Select Your Language

Notifications

webdunia
webdunia
webdunia
webdunia

ತಂಗಿಯೊಂದಿಗೆ ಮಲಗಿ ಅಕ್ಕನನ್ನು ಮದುವೆಯಾಗೋದಾ

ತಂಗಿಯೊಂದಿಗೆ ಮಲಗಿ ಅಕ್ಕನನ್ನು ಮದುವೆಯಾಗೋದಾ
ಬೆಂಗಳೂರು , ಶುಕ್ರವಾರ, 20 ಮಾರ್ಚ್ 2020 (18:36 IST)
ಪ್ರಶ್ನೆ: ನಾನು 28 ವರ್ಷದ ಯುವಕ. ಉತ್ತಮ ಉದ್ಯೋಗದಲ್ಲಿದ್ದೇನೆ. ಕಳೆದ ನಾಲ್ಕೈದು ವರ್ಷಗಳಿಂದ ನಾನು ಒಬ್ಬಳ ಜತೆ ಪ್ರೇಮದಲ್ಲಿ ಸಿಲುಕಿರುವೆ. ನಾವಿಬ್ಬರೂ ಮದುವೆಯಾಗಬೇಕು ಎಂದುಕೊಂಡಿದ್ದೇವೆ. ಆದರೆ ಕೆಲವು ತಿಂಗಳ ಹಿಂದೆ ಅವಳು ತನ್ನ ತಂಗಿಯನ್ನು ನನಗೆ ಪರಿಚಯ ಮಾಡಿಸಿದಳು. ಆಕೆ ನನ್ನ ಪ್ರೇಯಸಿಗಿಂತ ಚೆಲುವೆ.
 

ನನ್ನ ಪ್ರೇಯಸಿಗೆ ತಿಳಿಯದಂತೆ ಆಕೆಯ ತಂಗಿಯೂ ನನ್ನನ್ನು ಪ್ರೀತಿಸಲು ಶುರುಮಾಡಿದ್ದಾಳೆ. ಅಲ್ಲದೇ ನಾವಿಬ್ಬರೂ ಡೇಟಿಂಗ್ ಕೂಡ ನಡೆಸಿದ್ದೇವೆ. ನನ್ನ ಸಮಸ್ಯೆ ಏನೆಂದರೆ ನನ್ನ ಪ್ರೇಯಸಿಯನ್ನು  ಮದುವೆಯಾಗಬೇಕೋ ಅಥವಾ ಅವಳ ತಂಗಿಯನ್ನೋ ಎನ್ನುವ ಗೊಂದಲಕ್ಕೆ ಒಳಗಾಗಿರುವೆ. ಪರಿಹಾರ ತಿಳಿಸಿರಿ.

ಉತ್ತರ: ಹೆಣ್ಣು ಒಬ್ಬನನ್ನೇ ಪ್ರೀತಿಸಿ ಮದುವೆಯಾಗುವ ಸಾವಿರಾರು ಕನಸು ಕಂಡಿರುತ್ತಾಳೆ. ನಿಮ್ಮ ಹುಡುಗಿ ಸಹ ನಿಮ್ಮ ಬಗ್ಗೆ ಬೆಟ್ಟದಷ್ಟು ಆಸೆ, ಪ್ರೀತಿ ಇಟ್ಟುಕೊಂಡಿದ್ದಾಳೆ. ಆದರೆ ನೀವು ಆಕೆಗೆ ಗೊತ್ತಾಗದಂತೆ ಆಕೆಯ ತಂಗಿಯನ್ನೂ ಪ್ರೀತಿಸಲು ಶುರು ಮಾಡಿದ್ದೀರಿ. ಇದರ ಅರ್ಥ ನೀವು ಪ್ರೇಯಸಿ ಇಲ್ಲವೇ ಆಕೆಯ ತಂಗಿಯ ಬಾಹ್ಯರೂಪಕ್ಕೆ ಮಾತ್ರ ಬೆಲೆ ಕೊಡುತ್ತಿದ್ದೀರಿ.

ನಿಮ್ಮದು ಪ್ರೀತಿ ಅಲ್ಲ. ಕೇವಲ ಆಕರ್ಷಣೆ ಯಾಗಿದೆ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತದೆ. ನಿಮ್ಮ ಮನಸ್ಸಿನಿಂದ ಹಾಗೂ ನಿಷ್ಕಲ್ಮಶ ಪ್ರೀತಿಯಿಂದ ಯೋಚನೆ ಮಾಡಿ ಒಂದು ಸೂಕ್ತ ನಿರ್ಧಾರಕ್ಕೆ ಬನ್ನಿ. ಮೋಹದ ಬಲೆಯಲ್ಲಿ ಪ್ರೀತಿಗೆ ಅಪಮಾನ ಮಾಡಬೇಡಿ.



 

Share this Story:

Follow Webdunia kannada

ಮುಂದಿನ ಸುದ್ದಿ

ಪರಸಂಗ ಮಾಡಿದ ಮೇಲೆ ನನ್ನ ಗತಿ ಹೀಗಾಗಿದೆ!