Select Your Language

Notifications

webdunia
webdunia
webdunia
webdunia

ಗಂಟೆಗಟ್ಟಲೆ ಒಂದೇ ಸ್ಥಳದಲ್ಲಿ ಕುಳಿತು ಕೆಲಸ ಮಾಡುತ್ತಿದ್ದೀರಾ?

ಗಂಟೆಗಟ್ಟಲೆ ಒಂದೇ ಸ್ಥಳದಲ್ಲಿ ಕುಳಿತು ಕೆಲಸ ಮಾಡುತ್ತಿದ್ದೀರಾ?
ಬೆಂಗಳೂರು , ಗುರುವಾರ, 12 ಆಗಸ್ಟ್ 2021 (13:09 IST)
ಕೋವಿಡ್-19ನಿಂದ ಜನರು 8 ಗಂಟೆಗಳಿಗಿಂತ ಹೆಚ್ಚು ಸಮಯ ಒಂದೇ ಸ್ಥಳದಲ್ಲಿ ಕುಳಿತು ಕೆಲಸ ಮಾಡುತ್ತಿದ್ದಾರೆ. ಇದರಿಂದಾಗಿ ಅವರು ಹಲವಾರು ಆರೋಗ್ಯ ಸಮಸ್ಯೆ ಹೊಂದಿದ್ದಾರೆ ಹಾಗೂ ಅವರ ಈ ಅಭ್ಯಾಸವು ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರಿದೆ ಎಂದು ಯುನೈಟೆಡ್ ಕಿಂಗ್ಡಂನ ಹಡರ್ಸ್ಫೀಲ್ಡ್ ವಿಶ್ವವಿದ್ಯಾನಿಲಯದ ಸಂಶೋಧಕರು ನಡೆಸಿದ ಅಧ್ಯಯನದಿಂದ ತಿಳಿದುಬಂದಿದೆ.

ಕೋವಿಡ್ನಿಂದಾಗಿ ಜಿಮ್, ಉದ್ಯಾನವನಗಳಂತಹ ಸಾರ್ವಜನಿಕ ಸ್ಥಳಗಳನ್ನು ಸ್ಥಗಿತಗೊಂಡಿವೆ. ಅಲ್ಲದೆ, ವಾಕಿಂಗ್, ಜಾಗಿಂಗ್ ಅಥವಾ ಸೈಕ್ಲಿಂಗ್ನಂತಹ ಇತರ ಹೊರಾಂಗಣ ಚಟುವಟಿಕೆಗಳು ಮಾಡಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಜನರಲ್ಲಿ ಆರೋಗ್ಯ ಸಮಸ್ಯೆ ಮತ್ತಷ್ಟು ಹೆಚ್ಚಾಗಿದೆ. ಈ ಹಿನ್ನೆಲೆ ಮನೆಯಲ್ಲಿ ತಮ್ಮ ಫಿಟ್ನೆಸ್ ಚಟುವಟಿಕೆಗಳ ಕಡೆ ಗಮನ ನೀಡಿ ಎಂದು ವೈದ್ಯರು ಸಲಹೆ ನೀಡುತ್ತಾರೆ.
ಮನೆಯಿಂದ ಕೆಲಸ ಮಾಡುವಾಗ ಅನುಸರಿಸಬೇಕಾದ 5 ಆರೋಗ್ಯ ಸಲಹೆಗಳು
ನಿಮ್ಮ ಕೆಲಸ ಪ್ರಾರಂಭಿಸುವ ಮೊದಲು
ನೀವು, ನಿಮ್ಮ ದಿನವನ್ನು ಶಾಂತಿಯುತವಾಗಿ ಹಾಗೂ ನಿರಾಳವಾದ ಮನಸ್ಸಿನಿಂದ ಆರಂಭಿಸಬೇಕು. ಪ್ರಾಣಾಯಾಮದಂತಹ ಕೆಲವು ಉಸಿರಾಟದ ವ್ಯಾಯಾಮಗಳನ್ನು ರೂಢಿಸಿಕೊಳ್ಳಿ. ಈ ಅಭ್ಯಾಸವು ನಿಮ್ಮ ಒತ್ತಡವನ್ನು ಕಡಿಮೆ ಮಾಡುತ್ತದೆ ಹಾಗೂ ರಕ್ತದೊತ್ತಡ, ಹೃದಯ ಬಡಿತ ಮತ್ತು ಖಿನ್ನತೆಯ ಅಪಾಯಗಳನ್ನು ಕಡಿಮೆ ಮಾಡುತ್ತದೆ. ಈ ವ್ಯಾಯಾಮಗಳು ಮಧುಮೇಹದ ಲಕ್ಷಣಗಳನ್ನು ಉತ್ತಮಗೊಳಿಸುತ್ತದೆ ಹಾಗೂ ದೇಹವನ್ನು ಸಮರ್ಪಕವಾಗಿ ಆಮ್ಲಜನಕಯುಕ್ತವಾಗಿಡಲು ಸಹಾಯ ಮಾಡುತ್ತವೆ, ಇದು ಪ್ರಸ್ತುತ ಸಮಯದಲ್ಲಿ ಬಹಳ ಅವಶ್ಯಕವಾಗಿದೆ.
ವಾಕ್ ಮತ್ತು ಟಾಕ್
ಹೆಚ್ಚಿನ ಆಫೀಸ್ ಮೀಟಿಂಗ್ಗಳು ಕಾನ್ಫರೆನ್ಸ್ ಕರೆಗಳಿಗಾಗಿದ್ದು, ಒಂದೇ ಸ್ಥಳದಲ್ಲಿ ದೀರ್ಘಾವಧಿಯವರೆಗೆ ಕುಳಿತುಕೊಳ್ಳುತ್ತೀವಿ. ಇದು ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಹಾಗೂ ಇದರಿಂದಾಗಿ ಹಲವು ಸಮಸ್ಯೆಗಳು ಉಂಟಾಗುತ್ತದೆ. ಇದರಿಂದಾಗಿ ನೀವು ಕರೆಗಳನ್ನು ಸ್ವೀಕರಿಸುವಾಗ ಕುಳಿತಿಕೊಳ್ಳುವ ಬದಲಾಗಿ ಸುತ್ತಲೂ ನಡೆದುಕೊಂಡು ಮಾತನಾಡುವ ಅಭ್ಯಾಸವನ್ನು ರೂಢಿಸಿಕೊಳ್ಳಿ. ಇದು ನಿಮ್ಮ ರಕ್ತ ಪರಿಚಲನೆ ಸುಧಾರಿಸುವುದರ ಜೊತೆಗೆ, ಸ್ಕ್ರೀನ್ ಸಮಯದಿಂದ ಹೆಚ್ಚು ಅಗತ್ಯವಿರುವ ವಿರಾಮದಿಂದ ಪ್ರಯೋಜನವನ್ನು ಪಡೆಯಲು ನಿಮಗೆ ಸಹಾಯ ಮಾಡುತ್ತದೆ. ಹೆಚ್ಚುವರಿಯಾಗಿ, ವಾಕಿಂಗ್ ದೇಹದಲ್ಲಿ ಆರೋಗ್ಯಕರ ಎಂಡಾರ್ಫಿನ್ ಅಥವಾ ಸಂತೋಷದ ಹಾರ್ಮೋನುಗಳ ಬಿಡುಗಡೆ ಮಾಡುತ್ತದೆ ಹಾಗೂ ಸ್ನಾಯುಗಳನ್ನು ಸಡಿಲಗೊಳಿಸಲು ಸಹಾಯ ಮಾಡುತ್ತದೆ.
ಯೋಗ ಕ್ಷೇಮ ವಿರಾಮಗಳು
ಕೆಲಸದ ನಡುವೆ ಸಣ್ಣ ಸಣ್ಣ ವಿರಾಮಗಳನ್ನು ತೆಗೆದುಕೊಳ್ಳಿ. ಈ ವಿರಾಮಗಳು ಮನಸ್ಸು ಮತ್ತು ದೇಹ ಎರಡಕ್ಕೂ ಪ್ರಯೋಜನಕಾರಿ. ಇದು ಸ್ನಾಯುಗಳು ಮತ್ತು ಕೀಲುಗಳಿಗೆ ಅಗತ್ಯವಾದ ಚಲನೆಯನ್ನು ಒದಗಿಸುತ್ತದೆ. ನೋವು ಮತ್ತು ಬಿಗಿತವನ್ನು ಸಹ ಕಡಿಮೆ ಮಾಡುತ್ತದೆ.ನೀವು ವಿರಾಮದ ಸಮಯದಲ್ಲಿ ನೆಕ್ ರೋಲ್ಸ್, ಸೈಡ್ ಸ್ಟ್ರೆಚ್, ಬ್ಯಾಕ್ ಸ್ಟ್ರೆಚ್ನಂತಹ ಹಲವು ವ್ಯಾಯಮಗಳನ್ನು ಮಾಡಿ.
ಕಣ್ಣುಗಳಿಗೂ ವಿಶ್ರಾಂತಿಬೇಕು
ನಮ್ಮ ದೇಹದಂತೆಯೇ, ನಮ್ಮ ಕಣ್ಣುಗಳಿಗೂ ಸ್ವಲ್ಪ ವಿಶ್ರಾಂತಿ ಬೇಕು ಎಂಬುವುದನ್ನು ಮರೆಯಬೇಡಿ. ಮನೆಯಿಂದ ಕೆಲಸ ಮಾಡುವಾಗ ಕಣ್ಣಿನ ಒತ್ತಡ ಕಡಿಮೆ ಮಾಡಲು ಇರುವ ಒಂದು ಸುಲಭವಾದ ವ್ಯಾಯಾಮವೆಂದರೆ 20-20-20 ನಿಯಮದ ವ್ಯಾಯಾಮ. ಪ್ರತಿ 20 ನಿಮಿಷದ ನಂತರ ಪರದೆಯಿಂದ ದೂರ ಇರುವ ವಸ್ತುವನ್ನು ನೋಡುವ ಅಭ್ಯಾಸ ಮಾಡಬೇಕು ಮತ್ತು 20 ಸೆಕೆಂಡುಗಳ ಕಾಲ 20 ಅಡಿ ದೂರದಲ್ಲಿರುವ ಯಾವುದೇ ವಸ್ತುವಿನ ಮೇಲೆ ಗಮನ ಹರಿಸಬೇಕು. ಇದು ಖಂಡಿತವಾಗಿಯೂ ನಿಮ್ಮ ಕಣ್ಣುಗಳಿಗೆ ಒತ್ತಡ ಪರಿಹಾರವಾಗಿ ಕೆಲಸ ಮಾಡುತ್ತದೆ.
ಕೆಲಸದ ನಂತರದ ವ್ಯಾಯಮ
ಆರೋಗ್ಯವಾಗಿರಲು, ಜನರು ಪ್ರತಿ ವಾರ ಕನಿಷ್ಠ 150 ನಿಮಿಷಗಳ ಮಧ್ಯಮ-ತೀವ್ರತೆಯ ದೈಹಿಕ ಚಟುವಟಿಕೆಯನ್ನು ಮಾಡಬೇಕಾಗುತ್ತದೆ; ಅಥವಾ ಪ್ರತಿ ವಾರ 75 ನಿಮಿಷಗಳ ತೀವ್ರ ವ್ಯಾಯಾಮ ಮಾಡಬೇಕಾಗುತ್ತದೆ. ನೀವು ಸುಲಭವಾಗಿ ಮನೆಯಲ್ಲಿ ಪೂರ್ಣಗೊಳಿಸಬಹುದಾದ ಯೋಗ, ಜುಂಬಾ, ಪೈಲೇಟ್ಸ್, ಕ್ರಿಯಾತ್ಮಕ ವ್ಯಾಯಮಗಳನ್ನು ಮಾಡಿ. ಮತ್ತು ಉತ್ತಮ ಫಲಿತಾಂಶಗಳನ್ನು ಪಡೆದುಕೊಳ್ಳಲು, ನೀವು ಆನ್ಲೈನ್ ಕೋರ್ಸ್ಗೆ ಸೇರಬಹುದು


Share this Story:

Follow Webdunia kannada

ಮುಂದಿನ ಸುದ್ದಿ

ಉತ್ತಮ ಆರೋಗ್ಯಕ್ಕಾಗಿ ರಾಕುಲ್ ಪ್ರೀತ್ ಏನು ತಿನ್ನುತ್ತಾರೆ ಗೊತ್ತೇ?