Select Your Language

Notifications

webdunia
webdunia
webdunia
webdunia

ಚರ್ಮದ ಮೇಲಿನ ಕಪ್ಪು ಕಲೆ ನಿವಾರಿಸಲು ಈ ಮನೆಮದ್ದನ್ನು ಹಚ್ಚಿ

ಚರ್ಮದ ಮೇಲಿನ ಕಪ್ಪು ಕಲೆ ನಿವಾರಿಸಲು ಈ ಮನೆಮದ್ದನ್ನು ಹಚ್ಚಿ
ಬೆಂಗಳೂರು , ಮಂಗಳವಾರ, 8 ಡಿಸೆಂಬರ್ 2020 (09:28 IST)
ಬೆಂಗಳೂರು : ಸಾಮಾನ್ಯವಾಗಿ ಸೂರ್ಯ ಬೆಳಕಿಗೆ ಚರ್ಮವನ್ನು ಒಡ್ಡಿಕೊಳ್ಳುವುದರಿಂದ ದೇಹದಲ್ಲಿ ಮಚ್ಚೆಗಳು, ಕಪ್ಪು ಚುಕ್ಕೆಗಳು ಮೂಡುತ್ತವೆ. ಈ ಚರ್ಮದ ಸಮಸ್ಯೆಯನ್ನು ಹೋಗಲಾಡಿಸಲು ಈ ಮನೆಮದ್ದನ್ನು ಹಚ್ಚಿ.

*ನಿಂಬೆ ಹಣ್ಣಿನಲ್ಲಿ ಬ್ಲಿಚಿಂಗ್ ಗುಣವಿದ್ದು, ಕಪ್ಪು ಕಲೆಗಳನ್ನು ನಿವಾರಿಸುತ್ತದೆ. 3 ಚಮಚ ನಿಂಬೆ ರಸವನ್ನು ತೆಗೆದುಕೊಂಡು ನಿಮ್ಮ ಬೆರಳ ತುದಿಯಲ್ಲಿ ನಿಧಾನವಾಗಿ ಮಸಾಜ್ ಮಾಡಿ. 10 ನಿಮಿಷ ಬಿಟ್ಟು ವಾಶ್ ಮಾಡಿ. ಉತ್ತಮ ಫಲಿತಾಂಶ ಪಡೆಯಲು ಇದನ್ನು ದಿನಕ್ಕೆ 2 ಬಾರಿ ಬಳಸಿ.

*ಲೋಳೆರಸ ಚರ್ಮದ ವರ್ಣದ್ರವ್ಯವನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ. ಹಾಗಾಗಿ ಅಲೋವೆರಾ ಗಿಡದಿಂದ ಅಲೋವೆರಾ ಜೆಲ್ ತೆಗೆದುಕೊಂಡು ಮುಖದ ಪೀಡಿತ ಪ್ರದೇಶದ ಮೇಲೆ ಹಚ್ಚಿ. 15 ನಿಮಿಷಗಳ ಕಾಲ ಬಿಟ್ಟು ತಣ್ಣೀರಿನಲ್ಲಿ ತೊಳೆಯಿರಿ.

Share this Story:

Follow Webdunia kannada

ಮುಂದಿನ ಸುದ್ದಿ

ಕೂದಲು ಕಪ್ಪಾಗಿರಲು ಪ್ರತಿ ಬಾರಿ ಸ್ನಾನ ಮಾಡುವಾಗ ಹೀಗೆ ಮಾಡಿ