Publish Date: Tue, 13 Feb 2018 (05:10 IST)
Updated Date: Tue, 13 Feb 2018 (05:12 IST)
ಬೆಂಗಳೂರು: ಮೊದಲು ಸೆಕ್ಸ್ ಮಾಡುವಾಗ ಹಲವು ವಿಚಾರಗಳ ಬಗ್ಗೆ ಎಚ್ಚರವಿರಲೇಬೇಕು. ಇಲ್ಲದಿದ್ದರೆ ಎಡವಟ್ಟಾಗವುದನ್ನು ತಪ್ಪಿಸಲು ಸಾಧ್ಯವಿಲ್ಲ.
ರೆಡಿ ಇದ್ದೀನಾ?
ಸೆಕ್ಸ್ ಗೆ ಮೊದಲು ಮಾನಸಿಕವಾಗಿ ಸಿದ್ಧರಾಗಿರುವುದೂ ಮುಖ್ಯ. ಕೆಲವೊಮ್ಮೆ ಆತ/ಆಕೆ ಜತೆ ಸುತ್ತಾಡಲು ನಿಮಗಿಷ್ಟವಿರಬಹುದು. ಆದರೆ ದೈಹಿಕ ಸಂಪರ್ಕಕ್ಕೆ ಮನಸ್ಸು ಒಪ್ಪಬಹುದೇ ಎಂದು ಪ್ರಶ್ನೆ ಮಾಡಿಕೊಳ್ಳಿ.
ಆತ ವಿಶ್ವಾಸಾರ್ಹನೆ
ಕೈ ಹಿಡಿದ ಸಂಗಾತಿಯೇ ಆದರೂ ಮೊದಲು ಪರಸ್ಪರ ವಿಶ್ವಾಸ ಗಳಿಸುವುದು ಮುಖ್ಯ. ಸೆಕ್ಸ್ ಕೂಡಾ ಕರ್ತವ್ಯ ಎನ್ನುವ ರೀತಿ ಆದರೆ ಖುಷಿ ಸಿಗದು. ಮದುವೆಗೆ ಮುನ್ನ ಸಂಗಾತಿ ಜತೆ ಸೆಕ್ಸ್ ಸಂಬಂಧ ನಡೆಸುವ ಮೊದಲು ಆತ ಎಷ್ಟು ವಿಶ್ವಾಸಾರ್ಹ ಎಂದು ನೋಡುವುದು ಮುಖ್ಯ.
ಸರಿಯಾದ ಸಮಯ, ಸ್ಥಳ
ಇದು ಕೂಡಾ ಮುಖ್ಯ. ನಮ್ಮ ದೇಶದಲ್ಲಿ ಸಿಕ್ಕ ಸಿಕ್ಕಲೆಲ್ಲಾ ಲವ್ ಮಾಡುವ ಸಂಪ್ರದಾಯವಲ್ಲ. ಏಕಾಂತ, ರೊಮ್ಯಾಂಟಿಕ್ ಪರಿಸರವನ್ನು ಆಯ್ಕೆ ಮಾಡಿಕೊಳ್ಳಿ.
ಸುರಕ್ಷಿತ ಸಂಪರ್ಕ
ಮೊದಲ ಬಾರಿಗೆ ಸೆಕ್ಸ್ ಮಾಡುವಾಗ ಸೂಕ್ತ ಪ್ರೊಟೆಕ್ಷನ್ ಇರಲೇಬೇಕು. ಗರ್ಭಿಣಿಯಾಗದಂತೆ ತಡೆಯಲು, ಲೈಂಗಿಕ ರೋಗ ತಡೆಯಲು ಸುರಕ್ಷಿತ ಗರ್ಭನಿರೋಧಕ ಬಳಸಿ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ