ಬೆಂಗಳೂರು : ನಮ್ಮ ದೇಹದಲ್ಲಿ ಬೆವರನ್ನು ಸೃಷ್ಟಿಸುವ ಸಾವಿರಾರು ಗ್ರಂಥಿಗಳಿವೆ. ದೇಹದ ಉಷ್ಣಾಂಶ ಹೆಚ್ಚಾದಾಗ ಎಕ್ರಿನ್ ಗ್ರಂಥಿಗಳು ಬೆವರನ್ನು ಉತ್ಪಾದಿಸುತ್ತವೆ. ಈ ಬೆವರನಲ್ಲಿ ಬ್ಯಾಕ್ಟೀರಿಯಾಗಳು ಸೇರಿಕೊಂಡಾಗ ಅದರಿಂದ ದೇಹ ದುರ್ವಾಸನೆ ಬರಲು ಶುರುವಾಗುತ್ತದೆ. ಇದನ್ನು ಕಡಿಮೆ ಮಾಡಲು ಇದನ್ನು ಹಚ್ಚಿ.
ಆಪಲ್ ಸೈಡರ್ ವಿನೆಗರ್ : ಇದು ಬೆವರಿನಲ್ಲಿರುವ ಬ್ಯಾಕ್ಟೀರಿಯಾಗಳನ್ನು ಕೊಲ್ಲಲ್ಲು ಸಹಕಾರಿ. ವಿನೆಗರ್ ನ್ನು ಬಿಸಿ ನೀರಿಗೆ ಹಾಕಿ ಸ್ನಾನ ಮಾಡುವುದರಿಂದ ದೇಹದಲ್ಲಿ ಬೆವರಿನ ದುರ್ವಾಸನೆಯಿಂದ ಕಾಪಾಡಬಹುದು.
ಆಲೂಗಡ್ಡೆ: ಇದು ದೇಹದ ಪಿಎಚ್ ಮಟ್ಟವನ್ನು ಸಮತೋಲನದಲ್ಲಿರಿಸುತ್ತದೆ. ಮತ್ತು ಅತಿಯಾಗಿ ಬೆವರುವುದನ್ನು ನಿವಾರಿಸುತ್ತದೆ. ಬೇವರು ಬರುವ ಸ್ಥಳಗಳಲ್ಲಿ ಆಲೂಗಡ್ಡೆಯನ್ನು ಪೀಸ್ ಗಳಿಂದ ಉಜ್ಜಬೇಕು ಅಥವಾ ಹತ್ತಿಯ ಸಹಾಯದಿಂದ ಅದರ ರಸವನ್ನು ಹಚ್ಚಬೇಕು. ಬಳಿಕ ತಣ್ಣೀರಿನಿಂದ ವಾಶ್ ಮಾಡಿ. ಇದರಿಂದ ಬೆವರುವುದು ಕಡಿಮೆಯಾಗುತ್ತದೆ.