Webdunia - Bharat's app for daily news and videos

Install App

ಸ್ಟೀವಿಯಾ ವಿಶೇಷತೆ ಏನು? ಈ ಎಲೆಗಳ ಆರೋಗ್ಯಯುತ ಪ್ರಯೋಜನಗಳು ಯಾವುವು?

Webdunia
ಶನಿವಾರ, 18 ಸೆಪ್ಟಂಬರ್ 2021 (15:17 IST)
ಸ್ಟೀವಿಯಾ ಎಲೆಗಳು ಉತ್ಕರ್ಷಣ ನಿರೋಧಕ ಅಂಶಗಳನ್ನು ಹೊಂದಿರುತ್ತವೆ. ಇದರಲ್ಲಿ ಕಬ್ಬಿಣ, ಪ್ರೋಟೀನ್, ಫೈಬರ್, ಪೊಟ್ಯಾಶಿಯಂ, ಮೆಗ್ನೀಶಿಯಂ, ಸೋಡಿಯಂ, ವಿಟಮಿನ್ ಎ, ಸಿ ಮುಂತಾದ ಪೋಷಕಾಂಶಗಳು ಹೇರಳವಾಗಿವೆ.
Photo Courtesy: Google

ಸ್ಟೀವಿಯಾ ಒಂದು ಗಿಡಮೂಲಿಕೆ. ಇದು ಸಕ್ಕರೆಯಂತೆ ಸಿಹಿಯಾಗಿರುತ್ತದೆ. ಇದನ್ನು ಸಿಹಿ ತುಳಸಿ ಎಂದೂ ಕರೆಯುತ್ತಾರೆ. ಇದರ ಎಲೆಗಳು ತುಳಸಿ ಎಲೆಗಳಂತೆ ಕಾಣುತ್ತವೆ. ಮನೆಯಲ್ಲಿ ಸುಲಭವಾಗಿ ಸ್ಟೀವಿಯಾ ಬೆಳೆಯಬಹುದು. ಮಧುಮೇಹ ರೋಗಿಗಳಿಗೆ ಈ ಮೂಲಿಕೆ ತುಂಬಾ ಪ್ರಯೋಜನಕಾರಿ. ಇದು ಅತ್ಯಲ್ಪ ಕ್ಯಾಲೊರಿಗಳನ್ನು ಹೊಂದಿದೆ. ಸಕ್ಕರೆಯ ಬದಲು ಸ್ಟೀವಿಯಾವನ್ನು ಬಳಸಬಹುದು. ಚಹಾ ಅಥವಾ ಕಾಫಿ, ನಿಂಬೆ ಪಾನಕಗಳಿಗೆ ಸ್ಟೀವಿಯಾ ಸೇರಿಸಬಹುದು ಅಥವಾ ಮೊಸರಿಗೆ ಕೂಡ ಸೇರಿಸಬಹುದು.

ಚಹಾ ಮತ್ತು ಕಾಫಿಯನ್ನು ಸಿಹಿಗೊಳಿಸಲು ಸ್ಟೀವಿಯಾದ ಎಲೆಗಳನ್ನು ಬಳಸಲಾಗುತ್ತದೆ. ಸ್ಟೀವಿಯಾ ಎಲೆಗಳು ಉತ್ಕರ್ಷಣ ನಿರೋಧಕ ಅಂಶಗಳನ್ನು ಹೊಂದಿರುತ್ತವೆ. ಇದರಲ್ಲಿ ಕಬ್ಬಿಣ, ಪ್ರೋಟೀನ್, ಫೈಬರ್, ಪೊಟ್ಯಾಶಿಯಂ, ಮೆಗ್ನೀಶಿಯಂ, ಸೋಡಿಯಂ, ವಿಟಮಿನ್ ಎ, ಸಿ ಮುಂತಾದ ಪೋಷಕಾಂಶಗಳು ಹೇರಳವಾಗಿವೆ. ಈ ಎಲ್ಲಾ ಪೋಷಕಾಂಶಗಳು ನಮ್ಮ ಆರೋಗ್ಯಕ್ಕೆ ಪ್ರಯೋಜನಕಾರಿ. ಇದು ಇನ್ನೂ ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ.
ಸ್ಟೀವಿಯಾ ಎಲೆಯ ಪ್ರಯೋಜನಗಳು
ಮಧುಮೇಹ ರೋಗಿಗಳಿಗೆ ಪ್ರಯೋಜನಕಾರಿ

ಸ್ಟೀವಿಯಾದಲ್ಲಿ ಹೆಚ್ಚಿನ ಕ್ಯಾಲೋರಿ ಇಲ್ಲ. ಅಧ್ಯಯನದ ಪ್ರಕಾರ, ಸ್ಟೀವಿಯಾ ಸೇವನೆಯು ಇನ್ಸುಲಿನ್ ಪ್ರಮಾಣದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಆದ್ದರಿಂದ, ಮಧುಮೇಹ ರೋಗಿಗಳು ಈ ಸಸ್ಯದ ಎಲೆಗಳನ್ನು ಅನೇಕ ವಿಧದ ಭಕ್ಷ್ಯಗಳಲ್ಲಿ ಬಳಸಬಹುದು. ಸಕ್ಕರೆ ಮಟ್ಟವನ್ನು ನಿಯಂತ್ರಿಸುವಲ್ಲಿ ಸ್ಟೀವಿಯಾ ಸಹಾಯ ಮಾಡುತ್ತದೆ.
ಕ್ಯಾನ್ಸರ್ ತಡೆಗಟ್ಟುವಿಕೆ

ಈ ಸಸ್ಯವು ಶಕ್ತಿಯುತವಾದ ಉತ್ಕರ್ಷಣ ನಿರೋಧಕಗಳನ್ನು ಹೊಂದಿದೆ. ಇದು ಪ್ರಬಲವಾದ ಕ್ಯಾನ್ಸರ್ ವಿರೋಧಿ ಆಹಾರವಾಗಿದೆ. ಸ್ಟೀವಿಯಾದಲ್ಲಿ ಕೆಂಪ್ಫೆರಾಲ್ ಎಂಬ ಉತ್ಕರ್ಷಣ ನಿರೋಧಕ ಅಂಶವಿದೆ. ಇವು ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್ ತಡೆಗಟ್ಟುವಲ್ಲಿ ಸ್ಟೋವಿಯಾ ವಿಶೇಷವಾಗಿ ಉಪಯುಕ್ತವಾಗಿದೆ.
ತೂಕ ಇಳಕೆಗೆ ಸಹಕಾರಿ

ಸಿಹಿಯಾಗಿದ್ದರೂ, ಸ್ಟೀವಿಯಾದಲ್ಲಿ ಕ್ಯಾಲೋರಿಗಳು ತುಂಬಾ ಕಡಿಮೆ. ತೂಕ ಹೆಚ್ಚಿಸುವ ಬಗ್ಗೆ ಚಿಂತಿಸದೆ ನೀವು ಅದನ್ನು ನಿಮ್ಮ ಸಿಹಿಭಕ್ಷ್ಯಗಳು ಮತ್ತು ಕುಕೀಗಳಿಗೆ ಸೇರಿಸಬಹುದು. ಇದು ಸಿಹಿತಿಂಡಿಗಳ ಹಂಬಲವನ್ನು ಪೂರೈಸಲು ಕೆಲಸ ಮಾಡುತ್ತದೆ. ನೀವು ಇದನ್ನು ಮಕ್ಕಳ ಆಹಾರದಲ್ಲಿ ಸೇರಿಸಿಕೊಳ್ಳಬಹುದು. ತೂಕ ಇಳಿಸಿಕೊಳ್ಳಲು ಬಯಸಿದರೆ, ಸಕ್ಕರೆಗೆ ಬದಲಾಗಿ ಸ್ಟೀವಿಯಾ ಬಳಸಬಹುದು.
ರಕ್ತದೊತ್ತಡ ಮಟ್ಟವನ್ನು ಕಡಿಮೆ ಮಾಡಬಹುದು

ಸ್ಟೀವಿಯಾ ಗ್ಲೈಕೋಸೈಡ್ಗಳನ್ನು ಹೊಂದಿದ್ದು, ಇದು ದೇಹದಿಂದ ಹೆಚ್ಚುವರಿ ಸೋಡಿಯಂ ಅನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಇದು ರಕ್ತದೊತ್ತಡ ಮಟ್ಟವನ್ನು ಸ್ಥಿರವಾಗಿಡಲು ಸಹಾಯ ಮಾಡುತ್ತದೆ. ಇದು ಹೃದಯಾಘಾತ ಮತ್ತು ಪಾರ್ಶ್ವವಾಯುವಿನಂತಹ ಹೃದಯ ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತದೆ.

ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಖಾಲಿ ಹೊಟ್ಟೆಯಲ್ಲಿ ಜಾಗಿಂಗ್ ಮಾಡುವಾಗ ಅಡ್ಡಪರಿಣಾಮಗಳ ಬಗ್ಗೆ ಎಚ್ಚರಿಕೆಯಿರಲಿ

ಪುದೀನಾ ಸೊಪ್ಪು ಬಳಸಿ ಕಲೆ ನಿವಾರಿಸಲು ಹೀಗೆ ಮಾಡಿ

ದೇಸೀ ಸನ್ ಸ್ಕ್ರೀನ್ ಲೋಷನ್ ಮನೆಯಲ್ಲಿಯೇ ಮಾಡಿ

ಸೆಕೆಗಾಲದಲ್ಲಿ ಪದೇ ಪದೇ ಕೋಲ್ಡ್ ಡ್ರಿಂಕ್ಸ್ ಸೇವನೆ ಮಾಡುತ್ತಿದ್ದರೆ ಇದನ್ನು ತಪ್ಪದೇ ಓದಿ

ಅಸ್ತಮಾ ರೋಗಿಗಳು ಹಾಲು ಹೇಗೆ ಸೇವಿಸಬೇಕು ಮತ್ತು ಬೆಸ್ಟ್ ಟೈಮ್ ಯಾವುದು ತಿಳಿಯಿರಿ

ಮುಂದಿನ ಸುದ್ದಿ
Show comments