Select Your Language

Notifications

webdunia
webdunia
webdunia
webdunia

ನಿತ್ಯ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬಾಳೆಹಣ್ಣು ತಿನ್ನುವ ಮೂಲಕ ತೂಕ ಇಳಿಸಿಕೊಳ್ಳಬಹುದು

ನಿತ್ಯ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬಾಳೆಹಣ್ಣು ತಿನ್ನುವ ಮೂಲಕ ತೂಕ ಇಳಿಸಿಕೊಳ್ಳಬಹುದು
Bangalore , ಭಾನುವಾರ, 18 ಜುಲೈ 2021 (17:19 IST)
ಬಾಳೆಹಣ್ಣು ತೂಕ ಜಾಸ್ತಿ ಮಾಡುತ್ತದೆ ಎಂದು ಜನರು ನಂಬಿದ್ದಾರೆ. ಆದರೆ ಇದು ಮೂರ್ಖತನ. ಏಕೆಂದರೆ ಪ್ರತಿದಿನ ಒಂದು ಬಾಳೆಹಣ್ಣುನ್ನು ತಿನ್ನುವುದರಿಂದ ನೀವು ನಿಮ್ಮ ತೂಕವನ್ನು ಇಳಿಸಿಕೊಳ್ಳಬಹುದು. ದಯವಿಟ್ಟು ಮಕ್ಕಳಿಗೆ ಜಂಕ್ ಫುಡ್ ಬದಲಿಗೆ ಬಾಳೆಹಣ್ಣು ನೀಡಿ ಅವರಿಗೆ ಬಾಳೆಹಣ್ಣು ಎಷ್ಟು ಉಪಯುಕ್ತವೆಂದು ಕಲಿಸಲು ಪ್ರಯತ್ನಿಸಿ. ಸೆಲೆಬ್ರಿಟಿಗಳು ಜಂಕ್ ಫುಡ್ ಬದಲಿಗೆ ಬಾಳೆಹಣ್ಣಿಗೆ ಹೇಗೆ ಆದ್ಯತೆ ನೀಡುತ್ತಾರೆ ಎಂಬುದರ ಉದಾಹರಣೆಗಳನ್ನು ನಿಮ್ಮ ಮಕ್ಕಳಿಗೆ ನೀಡಿ.

ಬಾಳೆಹಣ್ಣುತಿನ್ನುವುದರಿಂದಆಗುವಪ್ರಯೋಜನಗಳು.
•ಬಾಳೆಹಣ್ಣು ಶಕ್ತಿಯನ್ನು ನೀಡುತ್ತದೆ: ವ್ಯಾಯಾಮದ ನಂತರ ಬಾಳೆಹಣ್ಣು ತಿನ್ನುವುದರಿಂದ ಅರ್ಧದಷ್ಟು  ಶಕ್ತಿಯನ್ನು ನೀವು ಪಡೆಯುತ್ತೀರಿ. ಬಾಳೆಹಣ್ಣನ್ನು ತಿಂದರೆ ತೂಕ ಹೆಚ್ಚಾಗುತ್ತೆ ಎಂದು ನಂಬಿರುವ ಜನರೇ ಹೆಚ್ಚು. ಆದರೆ ಇದು ಸುಳ್ಳು ಎಂದು "ಫ್ಲಸ್ ಓನ್" ನಿಯತಕಾಲಿಕದಲ್ಲಿ ಪ್ರಕಟವಾದ ಅಧ್ಯಯನದಿಂದ ತಿಳಿದುಬಂದಿದೆ.ಈ ಅಧ್ಯಯನದಲ್ಲಿ ಬಾಳೆಹಣ್ಣುಗಳು ಶಕ್ತಿಯ ಮೂಲವಾಗಿದೆ ಎಂದು ವರದಿ ಮಾಡಲಾಗಿದೆ. ಈ ಆಧ್ಯನದಿಂದ ನೀವು ನಿಮ್ಮ ತೂಕವನ್ನು ಸರಿಯಾದ ರೀತಿಯಲ್ಲಿ ಇಳಿಸಿಕೊಳ್ಳಬಹುದು ಎಂದು ಕೂಡ ತಿಳಿದುಬಂದಿದೆ.
• ಇದು ನಿಮ್ಮ ಕರುಳನ್ನು ಕಾರ್ಯವನ್ನು ಸುಗಮಗೊಳಿಸುತ್ತದೆ:ಮಲವಿಸರ್ಜನೆಯನ್ನು ಸುಗಮವಾಗಿಸಲು ಬಾಳೆಹಣ್ಣುಗಳು ಸಹಾಯ ಮಾಡುತ್ತದೆ. ಮಾಗಿದ ಬಾಳೆಹಣ್ಣಿನಲ್ಲಿ ಪೆಕ್ಟಿನ್ ಎಂಬ ಆಹಾರದ ಫೈಬರ್ ಇದ್ದು, ಇದು ಕರುಳಿನಿಂದ ಮಲಕ್ಕೆ ನೀರನ್ನು ಸೆಳೆಯಬಲ್ಲದು, ಮಲವಿಸರ್ಜನೆ ಮತ್ತು ಮಲಬದ್ಧತೆಯನ್ನು ನಿವಾರಿಸಲು ನಿಮಗೆ ಸುಲಭವಾಗಿಸುತ್ತದೆ.
•ಕಡಿಮೆ ಸ್ನ್ಯಾಕ್ಸ್ ಸೇವಿಸಲು ಸಹಾಯ ಮಾಡುತ್ತದೆ:ನೀವು ಊಟಗಳ ನಡುವಿನ ಸ್ನ್ಯಾಕ್ಸ್ಗಳನ್ನು ಸಂಪೂರ್ಣವಾಗಿ ನಿಲ್ಲಿಸಲು ಬಾಳೆಹಣ್ಣು ಹೆಚ್ಚು ಸಹಾಯ ಮಾಡುತ್ತದೆ. ಏಕೆಂದರೆ ನೀವು ಯಾವುದೇ ಜಂಕ್ ಆಹಾರದ ಬದಲು ಒಂದು ಬಾಳೆಹಣ್ಣನ್ನು ತಿಂದರೆ ಅದು ನಿಮಗೆ ಹೆಚ್ಚಿನ ಶಕ್ತಿಯನ್ನು ನೀಡುತ್ತದೆ. ಇದರಿಂದಾಗಿ ನಿಮಗೆ ಕಡಿಮೆ ಹಸಿವು ಆಗುತ್ತದೆ ಇದು ಸತ್ಯ.
•ಇದು ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ:ಬಾಳೆಹಣ್ಣುಗಳು ನಿಮ್ಮ ಹಸಿವನ್ನು ಕಡಿಮೆ ಮಾಡುತ್ತದೆ. ಇದರಿಂದಾಗಿ ನೀವು ಕಡಿಮೆ ತಿನ್ನಲು ಆರಂಭಿಸುವಿರಿ, ಇದಕ್ಕೆ ಬಾಳೆಹಣ್ಣಿನಲ್ಲಿರುವ ನಾರಿನ ಅಂಶವೇ ಕಾರಣ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಹಾಗೂ ಜಂಕ್ ಫುಡ್ ಬದಲು ಒಂದು ಬಾಳೆಹಣ್ಣನ್ನು ತಿನ್ನಲು ಪ್ರಾರಂಭಿಸಿ ಮತ್ತು ನಿಮ್ಮ ತೂಕವನ್ನು ಇಳಿಸಿಕೊಳ್ಳಿ ವ್ಯತ್ಯಾಸ ನೀವೇ ಕಂಡುಕೊಳ್ಳಿ.
•ಆಶ್ಚರ್ಯಕರವಾಗಿ,ಇದು ನೋವಿಗೂ ಸಹಾಯ ಮಾಡುತ್ತದೆ:ವ್ಯಾಯಾಮದ ಸ್ವಲ್ಪ ಸಮಯದ ನಂತರ ಬಾಳೆಹಣ್ಣುಗಳನ್ನು ಸೇವಿಸುವುದರಿಂದ ನೀವು ಕಡಿಮೆ ನೋವಿನ ಅನುಭವನ್ನು ಗಮನಿಸಬಹುದು. ದಿ ಅಮೆರಿಕನ್ ಜರ್ನಲ್ ಆಫ್ ಕ್ಲಿನಿಕಲ್ ನ್ಯೂಟ್ರಿಷನ್ನಲ್ಲಿ ಪ್ರಕಟವಾದ ಅಧ್ಯಯನದಲ್ಲಿ ಬಾಳೆಹಣ್ಣಿನಲ್ಲಿರುವ ಕ್ಯಾಲ್ಸಿಯಂ ದೇಹದಲ್ಲಿ ಶಕ್ತಿಯನ್ನು ಉತ್ತಮವಾಗಿ ಹೀರಿಕೊಳ್ಳಲು ಸಹಾಯ ಮಾಡುತ್ತದೆ ಎಂದು ವರದಿ ಮಾಡಿದೆ.
•ಅನಾರೋಗ್ಯವು ಕಡಿಮೆ:ಬಾಳೆಹಣ್ಣುಗಳು ನಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚುಸುತ್ತದೆ. ಇದರಿಂದಾಗಿ ನೀವು ಆರೋಗ್ಯವನ್ನು ಉತ್ತಮವಾಗಿ ಕಾಪಡಿಕೊಳ್ಳಬಹುದು.ಇದು ಕೆಲವು ಅಧ್ಯನಗಳಿಂದ ಸಾಬೀತಾಗಿದೆ. ನೀವು ದಿನಕ್ಕೆ ಒಂದು ಬಾಳೆಹಣ್ಣನ್ನು ತಿನ್ನುವುದರಿಂದ ಅನಾರೋಗ್ಯಕ್ಕೆ ಒಳಗಾಗುವುದಿಲ್ಲ ಮತ್ತು ಬಲಶಾಲಿಯಾಗುತ್ತೀರಿ ಎಂದು ಇಂಟರ್ನ್ಯಾಷನಲ್ ಜರ್ನಲ್ ಆಫ್ ಬಯೋಲಾಜಿಕಲ್ ಮ್ಯಾಕ್ರೋಮಾಲಿಕ್ಯೂಲ್ ವರದಿ ಮಾಡಿದೆ


Share this Story:

Follow Webdunia kannada

ಮುಂದಿನ ಸುದ್ದಿ

ತೆಂಗಿನಕಾಯಿ ವಿನೆಗರ್ ಬಳಕೆಯಿಂದ ಸಿಗಲಿದೆ ಲಾಭಗಳು