Publish Date: Sun, 11 Feb 2018 (08:31 IST)
Updated Date: Sun, 11 Feb 2018 (08:34 IST)
ಬೆಂಗಳೂರು: ಮನೆ ಮದ್ದು ಯಾವತ್ತೂ ಅಡ್ಡ ಪರಿಣಾಮಗಳಿಲ್ಲದ, ಆರೋಗ್ಯಕರವಾದ ವಸ್ತು. ಕೂದಲುಗಳ ಆರೋಗ್ಯ ಚೆನ್ನಾಗಿರಬೇಕೆಂದರೆ ಮನೆಯಲ್ಲೇ ಹೇರ್ ಕಂಡೀಷನರ್ ತಯಾರಿಸಿ ಬಳಸುವುದು ಉತ್ತಮ.
ಅದಕ್ಕೆ ಬೇಕಾಗಿರುವುದು ವಿನೇಗರ್ ಮತ್ತು ಮೊಟ್ಟೆ, ಆಲಿವ್ ಆಯಿಲ್, ಜೇನು ತುಪ್ಪ ಮತ್ತು ನಿಂಬೆ ರಸ. ಎರಡರಿಂದ ಮೂರು ಮೊಟ್ಟೆ ಒಡೆದುಕೊಂಡು ಅದಕ್ಕೆ ಒಂದು ಚಮಚ ವಿನೇಗರ್ ಮತ್ತು ಎರಡು ಚಮಚ ನಿಂಬೆ ರಸ ಬೆರೆಸಿ. ಇದಕ್ಕೆ ಒಂದೂವರೆ ಚಮಚ ಆಲಿವ್ ಆಯಿಲ್ ಮತ್ತ ಒಂದು ಚಮಚ ಜೇನು ತುಪ್ಪ ಸೇರಿಸಿ.
ಇದನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಂಡು ದಪ್ಪ ಪೇಸ್ಟ್ ಮಾಡಿಕೊಳ್ಳಿ. ಈ ಮಿಶ್ರಣವನ್ನು ಕೂದಲಿಗೆ ಹಚ್ಚಿಕೊಂಡು 15 ನಿಮಿಷ ಬಿಡಿ. ನಂತರ ಚೆನ್ನಾಗಿ ಶುದ್ಧ ನೀರಿನಿಂದ ಕೂದಲು ತೊಳೆದುಕೊಳ್ಳಿ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ