Webdunia - Bharat's app for daily news and videos

Install App

ಬೊಜ್ಜು ಪುರುಷರ ಬಂಜೆತನಕ್ಕೆ ಕಾರಣವಾಗುತ್ತದೆಯೇ? ಇಲ್ಲಿದೆ ಉತ್ತರ

Webdunia
ಶುಕ್ರವಾರ, 23 ಫೆಬ್ರವರಿ 2018 (06:47 IST)
ಬೆಂಗಳೂರು : ಬಂಜೆತನವು ಮಹಿಳೆಯರನ್ನು ಮಾತ್ರ ಕಾಡುತ್ತದೆ ಎಂಬುದು ತಪ್ಪುಕಲ್ಪನೆ. ಪುರುಷರಲ್ಲಿಯೂ ಬಂಜೆತನದ ಸಮಸ್ಯೆ ಕಾಡುತ್ತದೆ. ಹಾಗೇ  ಪುರುಷರ ಬಂಜೆತನಕ್ಕೆ ಬೊಜ್ಜು ಕೂಡ ಒಂದು ಕಾರಣವಾಗಬಲ್ಲುದು.


ತಜ್ಞರ ಪ್ರಕಾರ ಬಂಜೆತನವಿರುವ ದಂಪತಿಯಲ್ಲಿ ಶೇ.೪೦- ೪೫ರಷ್ಟು  ಸಮಸ್ಯೆಯು ಪುರುಷರಲ್ಲಿ ಕಂಡುಬರುತ್ತದೆ. ಪುರುಷರ ಪ್ರಜನನ ಸಾಮರ್ಥ್ಯವನ್ನು ಬೊಜ್ಜು ಹಲವು ರೀತಿಯಲ್ಲಿ ಬಾಧಿಸುತ್ತದೆ. ಇದು ದೈಹಿಕ ವಂಶವಾಹಿ ಸಂಬಂಧಿತ ಅಥವಾ ಹಾರ್ಮೋನು ಸಮಸ್ಯೆಯ ರೂಪದಲ್ಲಿ ಕಾಡಬಹುದು. ದೈಹಿಕವಾಗಿ ಇದು ನಿಮಿರುವಿಕೆ ದೌರ್ಬಲ್ಯ ಸಮಸ್ಯೆ ಅಥವಾ ಸ್ಖಲನ ದೌರ್ಬಲ್ಯ ಸಮಸ್ಯೆಯ ಮೂಲಕ ಬಂಜೆತನಕ್ಕೆ ಕಾರಣವಾಗಬಹುದು. ಬೊಜ್ಜುತನದಿಂದ ಒತ್ತಡಕ್ಕೆ ಒಳಗಾಗುವ ಪುರುಷರಲ್ಲಿ ವಿರ್ಯಾದ ಗುಣಮಟ್ಟವೂ ಕಳಪೆಯಾಗಬಹುದು. ಅಲ್ಲದೆ, ಹಾರ್ಮೋನಿನ ಅಸಮತೋಲನ (ಕಡಿಮೆಯಾದ ಟೆಸ್ಟೊಸ್ಟೆರಾನ್ ಮತ್ತು ಅತಿಯಾದ ಈಸ್ಟ್ರಾಡಿಯೋಲ್) ಉಂಟುಮಾಡಿ ಲೈಂಗಿಕ ಬಯಕೆಯನ್ನು ಕುಂಠಿತಗೊಳಿಸಬಹುದು. ಬೊಜ್ಜಿನಿಂದಾಗಿ ಗಂಡಸರಲ್ಲಿ ಅತಿಯಾದ ರಕ್ತದೊತ್ತಡ, ಮಧುಮೇಹ, ಕೊಲೆಸ್ಟೆರಾಲ್, ಹೃದಯದ ಸಮಸ್ಯೆ ಉಂಟಾಗಿ ಅವೂ ಬಂಜೆತನಕ್ಕೆ ಕಾರಣವಾಗಬಹುದು.



ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕಲ್ಲಂಗಡಿ ಹಣ್ಣನ್ನು ಫ್ರಿಡ್ಜ್ ನಲ್ಲಿಟ್ಟು ಸೇವಿಸುತ್ತಿದ್ದೀರೆ ಇದನ್ನು ಓದಿ

ಪೇಟೆಯಿಂದ ತಂದ ಮಾವಿನ ಹಣ್ಣು ಸೇವಿಸುವ ಮೊದಲು ಈ ಟಿಪ್ಸ್ ಫಾಲೋ ಮಾಡಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ಮುಂದಿನ ಸುದ್ದಿ