Select Your Language

Notifications

webdunia
webdunia
webdunia
webdunia

ಕುತ್ತಿಗೆ ನೋವಿನಿಂದ ನರಳುತ್ತಿದ್ದೀರಾ? ಹಾಗಾದ್ರೆ ಈ ಮನೆಮದ್ದನ್ನು ಬಳಸಿ

ಕುತ್ತಿಗೆ ನೋವಿನಿಂದ ನರಳುತ್ತಿದ್ದೀರಾ? ಹಾಗಾದ್ರೆ ಈ ಮನೆಮದ್ದನ್ನು ಬಳಸಿ
ಬೆಂಗಳೂರು , ಶುಕ್ರವಾರ, 7 ಡಿಸೆಂಬರ್ 2018 (07:17 IST)
ಬೆಂಗಳೂರು : ಕೆಲವರು ಒಂದೇ ಸ್ಥಳದಲ್ಲಿ ಹೆಚ್ಚು ಹೊತ್ತು ಕುಳಿತುಕೊಂಡು ಕೆಲಸ ಮಾಡುವವರಿಗೆ ಹೆಚ್ಚಾಗಿ ಕುತ್ತಿಗೆ ನೋವು ಕಣಿಸಿಕೊಳ್ಳುತ್ತದೆ. ಇದರಿಂದ ಕುತ್ತಿಗೆಯನ್ನು ಆ ಕಡೆ ಈ ಕಡೆ ತಿರುಗಲು ಕಷ್ಟವಾಗುತ್ತದೆ. ಅಂತವರು ಈ ಮನೆಮದ್ದನ್ನು ಬಳಸಿ ನೋವನ್ನು ನಿವಾರಿಸಿಕೊಳ್ಳಿ.

ಬೇವಿನ ಹೂವಿರುವ ಸೊಪ್ಪನ್ನು ತಂದು ಜಜ್ಜಿ ಪೇಸ್ಟ್ ಮಾಡಿಕೊಳ್ಳಿ. ಇದನ್ನು ಬೆಳಿಗ್ಗೆ ಹಾಗೂ ಸಂಜೆ  ಖಾಲಿ ಹೊಟ್ಟೆಯಲ್ಲಿ ತಿಂದು ಒಂದು ಗ್ಲಾಸ್ ಬಿಸಿನೀರು ಕುಡಿಯಿರಿ. ಇದನ್ನು 2-3 ತಿಂಗಳು ಪ್ರತಿದಿನ ಮಾಡಿ. ಹೀಗೆ ಮಾಡುವುದರಿಂದ ಈ ತರಹದ ಕುತ್ತಿಗೆ ನೋವು ಮುಂದೆ ಕಾಣಿಸುವುದಿಲ್ಲ.

 

1 ಟೀ ಸ್ಪೂನ್ ತುಳಸಿ ರಸ,  1 ಟೀ ಸ್ಪೂನ್ ಹಸುವಿನ ತುಪ್ಪ, 1ಟೀ ಸ್ಪೂನ್ ಕಾಳುಮೆಣಸಿನ ಪುಡಿ ಮೂರನ್ನು ಮಿಕ್ಸ್ ಮಾಡಿಕೊಂಡು ಬೆಳಿಗ್ಗೆ ಹಾಗೂ ಸಂಜೆ  ಖಾಲಿ ಹೊಟ್ಟೆಯಲ್ಲಿ ತಿಂದು ಒಂದು ಗ್ಲಾಸ್ ಬಿಸಿನೀರು ಕುಡಿಯಿರಿ. ಇದನ್ನು 2-3 ತಿಂಗಳು ಪ್ರತಿದಿನ ಮಾಡಿ.

 

ಇದರ ಜೊತೆಗೆ ಮನೆಯಲ್ಲೇ ತಯಾರಿಸಿದ  ಈ ಆಯಿಲ್ ನಿಂದ ಕುತ್ತಿಗೆ ಮಸಾಜ್ ಮಾಡಬೇಕು. ಕರ್ಪೂರ 1 ಟೀ ಸ್ಪೂನ್ ಅಥವಾ ಬೆಳ್ಳುಳ್ಳಿ 5 ಎಸಳು ಇವೆರಡರಲ್ಲಿ ಒಂದನ್ನು 50 ಗ್ರಾಂ ಎಳ್ಳೆಣ್ಣೆ ಜೊತೆ ಬಿಸಿ ಮಾಡಿಕೊಳ್ಳಿ. ನಂತರ  ಅದನ್ನು ತಣ್ಣಗಾಗಿಸಿಕೊಂಡು ಕುತ್ತಿಗೆ ನೋವು ಇರುವ ಜಾಗದಲ್ಲಿ  ಹಚ್ಚಿ15-20 ನಿಮಿಷ ಮಸಾಜ್ ಮಾಡಿ ಅರ್ಧಗಂಟೆ ಬಿಟ್ಟು ಬಿಸಿ ನೀರಲ್ಲಿ ಸ್ನಾನ ಮಾಡಿ. ಇದನ್ನು ದಿನದಲ್ಲಿ ಒಂದು ಬಾರಿ ಯಾವ ಸಮಯದಲ್ಲಾದರೂ ಮಾಡಬಹುದು.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಮಹಿಳೆಯರ ಗುಪ್ತಾಂಗದ ಆರೋಗ್ಯಕ್ಕೆ ಈ ಆಹಾರಗಳ ಸೇವನೆ ಒಳ್ಳೆಯದು