ಬೆಂಗಳೂರು : ಸಾಸಿವೆ ಎಣ್ಣೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಸಾಸಿವೆ ಎಣ್ಣೆ ಶರೀರಕ್ಕೆ ಬಹಳ ಪ್ರಯೋಜನಕಾರಿ. ಇದರಲ್ಲಿರುವ ವಿಟಮಿನ್, ಮಿನರಲ್ಸ್ ಸೇರಿದಂತೆ ಅನೇಕ ಪೋಷಕ ಸತ್ವಗಳು ಶರೀರಕ್ಕೆ ಸಾಕಷ್ಟು ಲಾಭ ತಂದುಕೊಡುತ್ತವೆ. ಈ ಎಣ್ಣೆಯನ್ನು ನಿದ್ರೆ ಮಾಡುವ ವೇಳೆ ಈ ಎರಡು ಅಂಗಕ್ಕೆ ಹಚ್ಚಿಕೊಳ್ಳುವುದರಿಂದ ಬಹಳ ಒಳ್ಳೆಯದು.
ಹೌದು. ಮಲಗುವ ಮೊದಲು ಕಾಲಿನ ಪಾದಗಳಿಗೆ ಸಾಸಿವೆ ಎಣ್ಣೆ ಹಚ್ಚಿ ಮಸಾಜ್ ಮಾಡಬೇಕು. ಇದು ಕಣ್ಣಿನ ಕಾಂತಿ ಹೆಚ್ಚಾಗಲು ಸಹಾಯಕವಾಗುವುದರ ಜೊತೆಗೆ ಚೆನ್ನಾಗಿ ನಿದ್ರೆ ಕೂಡ ಬರುತ್ತದೆ. ಇದರಿಂದ ಆರೋಗ್ಯವಾಗಿರುತ್ತೀರಿ.
ಹಾಗೇ ರಾತ್ರಿ ಮಲಗುವ ಮೊದಲು ಹೊಕ್ಕಳಿಗೆ ಸಾಸಿವೆ ಎಣ್ಣೆಯನ್ನು ಹಾಕಿಕೊಳ್ಳಿ. ಇದು ಹೊಟ್ಟೆ ಕೊಬ್ಬನ್ನು ನಿಯಂತ್ರಿಸುತ್ತದೆ. ಹೊಟ್ಟೆ ಸುಂದರ ಹಾಗೂ ಮೃದುವಾಗುತ್ತದೆ. ಹೊಕ್ಕಳಿಗೆ ಸಾಸಿವೆ ಎಣ್ಣೆ ಹಾಕಿ ಮಾಲಿಶ್ ಮಾಡಿದ್ರೆ ಹೊಟ್ಟೆ ನೋವು ಕಡಿಮೆಯಾಗುವ ಜೊತೆಗೆ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆ ದೂರವಾಗುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.