Webdunia - Bharat's app for daily news and videos

Install App

ತಲೆಕೂದಲು ಉದುರುವಿಕೆ ತಡೆಗಟ್ಟಲು ಬೆಸ್ಟ್ ಟಿಪ್ಸ್!

Webdunia
ಶನಿವಾರ, 20 ನವೆಂಬರ್ 2021 (19:48 IST)
ಜನರಿಗೆ ಜೀವನಶೈಲಿ ಮತ್ತು ಆಹಾರ ಪದ್ಧತಿಯ ಕಾರಣದಿಂದ ಆರೋಗ್ಯದ ತೊಂದರೆಗಳು ಎದುರಾಗುತ್ತವೆ.
ಚಿಕ್ಕ ವಯಸ್ಸಿಗೆ ತಲೆ ಕೂದಲು ಬೆಳ್ಳಗಾಗುವುದು ಮತ್ತು ಉದುರಿ ಹೋಗುವುದು ಇದರಲ್ಲಿ ಸೇರಿರುತ್ತದೆ. ಹಾಗಾಗಿ ಸಾಧ್ಯವಾದಷ್ಟು ಬೇಗನೆ ನಮ್ಮ ಆಹಾರ ಪದ್ಧತಿಯನ್ನು ಮತ್ತು ಜೀವನಶೈಲಿಯನ್ನು ಒಳ್ಳೆಯ ರೀತಿಗೆ ಬದಲಿಸಿಕೊಂಡರೆ, ಆರೋಗ್ಯಕರವಾದ ಮತ್ತು ಸೊಂಪಾದ ದಟ್ಟಣೆ ಹೊಂದಿರುವ ತಲೆಕೂದಲನ್ನು ಪಡೆಯಲು ಅನುಕೂಲವಾಗುತ್ತದೆ.
ಹಾಗಾದರೆ ತಲೆಕೂದಲು ಉದುರುವಿಕೆ ಸಮಸ್ಯೆಯಿಂದ ಹೊರಬರಬೇಕಾದರೆ ಪುರುಷರು ಏನು ಮಾಡಬಹುದು ಎಂಬುದನ್ನು ಈ ಲೇಖನದಲ್ಲಿ ನೋಡೋಣ
ಆಹಾರ ಪದ್ಧತಿ
ಯಾವಾಗಲೂ ನಮ್ಮ ದೇಹಕ್ಕೆ ಪೌಷ್ಟಿಕ ಸತ್ವಗಳನ್ನು ನೀಡುವಂತಹ ಆಹಾರ ಪದಾರ್ಥಗಳನ್ನು ನಾವು ಹೆಚ್ಚಾಗಿ ಸೇವನೆ ಮಾಡಬೇಕು. ಏಕೆಂದರೆ ಇವುಗಳಲ್ಲಿ ವಿಟಮಿನ್ ಈ ಅಂಶ ಹೆಚ್ಚಾಗಿದೆ ಜೊತೆಗೆ ಆರೋಗ್ಯಕರವಾದ ಕೊಬ್ಬಿನ ಅಂಶಗಳು ಕೂಡ ಇರುವುದರಿಂದ ನಾವು ಸದಾ ಆರೋಗ್ಯಕರವಾಗಿ ಬದುಕಲು ಸಾಧ್ಯವಾಗುತ್ತದೆ.
ನೀರು
ಪೌಷ್ಟಿಕಾಂಶ ಸಹಿತ ಆಹಾರಗಳ ಜೊತೆಗೆ ನೀರಿನ ಅಂಶವನ್ನು ಕೂಡ ಹೆಚ್ಚಾಗಿ ಸೇವನೆ ಮಾಡಬೇಕು. ಎಳನೀರು, ಕಲ್ಲಂಗಡಿ ಹಣ್ಣು, ಸೀಬೆಹಣ್ಣು, ಸೇಬು ಹಣ್ಣು, ಟೊಮೆಟೊ ಹಣ್ಣು, ಕಿತ್ತಳೆ ಹಣ್ಣು, ಮೋಸಂಬಿ ಹಣ್ಣು, ದಾಳಿಂಬೆ ಹಣ್ಣು ಇವುಗಳನ್ನು ತಿನ್ನಬೇಕು ಅಥವಾ ಅವುಗಳಿಂದ ತಾಜಾ ಹಣ್ಣುಗಳ ರಸ ತಯಾರುಮಾಡಿ ಸೇವನೆ ಮಾಡಬೇಕು.
ವಿಟಮಿನ್ ಕೊರತೆ
ತಲೆಕೂದಲು ಉದುರುವಿಕೆ ಪ್ರಮುಖ ಕಾರಣವೆಂದರೆ ದೇಹದಲ್ಲಿ ವಿಟಮಿನ್ ಅಂಶಗಳ ಕೊರತೆ ಉಂಟಾಗುವುದು. ಬಹಳಷ್ಟು ಪುರುಷರು ಚಿಕ್ಕ ವಯಸ್ಸಿನಿಂದಲೂ ಪೌಷ್ಟಿಕಾಂಶಗಳನ್ನು ಒಳಗೊಂಡ ಆಹಾರಗಳನ್ನು ಸೇವನೆ ಮಾಡುತ್ತಿರುವುದರಿಂದ ದೊಡ್ಡವರಾಗುತ್ತಿದ್ದಂತೆ ಇಂತಹ ಸಮಸ್ಯೆಗೆ ಕಾರಣವಾಗುತ್ತಾರೆ.
ತಜ್ಞರ ಸಲಹೆ

ತಲೆ ಕೂದಲು ಉದುರುವಿಕೆ ಸಮಸ್ಯೆಯಿಂದ ಹೊರ ಬರುವ ಮುಂಚೆ ಯಾವ ಕಾರಣಕ್ಕೆ ತಲೆ ಕೂದಲು ಉದುರಲು ಪ್ರಾರಂಭವಾಗಿದೆ ಎಂಬುದರ ಮೂಲವನ್ನು ಮೊದಲು ಪತ್ತೆ ಹಚ್ಚುವ ಪ್ರಯತ್ನವನ್ನು ಮಾಡಬೇಕು. ಅನುವಂಶೀಯತೆಯ ಕಾರಣವಾಗಿದ್ದರೆ ಅದಕ್ಕೆ ಬೇರೆಯದೇ ಪರಿಹಾರಗಳು ಇರುತ್ತವೆ.
ಹೇರ್ ಸ್ಟೈಲ್
ಇತ್ತೀಚಿನ ಯುವಪೀಳಿಗೆ ಮಾಡುತ್ತಿರುವ ಒಂದು ತಪ್ಪು ಎಂದರೆ ಅದು ಹೊಸಬಗೆಯ ಹೇರ್ ಸ್ಟೈಲ್ ಮತ್ತು ಹೇರ್ ಕಲರಿಂಗ್ ತಂತ್ರಗಳಿಗೆ ಮೊರೆ ಹೋಗುತ್ತಿರುವುದು. ಇಲ್ಲಿ ವಿವಿಧ ಎಲೆಕ್ಟ್ರಾನಿಕ್ ಉಪಕರಣಗಳ ಬಳಕೆಯಾಗುವುದರಿಂದ ಮತ್ತು ಹೆಚ್ಚಿನ ತಾಪಮಾನ ತಲೆಕೂದಲಿಗೆ ತಗಲುವುದರಿಂದ ತಲೆಕೂದಲಿನ ಹಾನಿಯಾಗುವುದು ಜಾಸ್ತಿ ಇರುತ್ತದೆ.
ಮಾನಸಿಕ ಒತ್ತಡ
ಹೆಚ್ಚಾಗಿ ಒಂಟಿತನದ ಭಾವನೆಯಲ್ಲಿ ಸಂಬಂಧಗಳನ್ನು ಮರೆತು ಎಲ್ಲರೂ ಕಳೆದುಹೋಗುತ್ತಿದ್ದಾರೆ. ಕೇವಲ ಕಂಪ್ಯೂಟರ್, ಮೊಬೈಲ್ ಮತ್ತು ಆಫೀಸ್ ಇಷ್ಟೇ ಪ್ರಪಂಚವಾಗಿದೆ. ಹಾಗಾಗಿ ಇಂತಹ ಒಂದು ವಾತಾವರಣದಿಂದ ಸ್ವಲ್ಪ ಪಕ್ಕಕ್ಕೆ ಸರಿದರೆ, ಮಾನಸಿಕ ಒತ್ತಡದ ನಿವಾರಣೆಯಾಗುತ್ತದೆ ಮತ್ತು ತಲೆ ಕೂದಲು ಉದುರುವಿಕೆ ಸಮಸ್ಯೆ ಕ್ರಮೇಣವಾಗಿ ಕಡಿಮೆಯಾಗುತ್ತದೆ ಎಂದು ಹೇಳಬಹುದು.
ವ್ಯಾಯಾಮ
ದೇಹಕ್ಕೆ ಕಸರತ್ತನ್ನು ಒದಗಿಸಲು ಪುರುಷರು ಯಾವುದೇ ಕಾರಣಕ್ಕೂ ನಿರ್ಲಕ್ಷತೆ ವಹಿಸಬಾರದು. ಸಿಗುವ ಸ್ವಲ್ಪ ಸಮಯದಲ್ಲಿ ದೇಹದ ಸದೃಢತೆಯ ಕಡೆಗೆ ಗಮನ ಕೊಟ್ಟು ಆರೋಗ್ಯಕರವಾದ ದೇಹವನ್ನು ಹೊಂದಲು ಸಾಧ್ಯವಾದಷ್ಟು ವ್ಯಾಯಾಮವನ್ನು ದೇಹಕ್ಕೆ ಒದಗಿಸಬೇಕು. ಇದರಿಂದ ತಲೆ ಕೂದಲಿನ ಬೆಳವಣಿಗೆ ಕೂಡ ಅಭಿವೃದ್ಧಿಯಾಗುತ್ತದೆ. ಚರ್ಮದ ಕಾಂತಿ ಕೂಡ ಹೆಚ್ಚಾಗುತ್ತದೆ.

 

ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕಲ್ಲಂಗಡಿ ಹಣ್ಣನ್ನು ಫ್ರಿಡ್ಜ್ ನಲ್ಲಿಟ್ಟು ಸೇವಿಸುತ್ತಿದ್ದೀರೆ ಇದನ್ನು ಓದಿ

ಪೇಟೆಯಿಂದ ತಂದ ಮಾವಿನ ಹಣ್ಣು ಸೇವಿಸುವ ಮೊದಲು ಈ ಟಿಪ್ಸ್ ಫಾಲೋ ಮಾಡಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ಮುಂದಿನ ಸುದ್ದಿ
Show comments