Publish Date: Sat, 23 Dec 2017 (11:17 IST)
Updated Date: Sat, 23 Dec 2017 (11:24 IST)
ಬೆಂಗಳೂರು: ಪ್ರತಿಯೊಬ್ಬರು ಜೀವನ ಸಂಗಾತಿಯನ್ನು ಆಯ್ಕೆ ಮಾಡುವಾಗ ಆ ವ್ಯಕ್ತಿಯ ಪೂರ್ವಾಪರ ಎಲ್ಲವನ್ನು ತಿಳಿದುಕೊಂಡೆ ಆಯ್ಕೆ ಮಾಡುತ್ತಾರೆ. ಹಾಗೆಯೇ ಯಾವುದೇ ವ್ಯಕ್ತಿಯ ಜೊತೆ ಲೈಂಗಿಕ ಕ್ರಿಯೆ ನಡೆಸುವ ಮುನ್ನ ಆತನ ಬಗ್ಗೆ ತಿಳಿದುಕೊಳ್ಳುವುದು ಉತ್ತಮ. ಲೈಂಗಿಕ ಕ್ರಿಯೆಗೆ ಸಂಬಂಧಿಸಿದಂತೆ ಯಾವ ವ್ಯಕ್ತಿಯಿಂದ ದೂರವಿರಬೇಕು ಎನ್ನುವುದನ್ನು ತಿಳಿದಿರಬೇಕು.
ಕೆಲವರಿಗೆ ಯಾವಾಗಲೂ ಲೈಂಗಿಕ ಕ್ರಿಯೆ ನಡೆಸುವುದೊಂದೆ ಅವರ ತಲೆಯಲ್ಲಿರುತ್ತದೆ. ಇವರಿಗೆ ಸೆಕ್ಸ್ ಬಿಟ್ಟರೆ ಬೇರೆ ಏನು ಕಾಣಿಸುವುದಿಲ್ಲ. ಅವರು ಲೈಂಗಿಕ ಕ್ರಿಯೆಗಾಗಿ ರೊಮ್ಯಾಂಟಿಕ್ ಆಗಿ, ಪ್ರೀತಿಯಿಂದ ಮಾತನಾಡಿಸಿ, ಕಾಳಜಿ ತೋರಿಸುತ್ತಾರೆ. ಆದರೆ ಸೆಕ್ಸ್ ಮುಗಿದ ಮೇಲೆ ತಮ್ಮ ಮೇಲೆ ಕಾಳಜಿ ತೋರುವುದಿಲ್ಲ. ಇಂತಹ ವ್ಯಕ್ತಿಯಿಂದ ದೂರವಿರುವುದೆ ಒಳ್ಳೆಯದು. ಕೆಲವು ವ್ಯಕ್ತಿಗಳು ನೆಗೆಟಿವಿಟಿ ತುಂಬಿಕೊಡಿರುತ್ತಾರೆ. ಅವರು ಸೆಕ್ಸ್ ವಿಷಯಕ್ಕೆ ತುಂಬಾ ಆಕ್ಟಿವ್ ಆಗುತ್ತಾರೆ. ಆದರೆ ನಿಮಗೆ ಅವರ ಅವಶ್ಯಕತೆ ಇದ್ದಾಗ ದೂರವಿರುತ್ತಾರೆ. ಇಂತವರ ಸಹವಾಸ ಮಾಡಬೇಡಿ.
ಈಗಿನ ಪೀಳಿಗೆಯಲ್ಲಿ ಸೆಕ್ಸ್ ಮೊದಲು ಆಗಿ ನಂತರ ಪ್ರೀತಿಯಾಗುತ್ತೆ. ಅಂತಹ ಸಂದರ್ಭದಲ್ಲಿ ಸೆಕ್ಸ್ ನ ಮೊದಲು ಅವರು ಎಂತಹ ವ್ಯಕ್ತಿ ಎಂಬುದನ್ನು ತಿಳಿದುಕೊಳ್ಳಿ.ಕೆಲವರಿಗೆ ಸಂಗಾತಿ ಖುಷಿಗಿಂತಲೂ ಮಿಗಿಲಾಗಿ ತಮ್ಮ ತೃಪ್ತಿಯೇ ಮುಖ್ಯವಾಗಿರುತ್ತದೆ. ಅಂತಹ ವ್ಯಕ್ತಿಯಿಂದ ದೂರವಿರಿ. ಕೆಲವರಿಗೆ ಸೆಕ್ಸ್ ಸಮಸ್ಯೆ ಇರುತ್ತದೆ. ಅವರು ಕಾಂಡಮ್ ಹಾಕದೆ ಇರಲು ಕಾರಣ ಹುಡುಕುತ್ತಿರುತ್ತಾರೆ. ಅಂತವರಿಂದ ಜೀವನದಲ್ಲಿ ಸಮಸ್ಯೆ ಎದುರಾಗುವ ಸಾಧ್ಯತೆಯಿರುವುದರಿಂದ ಅವರಿಂದ ದೂರವಿರುವುದು ಉತ್ತಮ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ