Select Your Language

Notifications

webdunia
webdunia
webdunia
webdunia

ಕಿಸ್‌, ಸೆಕ್ಸ್ ನಿಂದ ಯಾವ, ಯಾವ ರೋಗಗಳು ಕಡಿಮೆಯಾಗುತ್ತವೆ ನಿಮಗೆ ಗೊತ್ತಾ?

ಕಿಸ್‌, ಸೆಕ್ಸ್ ನಿಂದ ಯಾವ, ಯಾವ ರೋಗಗಳು ಕಡಿಮೆಯಾಗುತ್ತವೆ ನಿಮಗೆ ಗೊತ್ತಾ?
ಬೆಂಗಳೂರು , ಶನಿವಾರ, 9 ಡಿಸೆಂಬರ್ 2017 (16:15 IST)
ಕಿಸ್‌‌ನಿಂದ ಕೆಲವು ರೋಗಗಳು ಗುಣಮುಖವಾಗುತ್ತವೆ.ಆಶ್ಚರ್ಯ ಅನಿಸಿದರು ಇದು ಸತ್ಯ. ಮುಚ್ಚಿಡುವ ಸುದ್ದಿ ಇದಲ್ಲ , ಸ್ವತಃ ಡಾಕ್ಟರ್‌‌ ಸಂಶೋಧನೆ ಮಾಡಿದ ಮೇಲೆ ಈ ವಿಷಯ ಹೊರ ಬಂದಿದೆ . ಕಿಸ್ ಮತ್ತು ಸೆಕ್ಸ್ ಹಲವಾರು ರೋಗಗಳನ್ನು ದೂರ ಮಾಡುತ್ತವೆ. 
ಸೆಕ್ಸ್‌ ಪ್ರತಿಯೊಬ್ಬರ ಜೀವನದಲ್ಲಿ ಮಹತ್ವವಾಗಿರುತ್ತದೆ. ಸೆಕ್ಸ್‌ನಿಂದ ಖುಷಿ ಸಿಗುತ್ತದೆ ಮತ್ತು ಸೌಂದರ್ಯ ಕೂಡ ಹೆಚ್ಚುತ್ತದೆ ಎನ್ನುತ್ತದೆ ಅಧ್ಯಯನದ ಸಂಶೋಧನೆ.
 
ಸೆಕ್ಸ್‌ನಿಂದ ಮಾನವನ ಶರೀರದಲ್ಲಿ ಹಲವಾರು ಹಾರ್ಮೋನ್‌ಗಳು ಉತ್ಪಾದನೆ ಆಗುತ್ತವೆ. ಶರೀರದ ಆರೊಗ್ಯ ಮತ್ತು ಸೌಂದರ್ಯ ಕೂಡ ಹೆಚ್ಚುತ್ತದೆ. ಸೆಕ್ಸ್‌ನಿಂದ ದೇಹದಲ್ಲಿ ಅಸ್ಟಿಯೊಪೊರೊಸಿಸ್‌ ಎನ್ನುವ ರೋಗವು ಕಡಿಮೆಯಾಗುತ್ತದೆ. 
 
ಸೆಕ್ಸ್‌ನಿಂದ ಎಂಡೋಫ್ರಿನ್ ಹಾರ್ಮೊನ್‌ಗಳ ಸಂಖ್ಯೆ ಹೆಚ್ಚುತ್ತದೆ. ಇದರಿಂದ ನಿಮ್ಮ ಚರ್ಮದ ಸೌಂದರ್ಯ ಹೊಳೆಯುವಂತೆ ಮಾಡುತ್ತದೆ. ಎಸ್ಟ್‌ರೋಜನ್‌ ಹಾರ್ಮೊನಗಳಿಂದ ಶರೀರದಲ್ಲಿ ಕೆಲವು ರೋಗಗಳು ಕಡಿಮೆಯಾಗುತ್ತವೆ.
 
ಸಫಲ ಮತ್ತು ನಿಯಮಿತವಾಗಿ ಸೆಕ್ಸ್ ಮಾಡುವರ ಶರೀರದಲ್ಲಿ ಆರೋಗ್ಯ ಹೆಚ್ಚುತ್ತದೆ. ಮತ್ತು ಸೆಕ್ಸ್‌ನಲ್ಲಿ ಭಾಗಿಯಾಗುವವರ ಸೌಂದರ್ಯ ದಿರ್ಘಕಾಲದವರೆಗು ಉಳಿಯುತ್ತದೆ. ಸೆಕ್ಸ್‌ನಿಂದ ಉತ್ತೇಜನ, ಉತ್ಸಾಹ ಮತ್ತು ಆತ್ಮವಿಶ್ವಾಸ ಹೆಚ್ಚುತ್ತದೆ . ಸೆಕ್ಸ್‌ನಿಂದ ದೂರವಿರುವರಿಗೆ ನಾಚಿಕೆ , ಸಂಕೋಚ ಮತ್ತು ಅಪರಾಧಿ ಭಾವನೆ ಹೆಚ್ಚುತ್ತದೆ ಎನ್ನುತ್ತದೆ ಅಧ್ಯಯನದ ವರದಿ. 
 
ಮನಸ್ಸು ಶಾಂತವಾಗಿರಲು ಮತ್ತು ಶರೀರದಲ್ಲಿ ಉತ್ಸಾಹ ಹೆಚ್ಚಿಸಲು ಸೆಕ್ಸ್ ಸಹಾಯ ಮಾಡುತ್ತದೆ. ಸೆಕ್ಸ್ ಮಾಡುವಾಗ ಶರೀರದಲ್ಲಿ ಫೆರೋಮೋಂಸ ಹೆಸರಿನ ರಸಾಯನ ಉತ್ಪಾದನೆ ಹೆಚ್ಚುತ್ತದೆ. 
 
ಸೆಕ್ಸ್ ಮಾಡುವುದರಿಂದ ಹೃದಯ, ಮತ್ತು ಮನಸ್ಸಿನ ಖಿನ್ನತೆ, ರಕ್ತದ ಸಂಚಲನೆಯ ಅಡೆಚಡೆಗಳಿಂದ ದೂರವಿರುಸುತ್ತದೆ. ಸೆಕ್ಸ್‌ನಿಂದ ದೂರ ಇರುವವರಿಗೆ ಈ ರೋಗಗಳು ಹೆಚ್ಚಿಗೆ ಬರುವ ಸಾಧ್ಯೆತೆಗಳಿವೆ.
 
ಸೆಕ್ಸ್ ಒಂದು ತರಹದ ವ್ಯಾಯಾಮ ಕೂಡ ಆಗಿದೆ. ಸೆಕ್ಸ್ ಮಾಡುವುದರಿಂದ ದೈಹಿಕ ವ್ಯಾಯಾಮದ ಸಾದನೆಗಳ ಅವಶ್ಯಕತೆ ಇರುವುದಿಲ್ಲ. ಸೆಕ್ಸ್ ವ್ಯಾಯಾಮ ಸ್ನಾಯ ಸೆಳೆತದಂತಹ ತೊಂದರೆಗಳು ದೂರವಾಗುತ್ತದೆ. 
 
ಸೆಕ್ಸನಿಂದ ಶರೀರದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ. ಒಂದು ಸಲ ಸೆಕ್ಸ್ ಮಾಡಿದರೆ 500 ರಿಂದ 1000 ದವರೆಗಿನ ಕೊಲೆಸ್ಟ್ರಾಲ್ ಕ್ಯಾಲೋರಿ ಕಡಿಮೆಯಾಗುತ್ತದೆ. ಸೆಕ್ಸ್ ಮಾಡುವ ಸಮಯದಲ್ಲಿ ಚುಂಬನ ನೀಡುವುದರಿಂದ ದಪ್ಪಗಿರುವವರು ತೆಳ್ಳಗಾಗಲು ನೆರವಾಗುತ್ತದೆಯಂತೆ.
 
ವಿಜ್ಞಾನಿಗಳ ಪ್ರಕಾರ ಸೆಕ್ಸ್ ಸಮಯದಲ್ಲಿ ನೀಡುವ ಒಂದು ಚುಂಬನ ಕನಿಷ್ಠ 9 ಕ್ಯಾಲೋರಿ ಕೊಲೆಸ್ಟ್ರಾಲ್ ಕಡಿಮೆಯಾಗಿಸುತ್ತದೆ. ಈ ತರಹ 390 ಬಾರಿ ಚುಂಬನ ನೀಡಿದರೆ ಅರ್ಧಕಿಲೋಗಿಂತ ಹೆಚ್ಚಿನ ಶರೀರದ ತೂಕ ಕಡಿಮೆಯಾಗುತ್ತದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಹೆಣ್ಣು ಮಕ್ಕಳು ಸಮಸ್ಯೆಯಿಂದ ದೂರವಾಗಲು ಇವೆಲ್ಲ ಮಾಡಲೇ ಬೇಕು