Publish Date: Thu, 12 Dec 2019 (14:43 IST)
Updated Date: Thu, 12 Dec 2019 (14:45 IST)
ಪ್ರಶ್ನೆ : ನನಗೆ 32 ವರ್ಷಗಳಾಗಿವೆ. ಮದುವೆಯಾಗಿ 4 ವರ್ಷಗಳು ಕಳೆದಿವೆ. ನನ್ನ ಪತಿ ಹೊರ ರಾಜ್ಯದಲ್ಲಿದ್ದಾರೆ. ನಾವಿಬ್ಬರು ದೂರ ದೂರವಿರುವುದರಿಂದ ನನಗೆ ಲೈಂಗಿಕ ತೃಪ್ತಿ ಸಿಗುತ್ತಿಲ್ಲ. ನಾನು ನನ್ನ ಗಂಡನನ್ನು ತುಂಬಾ ಪ್ರೀತಿಸುತ್ತೇನೆ.
ಆದರೆ ನನ್ನ ಆಸೆ, ಲೈಂಗಿಕ ತೃಪ್ತಿ ಅದುಮಿಡಲು ಆಗುತ್ತಿಲ್ಲ. ಅವರು ನನ್ನ ಜತೆಗೆ ಇರಲು ಬರುತ್ತಿಲ್ಲ. ಮುಂದೇನು ಮಾಡಬೇಕೆಂದು ಪರಿಹಾರ ಸೂಚಿಸಿ.
ಉತ್ತರ : ವಯೋಸಹಜ ಆಕರ್ಷಣೆ ಹಾಗೂ ಲೈಂಗಿಕ ಭಾವನೆ ನಿಮ್ಮಲ್ಲಿವೆ. ನೀವು ಗಂಡನೊಂದಿಗೆ ಈ ಕುರಿತು ಮನಬಿಚ್ಚಿ ಚರ್ಚೆ ಮಾಡಿ. ನಿಮ್ಮ ಭಾವನೆಗಳನ್ನು ಅವರ ಜೊತೆ ಹಂಚಿಕೊಳ್ಳಿ.
ಅವರಿಗೆ ನಿಮ್ಮ ಜೊತೆಗೆ ಇರಲು ಬರಲು ಆಗುವುದಿಲ್ಲ ಅಂದಾದರೆ, ಇಲ್ಲವೇ ನಿಮಗೆ ಅವರಿದ್ದಲ್ಲಿಗೆ ಹೋಗಲು ಸಾಧ್ಯವೇ ಅಂತ ಮಾತನಾಡಿಕೊಳ್ಳಿ. ನಿಮ್ಮ ಕುಟುಂಬದವರು, ಗಂಡನೊಂದಿಗೆ ಚರ್ಚಿಸಿದ ಬಳಿಕವೇ ನೀವೊಂದು ಸ್ಪಷ್ಟ ತೀರ್ಮಾನಕ್ಕೆ ಬರಬೇಕಾಗುತ್ತದೆ.