Webdunia - Bharat's app for daily news and videos

Install App

ಗರ್ಭಿಣಿಯರೇ ಈ ಹಣ್ಣುಗಳನ್ನು ತಿನ್ನುವಾಗ ಎಚ್ಚರವಹಿಸಿ

Webdunia
ಶನಿವಾರ, 13 ಜನವರಿ 2018 (07:11 IST)
ಬೆಂಗಳೂರು : ಗರ್ಭಿಣಿಯರು ಆಹಾರವನ್ನು ಸೇವಿಸುವಾಗ ತುಂಬಾ ಎಚ್ಚರದಿಂದಿರಬೇಕು. ಎಲ್ಲಾ ಆಹಾರ ಪದಾರ್ಥಗಳನ್ನು ಅವರು ಸಾಮಾನ್ಯರಂತೆ ತಿನ್ನುವ ಹಾಗಿಲ್ಲ. ಒಂದು ವೇಳೆ ತಿಂದರೆ ಅವರಿಗೆ  ಗರ್ಭಪಾತವಾಗುವ ಸಂಭವವಿರುತ್ತದೆ. ಹಾಗೆ ಕೆಲವು ವೇಳೆ ಅವರು ತಿನ್ನುವ ಆಹಾರ ಪದಾರ್ಥಗಳ ಪ್ರಭಾವ ಮಗುವಿನ ಮೇಲಾಗುತ್ತದೆ. ಅದಕ್ಕಾಗಿ ಅವರು ತಿನ್ನವ ಆಹಾರಗಳ ಬಗ್ಗೆ ಗಮನಹರಿಸಬೇಕು.

 
ಹಾಗೆ ಹಣ್ಣುಗಳನ್ನು ತಿಂದರೆ ದೇಹಕ್ಕೆ ಒಳ್ಳೆಯದು ಎಂದು ಹೇಳುತ್ತಾರೆ. ಆದರೆ ಗರ್ಭಿಣಿಯರು ಕೆಲವು ಹಣ್ಣುಗಳನ್ನು ಸೇವಿಸಬಾರದು. ಪಪಾಯ ಹಣ್ಣುನ್ನು ಗರ್ಭಿಣಿಯರು ತಿನ್ನಬಾರದು. ಇದರಲ್ಲಿ ಅಧಿಕವಾದ ಉಷ್ಣವಿರುವುದರಿಂದ ಗರ್ಭಪಾತವಾಗುವ ಸಂಭವವಿದೆ. ಹಾಗೆ ಪೈನಾಪಲ್ ಹಣ್ಣಿನಲ್ಲಿ ಬ್ರೊಮೆಲನಿಲ್ ಎಂಬ ಪದಾರ್ಥ ಅಧಿಕವಾಗಿದ್ದು ಅದು ನಮ್ಮ ಗರ್ಭಕಂಠವನ್ನು ಮೃದು ಮಾಡುವುದರಿಂದ ಗರ್ಭ ಹೊರಗೆ ಬಂದು ಬ್ಲೀಡಿಂಗ್ ಆಗುತ್ತದೆ. ಆದ್ದರಿಂದ  ಗರ್ಭಿಣಿಯರು ಇದನ್ನು ತಿನ್ನಬಾರದು. ಗರ್ಭಿಣಿಯರು ದ್ರಾಕ್ಷಿ ಹಣ್ಣನ್ನು ಕೂಡ ತಿನ್ನಬಾರದು. ಇದರಲ್ಲಿ ಮಿಟಮಿನ್ ಎ, ಸಿ ಇರುವುದರಿಂದ ಅದು ಆರೋಗ್ಯಕ್ಕೆ ಒಳ್ಳೆಯದಾದರೂ ಅದನ್ನು ಬೆಳೆಯುವಾಗ ಹೆಚ್ಚಿನ ಪ್ರಮಾಣದಲ್ಲಿ ಕ್ರಿಮಿನಾಶಕಗಳನ್ನು ಬಳಸಿರುತ್ತಾರೆ. ಆದ್ದರಿಂದ ಇದನ್ನು ಎಷ್ಟೇ ತೊಳೆದರೂ ಕ್ರಿಮಿನಾಶಕ ಸ್ವಲ್ಪ ವಾದರು ಇರುತ್ತದೆಯಾದರಿಂದ ಗರ್ಭಿಣಿಯರು ಅದರಿಂದ ದೂರವಿರುವುದೇ ಉತ್ತಮ.

 
ಪೀಚ್ ಹಣ್ಣು , ನಕ್ಷತ್ರ ಸೇಬು(ಸ್ಟಾರ್ ಆ್ಯಪಲ್) ಹಾಗು ಸೀತಾಫಲ ಹಣ್ಣಿಗಳಲ್ಲಿ ತುಂಬಾ ಉಷ್ಣವಿರುವ ಕಾರಣ ಅವುಗಳನ್ನು ಕೂಡ ಗರ್ಭಿಣಿಯರು ತಿನ್ನಬಾರದು. ಲಿಚಿ ಹಣ್ಣಿನಲ್ಲಿ ಉಷ್ಣ ಹಾಗು ಸಕ್ಕರೆ ಅಂಶ ಜಾಸ್ತಿ ಇರುವುದರಿಂದ ಇದನ್ನು ಗರ್ಭಿಣಿಯರು ತಿಂದರೆ ಸಕ್ಕರೆ ಕಾಯಿಲೆ ಬರುವ ಸಂಭವವಿರುತ್ತದೆ. ಸೀಬೆ ಹಣ್ಣನ್ನು ಸಿಪ್ಪೆಯ ಜೊತೆಗೆ ಗರ್ಭಿಣಿಯರು ತಿಂದರೆ ಮಲಬದ್ದತೆ ಉಂಟಾಗುವುದರಿಂದ ಅದರ ಸಿಪ್ಪೆ ತೆಗೆದು ತಿನ್ನಬಹುದು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕಲ್ಲಂಗಡಿ ಹಣ್ಣನ್ನು ಫ್ರಿಡ್ಜ್ ನಲ್ಲಿಟ್ಟು ಸೇವಿಸುತ್ತಿದ್ದೀರೆ ಇದನ್ನು ಓದಿ

ಪೇಟೆಯಿಂದ ತಂದ ಮಾವಿನ ಹಣ್ಣು ಸೇವಿಸುವ ಮೊದಲು ಈ ಟಿಪ್ಸ್ ಫಾಲೋ ಮಾಡಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ಮುಂದಿನ ಸುದ್ದಿ
Show comments