Select Your Language

Notifications

webdunia
webdunia
webdunia
webdunia

ರುಚಿಕರವಾದ ಚೋಲೆ ಚಾಟ್ಸ್ ರೆಸಿಪಿ

ರುಚಿಕರವಾದ ಚೋಲೆ ಚಾಟ್ಸ್ ರೆಸಿಪಿ
ಮೈಸೂರು , ಶನಿವಾರ, 13 ನವೆಂಬರ್ 2021 (08:13 IST)
ಸಂಜೆ ಹೊತ್ತಿನಲ್ಲಿ ಏನಾದರೂ ಚಾಟ್ಸ್ ತಿನ್ನುವ ಆಸೆ ಆಗುವುದು ಕಾಮನ್, ಹಾಗಂತ ಈ ಸಮಯದಲ್ಲಿ ಮಕ್ಕಳನ್ನು ಕರೆದುಕೊಂಡು ಹೊರಗಡೆ ಹೋಗುವುದು ಅಷ್ಟು ಸುರಕ್ಷಿತವಲ್ಲ ಅಲ್ಲವೇ?
ಹಾಗಾದ್ರೆ ಚಾಟ್ಸ್ ತಿನ್ನುವ ಆಸೆ ಆದ್ರೆ ಏನು ಮಾಡ್ಲಿ ಎಂಬ ಟೆನ್ಷನ್ ಬಿಡಿ, ಮನೆಯಲ್ಲಿಯೇ ಚೋಲೆ ಚಾಟ್ಸ್ ಮಾಡಿ ಸವಿಯಿರಿಹೌದು, ಈ ಸಾಯಂಕಾಲದ ಸಮಯದಲ್ಲಿ ಬಾಯಾಡಿಸಲು ಅದ್ಭುತ ಆಯ್ಕೆ ಆಗುವುದು ಚೋಲೆ ಚಾಟ್. ಇದನ್ನು ಕಾಬುಲಿ ಚನ್ನಾ ಚಾಟ್ ಎಂದೂ ಸಹ ಕರೆಯಲಾಗುವುದು. ಸಮೃದ್ಧವಾದ ಪ್ರೋಟೀನ್ ಅನ್ನು ಒಳಗೊಂಡಿರುವ ಚೋಲೆ ಚಾಟ್ ದೇಹಕ್ಕೆ ಅಗತ್ಯವಾದ ಪ್ರೋಟೀನ್ ನೀಡುತ್ತದೆ.ಇದು ದೇಹದಲ್ಲಿ ಇರುವ ಅನಗತ್ಯವಾದ ಕೊಬ್ಬನ್ನು ಕರಗಿಸಲು ಸಹಾಯ ಮಾಡುವುದು. ಈ ಪಾಕವಿಧಾನದಲ್ಲಿ ಚೋಲೆಯ ಜೊತೆಗೆ ಈರುಳ್ಳಿ, ಟೊಮೆಟೊ ಸೇರಿದಂತೆ ಇನ್ನಿತರ ಆರೋಗ್ಯಕರ ಮಸಾಲೆಯನ್ನು ಸೇರಿಸಲಾಗುವುದು.ಹಾಗಾಗಿ ಈ ರೆಸಿಪಿಯು ನಾಲಿಗೆಗೆ ಅದ್ಭುತ ರುಚಿ ಮತ್ತು ದೇಹಕ್ಕೆ ಉತ್ತಮ ಪೋಷಣೆ ನೀಡುವುದು.
ಬೇಕಾಗುವ ಸಾಮಗ್ರಿಗಳು
•1 ಕಪ್ ಬೇಯಿಸಿದ ದಪ್ಪ ಕಡಲೆ
•1 ಕಪ್ onion
•1 ಕಪ್ ಟೊಮೆಟೋ
•1/2 ಚಮಚ ಕೊತ್ತಂಬರಿ ಪುಡಿ
•1 ಚಮಚ ಚೋಲ ಮಸಾಲ
•1 ಚಮಚ ಖಾರದ ಪುಡಿ
•1 ಚಮಚ ಚಾಟ್ ಮಸಾಲ
•1 ಚಮಚ ತುರಿದ ಶುಂಠಿ
•1 ಚಮಚ ಕತ್ತರಿಸಿದ ಹಸಿಮೆಣಸಿನಕಾಯಿ
•2 - ನಿಂಬೆಯ ತುಂಡುಗಳು
ಒಗ್ಗರಣೆ
•3 ಚಮಚ ಸಂಸ್ಕರಿಸಿದ ಎಣ್ಣೆ
ಒಂದು ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಸೇರಿಸಿ, ಬಿಸಿ ಮಾಡಲು ಇಡಿ.- ಎಣ್ಣೆ ಬಿಸಿಯಾದ ಬಳಿಕ ಹೆಚ್ಚಿಕೊಂಡ ಈರುಳ್ಳಿ ಸೇರಿಸಿ ಹುರಿಯಿರಿ.- ಈರುಳ್ಳಿ ಸ್ವಲ್ಪ ಬೆಂದ ನಂತರ ಧನಿಯಾ ಪುಡಿ, ಕೆಂಪು ಮೆಣಸಿನ ಪುಡಿ ಮತ್ತು ಚೋಲೆ ಮಸಾಲ ಸೇರಿಸಿ, ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
ಬಳಿಕ ತುರಿದ ಶುಂಠಿ, ಹೆಚ್ಚಿಕೊಂಡ ಟೊಮೆಟೊ ಮತ್ತು ಬೇಯಿಸಿಕೊಂಡ ಚೋಲೆಯ ಸ್ವಲ್ಪ ನೀರನ್ನು ಸೇರಿಸಿ, ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿಇನ್ನು ಬೇಯಿಸಿಕೊಂಡ ಚೋಲೆಯನ್ನು ಸೇರಿಸಿ, ನಂತರ ಎಲ್ಲಾ ಸಾಮಾಗ್ರಿಗಳು ಚೆನ್ನಾಗಿ ಮಿಶ್ರವಾಗುವಂತೆ ಸೌಟು ಆಡಿಸಿ.ಚಾಟ್ ಖಾದ್ಯದ ಸ್ಥಿರತೆ ದಪ್ಪವಾಗಲು ಕೆಲವು ಚೋಲೆಗಳನ್ನು ಕಿವುಚಿ ಅಥವಾ ಅರೆಯಿರಿ.ಮಿಶ್ರಣವೆಲ್ಲಾ ಚೆನ್ನಾಗಿ ಬೆರೆತು ಗಟ್ಟಿಯಾಗಲು 5 ನಿಮಿಷ ಬೇಯಿಸಿ.
ಚಾಟ್ ಮಸಾಲ ಸೇರಿಸಿ ಒಮ್ಮೆ ಮಿಶ್ರಗೊಳಿಸಿ.ನಂತರ ಪ್ಲೇಟ್ಗೆ ವರ್ಗಾಯಿಸಿ, ಹೆಚ್ಚಿಕೊಂಡ ಈರುಳ್ಳಿ, ಕೊತ್ತಂಬರಿ ಸೊಪ್ಪು, ಹಸಿಮೆಣಸಿನಕಾಯಿ, ಆಲೂ ಭುಜಿಯಾದಿಂದ ಅಲಂಕರಿಸಿ, ಸವಿಯಲು ನೀಡಿ.


Share this Story:

Follow Webdunia kannada

ಮುಂದಿನ ಸುದ್ದಿ

ಸೆಲೆಬ್ರೆಟಿಗಳ ಫಿಟ್ನೆಸ್ ಸೀಕ್ರೆಟ್ ಏನು ಗೊತ್ತಾ?