Select Your Language

Notifications

webdunia
webdunia
webdunia
webdunia

ಈ ವಸ್ತುಗಳನ್ನು ತಪ್ಪಿಯೂ ಫ್ರಿಡ್ಜ್ ನಲ್ಲಿಡಬೇಡಿ!

ಈ ವಸ್ತುಗಳನ್ನು ತಪ್ಪಿಯೂ ಫ್ರಿಡ್ಜ್ ನಲ್ಲಿಡಬೇಡಿ!
ಬೆಂಗಳೂರು , ಭಾನುವಾರ, 28 ಅಕ್ಟೋಬರ್ 2018 (09:29 IST)
ಬೆಂಗಳೂರು: ಮನೆಗೆ ತಂದ ಸಾಮಾನು ವಸ್ತುಗಳನ್ನು ಹಾಳಾಗದಂತೆ ಸಂರಕ್ಷಿಸಿಡಲು ಬಳಸುವ ಯಂತ್ರವೆಂದರೆ ಫ್ರಿಡ್ಜ್. ಆದರೆ ಎಲ್ಲಾ ವಸ್ತುಗಳನ್ನು ಫ್ರಿಡ್ಜ್ ನಲ್ಲಿಡುವುದೂ ಒಳ್ಳೆಯದಲ್ಲ. ಅವು ಯಾವುವು ನೋಡೋಣ.

ಕಾಫಿ
ಕಾಫಿ ಪೌಡರ್ ತಂದಿದ್ದು ಹೆಚ್ಚಾಯ್ತೆಂದು ಫ್ರಿಡ್ಜ್ ನಲ್ಲಿಡಬೇಡಿ. ಕಾಫಿ ಪೌಡರ್ ಒಣ, ಬೆಚ್ಚಗಿನ ಪರಿಸರದಲ್ಲಿ ಸಂರಕ್ಷಿಸಿಟ್ಟರೇ ಹೆಚ್ಚು ಸಮಯ ಉಳಿಯುವುದು.

ಬ್ರೆಡ್
ಬ್ರೆಡ್ ಬೇಗನೇ ಹಾಳಾಗುತ್ತದೆ. ಆದರೆ ಇದನ್ನು ತಂಪಾದ ವಾತಾವರಣದಲ್ಲಿಟ್ಟರೆ ಮತ್ತಷ್ಟು ಒಣಗಿ, ತಿನ್ನಲು ಸಾಧ್ಯವಾಗದು.

ಟೊಮೆಟೊ
ಸಾಮಾನ್ಯವಾಗಿ ನಾವೆಲ್ಲರೂ ಈ ತಪ್ಪು ಮಾಡುತ್ತೇವೆ. ಟೊಮೆಟೋ ಹಣ್ಣನ್ನು ಫ್ರಿಡ್ಜ್ ನಲ್ಲಿಟ್ಟರೆ ಅದರ ಪೋಷಕಾಂಶ ನಷ್ಟವಾಗುವುದಷ್ಟೇ ಅಲ್ಲದೆ, ನಿಜವಾದ ರುಚಿ ಕೆಡುತ್ತದೆ.

ಜೇನು ತುಪ್ಪ
ಜೇನು ತುಪ್ಪವನ್ನು ಫ್ರಿಡ್ಜ್ ನಲ್ಲಿ ಸಂರಕ್ಷಿಸಿಡುವ ಅಗತ್ಯವಿಲ್ಲ. ಇದಕ್ಕೆ ನೈಸರ್ಗಿಕ ಹವಾಗುಣದಲ್ಲಿ ತನ್ನನ್ನು ತಾನು ಹಾಳಾಗದಂತೆ ಉಳಿಸಿಕೊಳ್ಳುವ ಸಾಮರ್ಥ್ಯವಿದೆ.

ಕೆಚಪ್
ಕೆಚಪ್ ಗಳು ಹಾಳಾಗದಂತೆ ಸಂರಕ್ಷಿಸಿಡಲು ತಯಾರಕರು ಸಾಕಷ್ಟು ಪ್ರಮಾಣದಲ್ಲಿ ಪ್ರಿಸರ್ವೇಟಿವ್ ಹಾಕಿರುತ್ತಾರೆ. ಇದನ್ನು ಮತ್ತೆ ಫ್ರಿಡ್ಜ್ ನಲ್ಲಿಡಬೇಕಾಗಿಲ್ಲ.

ಕಿತ್ತಳೆ
ಆರೆಂಜ್ ಅಥವಾ ಕಿತ್ತಳೆ ಹಣ್ಣಿನಂತಹ ಸಿಟ್ರಿಕ್ ಅಂಶ ಹೆಚ್ಚಿರುವ ಹಣ್ಣುಗಳನ್ನು ಫ್ರಿಡ್ಜ್ ನಲ್ಲಿಟ್ಟಾಗ ಅದರ ನೈಸರ್ಗಿಕ ಬಣ್ಣ ಕಳೆದುಕೊಳ್ಳುತ್ತವೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಮಾವಿನಕಾಯಿ ಗೊಜ್ಜಿನ ಅನ್ನ