Select Your Language

Notifications

webdunia
webdunia
webdunia
webdunia

ತಲೆದಿಂಬಿನ ಸಹಾಯವಿಲ್ಲದೇ ನಿದ್ರಿಸುವುದರ ಲಾಭಗಳೇನು ಗೊತ್ತಾ?

ತಲೆದಿಂಬಿನ ಸಹಾಯವಿಲ್ಲದೇ ನಿದ್ರಿಸುವುದರ ಲಾಭಗಳೇನು ಗೊತ್ತಾ?
ಬೆಂಗಳೂರು , ಶನಿವಾರ, 13 ಜನವರಿ 2018 (08:00 IST)
ಬೆಂಗಳೂರು: ಸಾಮಾನ್ಯವಾಗಿ ನಾವು ತಲೆದಿಂಬು ಇಟ್ಟುಕೊಂಡು ಮಲಗುತ್ತೇವೆ. ಆದರೆ ತಲೆದಿಂಬು ಇಟ್ಟುಕೊಳ್ಳದೇ ಮಲಗುವುದರಿಂದ ನಮ್ಮ ಆರೋಗ್ಯಕ್ಕೆ ಹಲವು ಲಾಭಗಳಿವೆ. ಅವು ಯಾವುವು ಗೊತ್ತಾ?
 

ಮುಖದ ಚರ್ಮಕ್ಕೆ
ತಲೆದಿಂಬು ಇಟ್ಟುಕೊಂಡು ಮಲಗುವುದರಿಂದ ನಿಮ್ಮ ಚರ್ಮ ಸಡಿಲಗೊಳ್ಳುತ್ತದೆ. ಪರಿಣಾಮವಾಗಿ ಮುಖದ ಚರ್ಮ ಬೇಗನೇ ಸುಕ್ಕುಗಟ್ಟಿದಂತಾಗುವುದು. ಹಾಗಾಗಿ ಮುಖದ ಸೌಂದರ್ಯದ ದೃಷ್ಟಿಯಿಂದ ತಲೆದಿಂಬು ಬೇಡ.

ಬೆನ್ನು ನೋವು
ಬೆನ್ನು ಅಥವಾ ಸೊಂಟ ನೋವಿದ್ದರೆ ವೈದ್ಯರು ತಲೆದಿಂಬು ಇಲ್ಲದೇ ಸಮತಟ್ಟಾದ ನೆಲದಲ್ಲಿ ಮಲಗಲು ಹೇಳುವುದು ನಾವು ನೋಡಿದ್ದೇವೆ. ಸಮತಟ್ಟಾದ ನೆಲದಲ್ಲಿ ಮಲಗುವುದರಿಂದ ನಮ್ಮ  ಬೆನ್ನುಲುಬಿಗೆ ವಿಶ್ರಾಂತಿ ಸಿಗುತ್ತದೆ.

ಉತ್ತಮ ನಿದ್ರೆ
ತಲೆದಿಂಬು ಇಲ್ಲದೇ ಮಲಗುವುದರಿಂದ ಸುಖ ನಿದ್ರೆ ನಿಮ್ಮದಾಗುತ್ತದೆ. ಅಧ್ಯಯನವೊಂದರಿಂದಲೂ ಇದು ದೃಢಪಟ್ಟಿದೆ.

ಜ್ಞಾಪಕ ಶಕ್ತಿ
ನಿಮಗೆ ಗೊತ್ತಾ? ತಲೆದಿಂಬು ಇಲ್ಲದೇ ಮಲಗುವುದರಿಂದ ಜ್ಞಾಪಕ ಶಕ್ತಿ ವೃದ್ಧಿಸುತ್ತದಂತೆ. ಎತ್ತರದ ತಲೆದಿಂಬು ಇಟ್ಟುಕೊಂಡು ಮಲಗುವಾಗ ಸರಿಯಾದ ನಿದ್ರೆ ಬರದು. ಸುಖ ನಿದ್ರೆಯಿಲ್ಲದೇ ನಮ್ಮ ಜ್ಞಾಪಕ ಶಕ್ತಿ ಚೆನ್ನಾಗಿ ಆಗದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಗರ್ಭಿಣಿಯರೇ ಈ ಹಣ್ಣುಗಳನ್ನು ತಿನ್ನುವಾಗ ಎಚ್ಚರವಹಿಸಿ