ಸಾಮಾನ್ಯವಾಗಿ ಶೀತ, ಕೆಮ್ಮು, ಜ್ವರದಂತಹ ಸಮಸ್ಯೆಗಳು ಚಳಿಗಾಲದಲ್ಲಿ ಕಾಡುವುದು. ಇದನ್ನು ತಡೆಯಲು ದೇಹದ ಪ್ರತಿರೋಧಕ ಶಕ್ತಿಯು ಪ್ರಬಲವಾಗಿ ಇರಬೇಕು.
ಇದಕ್ಕಾಗಿ ಚಳಿಗಾಲದಲ್ಲಿ ಯಾವಾಗಲೂ ಬಿಸಿ ಹಾಗೂ ಪೋಷಕಾಂಶಗಳಿರುವ ಆಹಾರ ಸೇವನೆ ಮಾಡಬೇಕು.
ಕೆಲವೊಂದು ಗಿಡಮೂಲಿಕೆಗಳು ಹಾಗೂ ಮಸಾಲೆಗಳು ಸಂಪೂರ್ಣ ಆರೋಗ್ಯ ಕಾಪಾಡುವುದು. ಅದರಲ್ಲೂ ಬೆಳ್ಳುಳ್ಳಿಯಿಂದ ತಯಾರಿಸಿದ ವ್ಯಂಜನಗಳು ದೇಹದ ಆರೋಗ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುವುದು. ಬೆಳ್ಳುಳ್ಳಿಯು ಅಡುಗೆಯ ರುಚಿ ಹಾಗೂ ಸುವಾಸನೆಯನ್ನು ವೃದ್ಧಿಸುವುದು. ಇದನ್ನು ಹಲವಾರು ಬಗೆಯಿಂದ ನಾವು ತಯಾರಿಸುವ ವ್ಯಂಜನಗಳಲ್ಲಿ ಬಳಸಬಹುದು.
ಹಲವಾರು ಬಗೆಯ ಔಷಧೀಯ ಗುಣಗಳನ್ನು ಹೊಂದಿರುವಂತಹ ಬೆಳ್ಳುಳ್ಳಿಯಲ್ಲಿ ಆಂಟಿಆಕ್ಸಿಡೆಂಟ್, ಉರಿಯೂತ ಶಮನಕಾರಿ, ವೈರಲ್ ವಿರೋಧಿ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಇವೆ. ಬೆಳ್ಳುಳ್ಳಿಯಲ್ಲಿ ವಿಟಮಿನ್ ಬಿ, ವಿಟಮಿನ್ ಸಿ, ಫಾಲಟೆ, ಕ್ಯಾಲ್ಸಿಯಂ, ಕಬ್ಬಿಣಾಂಶ, ಮೆಗ್ನಿಶಿಯಂ, ಮ್ಯಾಂಗನೀಸ್, ಪೋಸ್ಪರಸ್, ಪೊಟಾಶಿಯಂ, ಸೋಡಿಯಂ ಮತ್ತು ಸತು ಇದೆ. ಪ್ರತೀ 100 ಗ್ರಾಂ ಬೆಳ್ಳುಳ್ಳಿಯಲ್ಲಿ 150 ಕ್ಯಾಲರಿ, 33 ಗ್ರಾಂ ಕಾರ್ಬ್ಸ್, 6.36 ಗ್ರಾಂ ಪ್ರೋಟೀನ್ ಇದೆ.
ಚಳಿಗಾಲದಲ್ಲಿ ಬೆಳ್ಳುಳ್ಳಿಯನ್ನು ಆಹಾರ ಕ್ರಮದಲ್ಲಿ ಬಳಸಿಕೊಂಡರೆ ಅದರಿಂದ ಯಾವೆಲ್ಲಾ ಆರೋಗ್ಯ ಲಾಭಗಳು ಸಿಗುವುದು ಎಂದು ನಾವು ತಿಳಿಯುವ. ಕೆಮ್ಮುಮತ್ತುಶೀತ
ಚಳಿಗಾಲದ ಸಂದರ್ಭದಲ್ಲಿ ಶೀತ, ಕೆಮ್ಮು, ಗಂಟಲಿನ ಊತ ಸಾಮಾನ್ಯ. ಬೆಳ್ಳುಳ್ಳಿಯು ಇಂತಹ ಸಮಸ್ಯೆಗಳಿಂದ ಪರಿಹಾರ ನೀಡುವುದು. ಬೆಳ್ಳುಳ್ಳಿಯನ್ನು ಸೂಪ್ ಇತ್ಯಾದಿಗಳಲ್ಲಿ ಬಳಕೆ ಮಾಡಿಕೊಂಡರೆ ಅದು ತುಂಬಾ ಪರಿಣಾಮಕಾರಿ ಎಂದು ತಜ್ಞರು ಹೇಳುವರು. ನಮ್ಮ ರಾಜ್ಯದಲ್ಲಿ ಬೆಳ್ಳುಳ್ಳಿ ಚಟ್ನಿಯು ತುಂಬಾ ಜನಪ್ರಿಯವಾಗಿದ್ದು, ಇದನ್ನು ಚಳಿಗಾಲದಲ್ಲಿ ಹೆಚ್ಚಾಗಿ ಬಳಸಬಹುದು. ತೂಕಇಳಿಕೆ
ತೂಕ ಇಳಿಸಲು ಪ್ರಯತ್ನಿಸುತ್ತಿರುವ ಜನರಿಗೆ ಚಳಿಗಾಲವು ತುಂಬಾ ಕಠಿಣ ಸಮಯವಾಗಿರುವುದು. ಚಳಿಗಾಲದಲ್ಲಿ ಎದ್ದು ಜಿಮ್ ಗೆ ಹೋಗುವುದು ತುಂಬಾ ಉದಾಸೀನತೆ ತರಿಸುವುದು. ಆದರೆ ಬೆಳ್ಳುಳ್ಳಿಯು ನಿಮ್ಮ ಕೆಲಸವನ್ನು ಸುಲಭವಾಗಿಸುವುದು. ಬೆಳ್ಳುಳ್ಳಿಯಲ್ಲಿ ಇರುವಂತಹ ಹಲವಾರು ಬಗೆಯ ಆಂಟಿಆಕ್ಸಿಡೆಂಟ್ ಗಳು ದೇಹವನ್ನು ನಿರ್ವಿಷಗೊಳಿಸುವುದು ಮತ್ತು ಚಯಾಪಚಯವನ್ನು ಆರೋಗ್ಯವಾಗಿಡುವುದು. ಇದರಿಂದ ದೇಹದ ತೂಕ ಇಳಿಸಲು ಸಹಕಾರಿ. ಹಸಿ ಬೆಳ್ಳುಳ್ಳಿ ಮತ್ತು ಜೇನುತುಪ್ಪ ಸೇವನೆ ಮಾಡಿದರೆ ಅದರಿಂದ ತೂಕ ಇಳಿಸಲು ಸಹಕಾರಿ.