Publish Date: Thu, 03 Oct 2019 (16:08 IST)
Updated Date: Thu, 03 Oct 2019 (16:10 IST)
ಪ್ರಶ್ನೆ: ನಾನು 26 ವರ್ಷದವನಾಗಿದ್ದೇನೆ. ನನಗೆ 6 ತಿಂಗಳ ಹಿಂದೆ ಎಂಗೇಜ್ ಮೆಂಟ್ ಆಗಿದೆ. ನಮ್ಮದು ಅರೆಂಜ್ ಮ್ಯಾರೇಜ್ ಆಗಲಿದೆ.
ಆದರೆ ನಾನು ಗರ್ಲ್ ಫ್ರೆಂಡ್ ಜೊತೆ ಬ್ರೇಕ್ ಅಪ್ ಮಾಡಿಕೊಂಡಿದ್ದರಿಂದ ಅವಳ ಜೊತೆ ಕಳೆದ ನೆನಪುಗಳು ನನ್ನನ್ನು ನಿತ್ಯವೂ ಕಾಡುತ್ತಿವೆ. ಇದರಿಂದ ನನ್ನ ಮದುವೆಯಾಗುವ ಹುಡುಗಿಯ ಜೊತೆ ಹಾಯಾಗಿರೋಕೆ ಆಗುತ್ತಿಲ್ಲ. ದಯವಿಟ್ಟು ನನಗೆ ಪರಿಹಾರ ತಿಳಿಸಿ.
ಉತ್ತರ: ಮಾಜಿ ಗೆಳೆತಿಯ ನೆನಪು ನಿಮಗೆ ಕಾಡುತ್ತಿರುವುದರಿಂದ ಈ ಸಮಸ್ಯೆಯಿಂದ ನೀವು ಹೊರಬರಲು ಮನಶಾಸ್ತ್ರಜ್ಞರ ಸಹಾಯ ಪಡೆದುಕೊಳ್ಳುವುದು ಉತ್ತಮ.
ತಜ್ಞ ವೈದ್ಯರ ಸಲಹೆ ಪಡೆದುಕೊಂಡು ಮದುವೆ ಬಗ್ಗೆ ನಿರ್ಧಾರ ಮಾಡಿ. ಕಳೆದು ಹೋದ ಸಮಯ ಹಾಗೂ ಹುಡುಗಿಯ ಬಗ್ಗೆ ಚಿಂತೆ ಮಾಡುತ್ತಾ ಅಥವಾ ನೆನಪು ಮಾಡುತ್ತಾ ಕುಳಿತರೆ ಸುಂದರ ಭವಿಷ್ಯ ಹಾಗೂ ವರ್ತಮಾನದ ಸಮಯ ನಿಮ್ಮ ಕೈತಪ್ಪದಂತೆ ನೋಡಿಕೊಳ್ಳಿ.