Publish Date: Sat, 13 Jan 2018 (07:11 IST)
Updated Date: Sat, 13 Jan 2018 (07:20 IST)
ಬೆಂಗಳೂರು : ಗರ್ಭಿಣಿಯರು ಆಹಾರವನ್ನು ಸೇವಿಸುವಾಗ ತುಂಬಾ ಎಚ್ಚರದಿಂದಿರಬೇಕು. ಎಲ್ಲಾ ಆಹಾರ ಪದಾರ್ಥಗಳನ್ನು ಅವರು ಸಾಮಾನ್ಯರಂತೆ ತಿನ್ನುವ ಹಾಗಿಲ್ಲ. ಒಂದು ವೇಳೆ ತಿಂದರೆ ಅವರಿಗೆ ಗರ್ಭಪಾತವಾಗುವ ಸಂಭವವಿರುತ್ತದೆ. ಹಾಗೆ ಕೆಲವು ವೇಳೆ ಅವರು ತಿನ್ನುವ ಆಹಾರ ಪದಾರ್ಥಗಳ ಪ್ರಭಾವ ಮಗುವಿನ ಮೇಲಾಗುತ್ತದೆ. ಅದಕ್ಕಾಗಿ ಅವರು ತಿನ್ನವ ಆಹಾರಗಳ ಬಗ್ಗೆ ಗಮನಹರಿಸಬೇಕು.
ಹಾಗೆ ಹಣ್ಣುಗಳನ್ನು ತಿಂದರೆ ದೇಹಕ್ಕೆ ಒಳ್ಳೆಯದು ಎಂದು ಹೇಳುತ್ತಾರೆ. ಆದರೆ ಗರ್ಭಿಣಿಯರು ಕೆಲವು ಹಣ್ಣುಗಳನ್ನು ಸೇವಿಸಬಾರದು. ಪಪಾಯ ಹಣ್ಣುನ್ನು ಗರ್ಭಿಣಿಯರು ತಿನ್ನಬಾರದು. ಇದರಲ್ಲಿ ಅಧಿಕವಾದ ಉಷ್ಣವಿರುವುದರಿಂದ ಗರ್ಭಪಾತವಾಗುವ ಸಂಭವವಿದೆ. ಹಾಗೆ ಪೈನಾಪಲ್ ಹಣ್ಣಿನಲ್ಲಿ ಬ್ರೊಮೆಲನಿಲ್ ಎಂಬ ಪದಾರ್ಥ ಅಧಿಕವಾಗಿದ್ದು ಅದು ನಮ್ಮ ಗರ್ಭಕಂಠವನ್ನು ಮೃದು ಮಾಡುವುದರಿಂದ ಗರ್ಭ ಹೊರಗೆ ಬಂದು ಬ್ಲೀಡಿಂಗ್ ಆಗುತ್ತದೆ. ಆದ್ದರಿಂದ ಗರ್ಭಿಣಿಯರು ಇದನ್ನು ತಿನ್ನಬಾರದು. ಗರ್ಭಿಣಿಯರು ದ್ರಾಕ್ಷಿ ಹಣ್ಣನ್ನು ಕೂಡ ತಿನ್ನಬಾರದು. ಇದರಲ್ಲಿ ಮಿಟಮಿನ್ ಎ, ಸಿ ಇರುವುದರಿಂದ ಅದು ಆರೋಗ್ಯಕ್ಕೆ ಒಳ್ಳೆಯದಾದರೂ ಅದನ್ನು ಬೆಳೆಯುವಾಗ ಹೆಚ್ಚಿನ ಪ್ರಮಾಣದಲ್ಲಿ ಕ್ರಿಮಿನಾಶಕಗಳನ್ನು ಬಳಸಿರುತ್ತಾರೆ. ಆದ್ದರಿಂದ ಇದನ್ನು ಎಷ್ಟೇ ತೊಳೆದರೂ ಕ್ರಿಮಿನಾಶಕ ಸ್ವಲ್ಪ ವಾದರು ಇರುತ್ತದೆಯಾದರಿಂದ ಗರ್ಭಿಣಿಯರು ಅದರಿಂದ ದೂರವಿರುವುದೇ ಉತ್ತಮ.
ಪೀಚ್ ಹಣ್ಣು , ನಕ್ಷತ್ರ ಸೇಬು(ಸ್ಟಾರ್ ಆ್ಯಪಲ್) ಹಾಗು ಸೀತಾಫಲ ಹಣ್ಣಿಗಳಲ್ಲಿ ತುಂಬಾ ಉಷ್ಣವಿರುವ ಕಾರಣ ಅವುಗಳನ್ನು ಕೂಡ ಗರ್ಭಿಣಿಯರು ತಿನ್ನಬಾರದು. ಲಿಚಿ ಹಣ್ಣಿನಲ್ಲಿ ಉಷ್ಣ ಹಾಗು ಸಕ್ಕರೆ ಅಂಶ ಜಾಸ್ತಿ ಇರುವುದರಿಂದ ಇದನ್ನು ಗರ್ಭಿಣಿಯರು ತಿಂದರೆ ಸಕ್ಕರೆ ಕಾಯಿಲೆ ಬರುವ ಸಂಭವವಿರುತ್ತದೆ. ಸೀಬೆ ಹಣ್ಣನ್ನು ಸಿಪ್ಪೆಯ ಜೊತೆಗೆ ಗರ್ಭಿಣಿಯರು ತಿಂದರೆ ಮಲಬದ್ದತೆ ಉಂಟಾಗುವುದರಿಂದ ಅದರ ಸಿಪ್ಪೆ ತೆಗೆದು ತಿನ್ನಬಹುದು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ