Publish Date: Sun, 24 May 2020 (06:13 IST)
Updated Date: Sun, 24 May 2020 (06:14 IST)
ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಯುವಕ ಯುವತಿಯರಿಗೆ ಸೌಂದರ್ಯದ ಕಾಳಜಿ ಹೆಚ್ಚಾಗಿದೆ. ಅದಕ್ಕಾಗಿ ಮಾರುಕಟ್ಟೆಯಲ್ಲಿ ಸಿಗುವ ದುಬಾರಿ ಕ್ರೀಂಗಳನ್ನು ಬಳಸಿ ಮುಖವನ್ನು ಹಾಳುಮಾಡಿಕೊಳ್ಳುವ ಬದಲು ಮನೆಯಲ್ಲಿಲ್ಲೇ ಈ ಫೇಸ್ ಪ್ಯಾಕ್ ನ್ನು ಬಳಸಿ.
ದಾಳಿಂಬೆ ಹಣ್ಣು ಆರೋಗ್ಯಕ್ಕೆ ತುಂಬಾ ಉತ್ತಮ. ಮಾತ್ರವಲ್ಲ ಅದರಿಂದ ಮುಖದ ಸೌಂದರ್ಯವನ್ನು ಕೂಡ ಹೆಚ್ಚಿಸಿಕೊಳ್ಳಬಹುದು. ದಾಳಿಂಬೆ ಬೀಜವನ್ನು ಮುಖದ ಮೇಲೆ ಉಜ್ಜಿಕೊಳ್ಳುವುದರಿಂದ ಕಪ್ಪು ಕಲೆಗಳು ಮಾಯವಾಗಿ ಹೊಳೆಯುವ ತ್ವಚೆ ನಿಮ್ಮದಾಗುತ್ತದೆ. ದಾಳಿಂಬೆ ಟೋನರ್ ನಂತೆ ಕೆಲಸ ಮಾಡುತ್ತದೆ.