ಭಾರತದ ಯುವಪೀಳಿಗೆಯಲ್ಲಿ ಇತ್ತೀಚೆಗೆ ಡಯಾಬಿಟಿಸ್ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. 45ರಿಂದ 50 ವರ್ಷ ದಾಟಿದವರಲ್ಲಿ ಜಾಸ್ತಿಯಾಗಿ ಕಾಣಿಸಿಕೊಳ್ಳುತ್ತಿದ್ದ ಸಕ್ಕರೆ ಕಾಯಿಲೆ ಈಗ ಮಕ್ಕಳಲ್ಲಿ ಕೂಡ ಕಾಣಿಸಿಕೊಳ್ಳತೊಡಗಿದೆ.ಎಳೆ ವಯಸ್ಸಿನಲ್ಲೇ ಮಕ್ಕಳಲ್ಲಿ ಡಯಾಬಿಟಿಸ್ ಅಥವಾ ಮಧುಮೇಹ ಕಾಣಿಸಿಕೊಳ್ಳಲು ಕಾರಣವೇನು? ಎಂಬ ಬಗ್ಗೆ ಇಲ್ಲಿದೆ ಮಾಹಿತಿ. ಪುಣೆಯ 700ಕ್ಕೂ ಹೆಚ್ಚು ಕುಟುಂಬಗಳನ್ನು ಅಧ್ಯಯನಕ್ಕೆ ಒಳಪಡಿಸಿದ ಸಂಶೋಧನಾ ತಂಡವೊಂದು ಆ ಕುಟುಂಬಗಳ ಅನೇಕ ವ್ಯಕ್ತಿಗಳಲ್ಲಿ ಬಾಲ್ಯದಲ್ಲಿಯೇ ಹೆಚ್ಚಿನ ಗ್ಲೂಕೋಸ್ನ ಮಟ್ಟವನ್ನು ಪತ್ತೆಹಚ್ಚಿದೆ.