Select Your Language

Notifications

webdunia
webdunia
webdunia
webdunia

ಗರ್ಭಿಣಿಯರು ಅತಿಯಾಗಿ ಟೊಮೇಟೊ ಸೇವಿಸಿದರೆ ಏನಾಗುತ್ತದೆ ಗೊತ್ತಾ?

ಗರ್ಭಿಣಿಯರು ಅತಿಯಾಗಿ ಟೊಮೇಟೊ ಸೇವಿಸಿದರೆ ಏನಾಗುತ್ತದೆ ಗೊತ್ತಾ?
ಬೆಂಗಳೂರು , ಸೋಮವಾರ, 5 ಆಗಸ್ಟ್ 2019 (09:04 IST)
ಬೆಂಗಳೂರು : ಮಹಿಳೆಯರು ಗರ್ಭಾವಸ್ಥೆಯ ಸಮಯದಲ್ಲಿ ತಾವು ಸೇವಿಸುವ ಆಹಾರದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕಾಗುತ್ತದೆ. ಯಾವ ವಸ್ತುವನ್ನು ಹೆಚ್ಚು ಸೇವಿಸಿಬೇಕು, ಯಾವುದನ್ನು ಹೆಚ್ಚಾಗಿ ಸೇವಿಸಬಾರದು ಎಂಬುದನ್ನು ತಿಳಿದುಕೊಂಡಿರಬೇಕು. ಇಲ್ಲವಾದರೆ ಅಡ್ಡಪರಿಣಾಮ ಬೀರುವ ಸಂಭವವಿರುತ್ತದೆ.




*ಟೊಮೆಟೊ ವಿಟಮಿನ್ ಸಿ ನ ಒಂದೊಳ್ಳೆ ಮೂಲವಾಗಿರುವುದರಿಂದ ಗರ್ಭಿಣಿಯರು ಟೊಮೇಟೊ ಸೇವಿಸುವಿದರಿಂದ ದೇಹಕ್ಕೆ ವಿಟಮಿನ್ ಸಿ ಸುಲಭವಾಗಿ ಸಿಗುತ್ತದೆ. ವಿಟಮಿನ್ ಸಿ ಗರ್ಭದಲ್ಲಿರುವ ಭ್ರೂಣದ ಮೆದುಳಿನ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಇದನ್ನು ಅತಿಯಾಗಿ ತಿಂದರೆ ಕೆಲ ಸಮಸ್ಯೆಗಳಿಗೆ ಕಾರಣವಾಗಬಹುದು.

*ಟೊಮೆಟೊನಲ್ಲಿರುವ ಅನೇಕ ಆಸಿಡ್ಗಳು ಎದೆಯುರಿತ ಸಮಸ್ಯೆ ತಂದೊಡ್ಡಬಹುದು.

*ಚೆರ್ರಿ ಟೊಮೆಟೊ ದೇಹಕ್ಕೆ ಹೆಚ್ಚು ಪೊಟ್ಯಾಷಿಯಂ ಒದಗಿಸುವುದರಿಂದ, ಟೊಮೇಟೊನ ಅತಿಯಾದ ಸೇವನೆ ಗರ್ಭಿಣಿಯರಲ್ಲಿ ಕಿಡ್ನಿ ಸಮಸ್ಯೆಗೆ ಕಾರಣವಾಗಬಹುದು.

* ಟೊಮೆಟೊ ನಲ್ಲಿನ ಆಸಿಡ್ ಗಳಿಂದ ಗರ್ಭಿಣಿಯರ ಮೂತ್ರ ನಾಳ ಸೋಂಕಿಗೊಳಗಾಗಬಹುದು.

* ಟೊಮೆಟೊ ನಲ್ಲಿ ಅತಿ ಹೆಚ್ಚು ಸೋಡಿಯಂ ಅಂಶ ಇರುವುದರಿಂದ ಅತಿಯಾಗಿ ಸೇವಿಸಿದರೆ ರಕ್ತದೊತ್ತಡ ಹೆಚ್ಚಾಗುತ್ತದೆ.

* ಟೊಮೆಟೊ ಗಳು ಮಹಿಳೆಯರಲ್ಲಿ ಮೈಗ್ರೇನ್ ಸಮಸ್ಯೆಗೂ ಕಾರಣವಾಗಬಹುದು

Share this Story:

Follow Webdunia kannada

ಮುಂದಿನ ಸುದ್ದಿ

ಮಿಲನ ಕ್ರಿಯೆ ಮಾಡುವಾಗ ನೋವು ಎನ್ನುತ್ತಾಳೆ! ಏನು ಮಾಡೋದು?