Select Your Language

Notifications

webdunia
webdunia
webdunia
webdunia

ರಾತ್ರಿ ಮಲಗುವ ಮುನ್ನ ಈ ಆಹಾರಗಳನ್ನು ಸೇವನೆ ಮಾಡಬಾರದು..

ರಾತ್ರಿ ಮಲಗುವ ಮುನ್ನ ಈ ಆಹಾರಗಳನ್ನು ಸೇವನೆ ಮಾಡಬಾರದು..
ಬೆಂಗಳೂರು , ಬುಧವಾರ, 11 ಆಗಸ್ಟ್ 2021 (15:46 IST)
Weight Loss: ಸಧ್ಯದ ಪರಿಸ್ಥಿತಿಯಲ್ಲಿ ನಿಮ್ಮ ರಾತ್ರಿಯ ಊಟದ ನಡುವೆ ಮತ್ತು ಮಲಗುವ ಮುನ್ನ ನೀವು  ಹೆಚ್ಚು ದೈಹಿಕ ಚಟುವಟಿಗಳನ್ನು ಮಾಡುತ್ತಿಲ್ಲ, ಇದು ನಿಮ್ಮ ದೇಹದ ಕೊಬ್ಬಿನ ಅಂಶ ಹಾಗೆಯೇ ದೇಹದಲ್ಲಿ ಸಂಗ್ರಹವಾಗುವಂತೆ ಮಾಡುತ್ತದೆ.


ಸ್ಥೂಲಕಾಯ  ಎಂಬುದು ಪ್ರತಿಯೊಬ್ಬರಿಗೂ ತಲೆನೋವಾಗಿರುವ ವಿಚಾರ, ಇದು ಹೆಚ್ಚು ಅಪಾಯವನ್ನು ಸೃಷ್ಟಿ ಮಾಡುವ ಒಂದು ರೋಗ ಎಂದು ಹೇಳಬಹುದು. ಕೊರೊನಾ ಕಾರಣಗಳಿಂದ  ಹೆಚ್ಚು ಹೆಚ್ಚು ಜನರು ಮನೆಯಲ್ಲಿಯೇ ಇದ್ದು ಜಡವಾದ ಜೀವನಶೈಲಿಯನ್ನು ನಡೆಸುತ್ತಿದ್ದಾರೆ. ಅದು ನಿಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ. ದಿನದಲ್ಲಿ ಒಮ್ಮೆಯಾದರೂ ಸ್ವಲ್ಪ ವ್ಯಾಯಾಮ ಮಾಡದೇ ಕುಳಿತಲ್ಲಿ ಕುಳಿತೇ ಕೆಲಸ ಮಾಡುವುದು ಹಲವಾರು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಿದೆ. ಲಾಕ್ಡೌನ್  ಕಾರಣದಿಂದ ಜನರನ್ನು ಅತಿಯಾಗಿ ತಿನ್ನುವುದಕ್ಕೆ ಆರಂಭಿಸಿದ್ದಾರೆ.  ಇದು ಹೆಚ್ಚಿನ ಆತಂಕಕ್ಕೆ ಕಾರಣವಾಗಿದೆ ,ಏಕೆಂದರೆ ಇದು ಸ್ಥೂಲಕಾಯಕ್ಕೆ ಕಾರಣವಾಗಬಹುದು. ತೂಕ ಹೆಚ್ಚಳಕ್ಕೆ ಕಾರಣವಾಗುವ ಇನ್ನೊಂದು ಪ್ರಮುಖ ಅಂಶವೆಂದರೆ ಭಾರೀ ಭೋಜನವನ್ನು ತಿನ್ನುವುದು. ಸಧ್ಯದ ಪರಿಸ್ಥಿತಿಯಲ್ಲಿ ನಿಮ್ಮ ರಾತ್ರಿಯ ಊಟದ ನಡುವೆ ಮತ್ತು ಮಲಗುವ ಮುನ್ನ ನೀವು  ಹೆಚ್ಚು ದೈಹಿಕ ಚಟುವಟಿಗಳನ್ನು ಮಾಡುತ್ತಿಲ್ಲ, ಇದು ನಿಮ್ಮ ದೇಹದ ಕೊಬ್ಬಿನ ಅಂಶ ಹಾಗೆಯೇ ದೇಹದಲ್ಲಿ ಸಂಗ್ರಹವಾಗುವಂತೆ ಮಾಡುತ್ತದೆ. ಆಹಾರ ತಜ್ಞರಾದ ಪ್ರಕಾರ, ರಾತ್ರಿ ಮಲಗುವ ಸುಮಾರು 3 ಗಂಟೆಗಳ ಮೊದಲು ಊಟ ಮಾಡುವುದು ಆರೋಗ್ಯದ ದೃಷ್ಟಿಯಿಂದ ಉತ್ತಮ.  ಅಲ್ಲದೇ ಮಲಗುವ ಮುನ್ನ ಕೆಲವೊಂದು ಆಹಾರ ಪದಾರ್ಥಗಳನ್ನು ಸೇವನೆ ಮಾಡಬಾರದು. ಅವುಗಳ ಸೇವನೆ ನಿಮ್ಮ ದೇಹದ ತೂಕ ಏರಲು ಕಾರಣವಾಗುತ್ತದೆ.
ನೀವು ರಾತ್ರಿ  ಮಲಗುವ ಮುನ್ನ ನೂಡಲ್ಸ್ ತಿಂದರೆ ಅದರಲ್ಲಿರುವ ಕಾರ್ಬೋಹೈಡ್ರೇಟ್ಗಳು ಮತ್ತು ಕೊಬ್ಬುಗಳು ನಿಮ್ಮ ಆರೋಗ್ಯವನ್ನು ಕೆಡಿಸುವ ಸಾಧ್ಯತೆ ಹೆಚ್ಚು. . ಇದರಲ್ಲಿ ಸಂಪೂರ್ಣವಾಗಿ ಫೈಬರ್  ಅಂಶಗಳು ಇರುವುದಿಲ್ಲ ಹಾಗಾಗಿ  ಈ ಎಲ್ಲಾ ಕಾರಣಗಳಿಂದಾಗಿ ನಿಮ್ಮ ತೂಕ ವೇಗವಾಗಿ ಹೆಚ್ಚಾಗಬಹುದು. ಇನ್ನು ಮುಂದೆ ರಾತ್ರಿ ಮಲಗುವ ಮುನ್ನ ನೂಡಲ್ಸ್ ತಿನ್ನುವ ಮೊದಲು ಯೋಚಿಸಿ.
ಚಾಕೊಲೇಟ್ಗಳಲ್ಲಿ ಕೆಫೀನ್ ಜೊತೆಗೆ ಅಧಿಕ ಸಕ್ಕರೆ ಅಂಶವಿರುತ್ತದೆ. ಇವೆರಡೂ ನಿದ್ರೆಯ ಸಮಸ್ಯೆಯನ್ನುಸಹ ಸೃಷ್ಟಿ ಮಾಡುತ್ತದೆ. ಏಕೆಂದರೆ ನೀವು ಚಾಕೊಲೇಟ್ ಸೇವನೆ ಮಾಡುವುದರಿಂದ ನಿಮ್ಮ ದೇಹಕ್ಕೆ ಸಕ್ಕರೆ ಅಂಶ ಮತ್ತು ಕೆಫಿನ್ ವಿಪರೀತವಾಗಿ ಹೋಗುವುದು, ನಿದ್ದೆ ಬರದಂತೆ ಮಾಡುತ್ತದೆ. ಇನ್ನು ಅವುಗಳಲ್ಲಿರುವ ಹೆಚ್ಚಿನ ಸಕ್ಕರೆ ಅಂಶವು ತೂಕ ಹೆಚ್ಚಾಗಲು ಕಾರಣವಾಗುತ್ತದೆ. ನಿಮಗೆ ತೂಕ ಹೆಚ್ಚಾಗಬಾರದು ಎಂದು ಇದ್ದಲ್ಲಿ ಊಟದ ನಂತರ ಚಾಕಲೇಟ್ ತಿನ್ನುವುದರಿಂದ ದೂರವಿರುವುದು ಉತ್ತಮ.
ಕರಿದ ಆಹಾರ ಪದಾರ್ಥಗಳು ನಿಮ್ಮ ತೂಕವನ್ನು ವೇಗವಾಗಿ ಹೆಚ್ಚಿಸುತ್ತದೆ. ಏಕೆಂದರೆ ಕರಿದ ಆಹಾರದಲ್ಲಿ ಹೆಚ್ಯು ಕಾರ್ಬೋಹೈಡ್ರೇಟ್ ಮತ್ತು ಕೊಬ್ಬಿನ ಅಂಶಗಳನ್ನು ಹೊಂದಿರುತ್ತದೆ, ಇದು ನಿಮ್ಮ ಹೊಟ್ಟೆಯ ಆಮ್ಲೀಯತೆ ಮತ್ತು ತೂಕವನ್ನು ಹೆಚ್ಚಿಸಲು ಕೆಲಸ ಮಾಡುತ್ತದೆ. ಆದ್ದರಿಂದ ಸುಲಭವಾಗಿ ಜೀರ್ಣವಾಗುವಂತಹ ಲಘು ಆಹಾರವನ್ನು ರಾತ್ರಿಯಲ್ಲಿ ತಿನ್ನಲು ಪ್ರಯತ್ನಿಸಿ.
ಕೆಲವು ಜನರು ಊಟವಾದ ನಂತರ ಅದು ಜೀರ್ಣವಾಗಲಿ ಎಂದು ಸೋಡಾ ಕುಡಿಯಲು ಇಷ್ಟಪಡುತ್ತಾರೆ, ಆದರೆ ಅವುಗಳು ಹೆಚ್ಚಿನ ಸಕ್ಕರೆ ಅಂಶವನ್ನು ಹೊಂದಿರುತ್ತವೆ, ಇದು ಹೊಟ್ಟೆಯ ಕೊಬ್ಬನ್ನು ವೇಗವಾಗಿ ಹೆಚ್ಚಿಸಲು ಕೆಲಸ ಮಾಡುತ್ತದೆ. ಆದ್ದರಿಂದ ಮಲಗುವ ಮುನ್ನ ಸೋಡಾ ಕುಡಿಯುವುದು ಸೂಕ್ತವಲ್ಲ.
ಯಾರಿಗೇ ಆಗಲಿ ತಮ್ಮ ತೂಕ ಹೆಚ್ಚಾಗುವುದು ಇಷ್ಟವಾಗುವುದಿಲ್ಲ. ಅದರಲ್ಲೂ ಈ ಸಮಯದಲ್ಲಿ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ನಮ್ಮ ಕರ್ತವ್ಯ. ಕೇವಲ ಇದಿಷ್ಟೇ ಅಲ್ಲದೇ ಹಲವಾರು ಆಹಾರ ಪದಾರ್ಥಗಳನ್ನು ರಾತ್ರಿ ಮಲಗುವ ಮುನ್ನ ಸೇವಿಸುವುದು ಆರೋಗ್ಯಕ್ಕೆ ಹಾನಿಕಾರಕ. ಇನ್ನು ಆಹಾರ ಕ್ರಮದಲ್ಲಿ ಬದಲಾವಣೆ ಮಾಡುವುದರ ಜೊತೆಗೆ ದಿನನಿತ್ಯ ನಿಮ್ಮ ಬಿಡುವಿನ ವೇಳೆಯಲ್ಲಿ ಸ್ವಲ್ಪ ವ್ಯಾಯಾಮವನ್ನು ಮಾಡಿ, ಇದು ನಿಮ್ಮ ಆರೋಗ್ಯವನ್ನು ಕಾಪಾಡುವುದರ ಜೊತೆಗೆ , ದೇಹದ ತೂಕ ಇಳಿಸಲು ಸಹಾಯ ಮಾಡುತ್ತದೆ.


Share this Story:

Follow Webdunia kannada

ಮುಂದಿನ ಸುದ್ದಿ

ಕಡಿಮೆ ಸೇವಿಸಿ ಹಸಿವಿನಿಂದ ಇದ್ದರೆ ನಿಮ್ಮ ತೂಕ ಕಡಿಮೆ ಆಗುತ್ತದೆಯೇ..?