಹುದು.
ಮೌನ ಬೇಡ
ಸೆಕ್ಸ್ ಸಂದರ್ಭದಲ್ಲಿ ನಿಮ್ಮ ಇಷ್ಟ, ಕಷ್ಟಗಳನ್ನು ಹಂಚಿಕೊಳ್ಳಲೇಬೇಕು. ಜತೆಗೆ ಸ್ವಲ್ಪ ರೊಮ್ಯಾಂಟಿಕ್ ಮಾತುಗಳೂ ಇದ್ದರೆ ಸೆಕ್ಸ್ ಸುಮಧುರವಾಗಿರುತ್ತದೆ. ಮೌನವಾಗಿದ್ದರೆ ಇಲ್ಲಿ ಸಂಗಾತಿಗೆ ಉತ್ಸಾಹ ಬರದು!
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.