Select Your Language

Notifications

webdunia
webdunia
webdunia
webdunia

ಕಫದ ಬಣ್ಣ ತಿಳಿಸುತ್ತೆ ನಿಮ್ಮ ಆರೋಗ್ಯದ ಬಗ್ಗೆ ಮಾಹಿತಿ

ಕಫದ ಬಣ್ಣ ತಿಳಿಸುತ್ತೆ ನಿಮ್ಮ ಆರೋಗ್ಯದ ಬಗ್ಗೆ ಮಾಹಿತಿ
ಬೆಂಗಳೂರು , ಸೋಮವಾರ, 22 ಜುಲೈ 2019 (06:40 IST)
ಬೆಂಗಳೂರು : ಹೆಚ್ಚಿನವರು ಕಫದ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಆದರೆ ಇದನ್ನು ನಿರ್ಲಕ್ಷ್ಯ ಮಾಡಿದರೆ ಇದರಿಂದ ಉಸಿರಾಟದ ಸಮಸ್ಯೆ ಎದುರಾಗಿ ಸಾವು ಕೂಡ ಸಂಭವಿಸಬಹುದು. ಆದ್ದರಿಂದ ಕಫವಾದ ತಕ್ಷಣ ಚಿಕಿತ್ಸೆ ಮಾಡಿ. ಹಾಗೇ ಈ ಕಫದ ಬಣ್ಣಗಳು ನಮ್ಮ ಆರೋಗ್ಯ ಬಗ್ಗೆ ತಿಳಿಸುತ್ತವೆ. ಅದು ಹೇಗೆ ಎಂಬುದು ತಿಳಿಯೋಣ.


 


*ಹಸಿರು ಕಫ ಅಂತಹ ಗಂಭೀರ ಸಮಸ್ಯೆಯೇನಲ್ಲ. ರೋಗ ನಿರೋಧಕ ಕೋಶಗಳಾಗಿರುವ ಬಿಳಿ ರಕ್ತಕಣಗಳು ಹಸಿರು ಬಣ್ಣದ ಕಿಣ್ವಗಳನ್ನು ಹೊಂದಿರುತ್ತವೆ. ಈ ಬಿಳಿ ರಕ್ತಕಣಗಳು ಗುಂಪಾಗಿ ವೈರಾಣುಗಳ ವಿರುದ್ಧ ಹೋರಾಡುವುದರಿಂದ ಇವು ಹಸಿರು ಛಾಯೆಯನ್ನು ಪಡೆದುಕೊಳ್ಳುತ್ತದೆ


* ಬಿಳಿ ಬಣ್ಣದ ಕಫವು ವೈರಲ್ ಸೋಂಕನ್ನು ಸೂಚಿಸುತ್ತದೆ. ಅಲ್ಲದೆ, ಇದು ದೀರ್ಘಕಾಲದ ಶ್ವಾಸಕೋಶದ ಖಾಯಿಲೆ ಅಥವಾ ಬ್ರಾಂಕೈಟಿಸ್ (ಶ್ವಾಸನಾಳದ ಒಳಪೊರೆಯ ಊತ)ನ ಲಕ್ಷಣವೂ ಆಗಿರಬಹುದು.


* ಹಳದಿ ಬಣ್ದದ ಕಫ ಶರೀರದಲ್ಲಿರುವ ಸೋಂಕನ್ನು ಸೂಚಿಸುತ್ತದೆ, ಅಂದ್ರೆ ಇದು ಆ ರೋಗಾಣುಗಳ ವಿರುದ್ಧ ಹೋರಾಡುತ್ತಿದೆ ಎಂದು ಅರ್ಥ


* ಕೆಂಪು ಕಫ ರಕ್ತವನ್ನು ಒಳಗೊಂಡಿರುತ್ತದೆ. ಇದು ಅತ್ಯಂತ ಗಂಭೀರ ಆರೋಗ್ಯ ಸಮಸ್ಯೆಯನ್ನು ಸೂಚಿಸುತ್ತದೆ.
* ಕಪ್ಪು ಬಣ್ಣದ ಕಫ ಸಾಮಾನ್ಯವಾಗಿ ಹೊಗೆ, ಬೆಂಕಿ ಅಥವಾ ಧೂಳಿನಲ್ಲಿ, ಕಲ್ಲಿದ್ದಲು ಗಣಿಗಳಲ್ಲಿ ಕೆಲಸ ಮಾಡುವವರಿಗೆ ಕಾಣಿಸಿಕೊಳ್ಳುತ್ತದೆ. ಧೂಮಪಾನ ಮತ್ತು ಮದ್ಯಪಾನ ಮಾಡುವವರಿಗೂ ಈ ಕಫ ಬರಬಹುದು. ಇನ್ನು ದೇಹದೊಳಗೆ ಶಿಲೀಂಧ್ರದ ಸೋಂಕು, ಕಪ್ಪು ಶ್ವಾಸಕೋಶರೋಗ ಮುಂತಾದ ಲಕ್ಷಣಗಳನ್ನು ಈ ಕಫವು ಸೂಚಿಸುತ್ತದೆ.


Share this Story:

Follow Webdunia kannada

ಮುಂದಿನ ಸುದ್ದಿ

ಮುಖದ ಕಾಂತಿ ಹೆಚ್ಚಲು ಮನೆಯಲ್ಲಿಯೇ ತಯಾರಿಸಿದ ಈ ಫೇಸ್ ವಾಶ್ ಬಳಸಿ