Daily Horoscope
✕

ಬೆಂಗಾಲಿ ಶೈಲಿಯ ಫಿಶ್‌ಕರಿ

Webdunia
ಸೋಮವಾರ, 8 ಜನವರಿ 2018 (19:02 IST)
ಬೇಕಾಗುವ ಸಾಮಾಗ್ರಿಗಳು
ರೋಹೂ ಅಥವಾ ಕಾಟ್ಲಾ ಮೀನು ಅರ್ಧ ಕೆಜಿ
ಸಾಸಿವೆ ಪೇಸ್ಟ್ 2 ಚಮಚ
ಅರಿಶಿಣ ಪುಡಿ 1 ಚಮಚ
ರುಚಿಗೆ ತಕ್ಕ ಉಪ್ಪು
ಸಾಸಿವೆ ಎಣ್ಣೆ 4 ಚಮಚ
ಸಾಸಿವೆ ಅರ್ಧ ಚಮಚ
ಕಲೋಂಜಿ 1 ಚಮಚ (ಈರುಳ್ಳಿ ಬೀಜ)
ಒಣ ಮೆಣಸು 4
ಲವಂಗದ ಎಲೆ 1
ಶುಂಠಿ ಪೇಸ್ಟ್ 2 ಚಮಚ
ಬೆಳ್ಳುಳ್ಳಿ ಪೇಸ್ಟ್‌ 2 ಚಮಚ
ಈರುಳ್ಳಿ 3
ಕೊತ್ತಂಬರಿ ಪುಡಿ 2 ಚಮಚ
ಹಸಿ ಮೆಣಸು 2
ಸ್ವಲ್ಪ ಕೊತ್ತಂಬರಿ ಸೊಪ್ಪು
ನಿಂಬೆಹಣ್ಣು
ಮಾಡುವ ವಿಧಾನ:
 
* ಮೀನಿನ ತುಂಡುಗಳನ್ನು ಚೆನ್ನಾಗಿ ತೊಳೆದು ನಿಂಬೆರಸ, ಸ್ವಲ್ಪ ಅರಿಶಿಣ ಹಾಗೂ ಉಪ್ಪು ಹಾಕಿ ಮಿಕ್ಸ್‌ ಮಾಡಿ ಅರ್ಧ ಗಂಟೆ ಇಡಿ. ನಂತರ 2 ಚಮಚ ಸಾಸಿವೆಎಣ್ಣೆ ಹಾಕಿ ಅದರಲ್ಲಿ ಮೀನನ್ನು ಸ್ವಲ್ಪ ಫ್ರೈ ಮಾಡಿ, ಎಣ್ಣೆಯಿಂದ ತೆಗೆದು ತಟ್ಟೆಯಲ್ಲಿಡಿ.
 
* ನಂತರ ಪ್ಯಾನ್‌ಗೆ ಮತ್ತೆ ಎರಡು 2 ಚಮಚ ಎಣ್ಣೆ ಹಾಕಿ ಬಿಸಿ ಮಾಡಿ, ಅದರಲ್ಲಿ ಸಾಸಿವೆ ಎಣ್ಣೆ, ಈರುಳ್ಳಿ ಬೀಜ, ಒಣ ಮೆಣಸು, ಲವಂಗದ ಎಲೆ ಹಾಕಿ ಸಾಸಿವೆ ಚಟಾಪಟಾ ಶಬ್ದ ಮಾಡುವಾಗ ಶುಂಠಿ, ಬೆಳ್ಳುಳ್ಳಿ ಪೇಸ್ಟ್‌ ಹಾಕಿ 1 ನಿಮಿಷ ಫ್ರೈ ಮಾಡಿ, ನಂತರ ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಹುರಿಯಿರಿ.
 
* ನಂತರ ಸಾಸಿವೆ ಪೇಸ್ಟ್‌ ಹಾಕಿ, ಕೆಂಪು ಮೆಣಸಿನ ಪುಡಿ, ಕೊತ್ತಂಬರಿ ಪುಡಿ, ಅರಿಶಿಣ ಪುಡಿ ಹಾಕಿ ಮಸಾಲೆಯಿಂದ ಎಣ್ಣೆ ಬೇರ್ಪಡುವವರೆಗೆ ಬೇಯಿಸಿ. ನಂತರ ಒಂದು ಕಪ್‌ ನೀರು ಹಾಕಿ, ರುಚಿಗೆ ತಕ್ಕ ಉಪ್ಪು ಸೇರಿಸಿ, ಕತ್ತರಿಸಿದ ಹಸಿ ಮೆಣಸು ಹಾಕಿ ಕುದಿಸಿ. ನಂತರ ಮೀನು ಹಾಕಿ ಮತ್ತೆ 5 ನಿಮಿಷ ಬೇಯಿಸಿ ನಂತರ ಉರಿಯಿಂದ ಇಳಿಸಿ ಅರ್ಧ ಅಥವಾ ಒಂದು(ಗಾತ್ರದ ಮೇಲೆ ಅವಲಂಭಿಸಿರುತ್ತದೆ) ನಿಂಬೆ ಹಣ್ಣಿನ ರಸ ಹಾಕಿದರೆ ಬೆಂಗಾಲಿ ಮೀನಿನ ಸಾರು ರೆಡಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಮುಟ್ಟಿನ ಮುನ್ನ ಅಥವಾ ನಂತರ ಮಹಿಳೆಯರಿಗೆ ತಲೆನೋವು ಬರುವುದೇಕೆ, ಪರಿಹಾರವೇನು

ಸದಾ ಹೊಟ್ಟೆ ಉಬ್ಬರವೇ, ಹಾಗಿದ್ದರೆ ಇದು ಕರುಳಿನ ಈ ಸಮಸ್ಯೆ ರಹಸ್ಯ ಸಂಕೇತಗಳು

ತಿನ್ನುವಾಗ ನಾಲಿಗೆ ಕಚ್ಚಿ ಗಾಯವಾದರೆ ತಕ್ಷಣ ಏನು ಮಾಡಬೇಕು

ದಿನಕ್ಕೆ ಎಷ್ಟು ಗಂಟೆ ಇಯರ್ಫೋನ್ ಬಳಸಬಹುದು, ಹೆಚ್ಚು ಬಳಸಿದರೆ ಏನಾಗುತ್ತದೆ ಗಮನಿಸಿ

ಸೀರೆಗಳು ಬಣ್ಣ ಮಾಸದಂತೆ ಇಟ್ಟುಕೊಳ್ಳಲು ಈ ಸೂಪರ್ ಐಡಿಯಾ ಬಳಸಿ

ಮುಂದಿನ ಸುದ್ದಿ
Show comments