ಮಾಂಸಾಹಾರ ಹಾಗೂ ಅನ್ನ ಸೇವನೆಯ ಮೇಲೆ ನಿಯಂತ್ರಣ ಬೇಕು. ಪೊಟ್ಯಾಶಿಯಂ ಹಾಗೂ ಮೆಗ್ನೇಸಿಯಮ್ ಅಧಿಕವಾಗಿರುವ ಆಹಾರ ಸೇವಿಸಿ. ಗೆಣಸು, ಪಾಲಾಕ್ ಬೀಟ್ರೂಟ್ ಮೊಳಕೆ ಕಾಳುಗಳಲ್ಲಿ ಈ ಅಂಶ ಅಧಿಕವಾಗಿರುತ್ತದೆ. ಒತ್ತಡ ಕಡಿಮೆ ಮಾಡುವುದರಿಂದ ಕೂಡ ಬಿಪಿಯನ್ನು ನಿಯಂತ್ರಣಲ್ಲಿ ಇಡಬಹುದಾಗಿದೆ. ಉತ್ತಮ ನಿದ್ದೆಯು ಒತ್ತಡವನ್ನು ಕಡಿಮೆ ಮಾಡಲಿದೆ.
ಅಧಿಕ ರಕ್ತದೊತ್ತಡ ನಿಯಂತ್ರಣ ಮಾಡುವುದು ಎಂದರೆ ಸವಾಲಿನ ಕಾರ್ಯವಾಗಿರುತ್ತದೆ. ಈ ಸಮಯದಲ್ಲಿ ರಕ್ತದೊತ್ತಡ ನಿರ್ವಹಿಸಲು ಸಹಕಾರಿಯಾಗಿರುವ ಆಹಾರಗಳನ್ನು ಸೇವಿಸುವುದರಿಂದ ರಕ್ತದೊತ್ತಡ ನಿಯಂತ್ರಿಸಬಹುದು ಎಂಬುದು ಇದೀಗ ಅಧ್ಯಯನಗಳಿಂದ ತಿಳಿದು ಬಂದಿದೆ. ಹಣ್ಣುಗಳು, ಸೇಬು, ಪೇರಳೆ ಹಾಗೂ ಕೆಂಪು ವೈನ್ನಂತಹ ಫ್ಲೇವನಾಯ್ಡ್ (ವರ್ಣದ್ರವ್ಯ) ಭರಿತ ಆಹಾರಗಳನ್ನು ಸೇವಿಸುವುದರಿಂದ ರಕ್ತದೊತ್ತಡವನ್ನು ನಿಯಂತ್ರಿಸಬಹುದು ಎಂಬುದಾಗಿ ಪತ್ತೆಯಾಗಿದೆ.
ಫ್ಲೇವನಾಯ್ಡ್ ಭರಿತ ಆಹಾರಗಳು ಸಂಕುಚನ ರಕ್ತದೊತ್ತಡ ನಡುವಿನ ಪ್ರತ್ಯೇಕತೆಯನ್ನು ಸೂಕ್ಷ್ಮಜೀವಿಗಳ ವೈವಿಧ್ಯತೆಯಿಂದ ವಿಶ್ಲೇಷಿಸಬಹುದು ಎಂಬುದಾಗಿ ಅಧ್ಯಯನಗಳು ತಿಳಿಸಿದ್ದು ಜೀರ್ಣಾಂಗದಲ್ಲಿ ಕಂಡುಬರುವ ಬ್ಯಾಕ್ಟೀರಿಯಾ ಫ್ಲೇವನಾಯ್ಡ್ ಅನ್ನು ಕರುಳಿನ ಸೂಕ್ಷ್ಮಜೀವಿಯಿಂದ ಪ್ರತ್ಯೇಕಿಸಲಾಗುತ್ತದೆ.
ಪ್ರತೀ ದಿನ 1 ಕಪ್ನಷ್ಟು ಬೆರಿಗಳನ್ನು ಸೇವಿಸುವುದರಿಂದ ಸಿಸ್ಟೊಲಿಕ್ ರಕ್ತದೊತ್ತಡ ಮಟ್ಟ 4.1 mm ಊg ಸರಾಸರಿ ಇಳಿಕೆಯನ್ನು ಮಾಡಿದೆ ಹಾಗೂ ರೆಡ್ ವೈನ್ನ ಸೇವನೆಯು ಸಂಕುಚನ ರಕ್ತದೊತ್ತಡವನ್ನು ಕುಗ್ಗಿಸಿದ್ದು ಕರುಳಿನ ಸೂಕ್ಷ್ಮಜೀವಿಗಳಿಂದ ಈ ಪ್ರಕ್ರಿಯೆಯನ್ನು ವಿವರಿಸಬಹುದಾಗಿದೆ ಎಂದು ಅಧ್ಯಯನಗಳು ತಿಳಿಸಿವೆ.
ವರ್ಣದ್ರವ್ಯಗಳ ಸೇವನೆಯಿಂದ ಚಯಾಪಚಯ ಕ್ರಿಯೆಯು ವರ್ಧನೆಯಾಗುತ್ತದೆ ಹಾಗೂ ಇಂತಹ ಆಹಾರಗಳನ್ನು ಪ್ರತಿನಿತ್ಯ ಸೇವಿಸುವುದರಿಂದ ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಬಹುದು ಎಂಬುದಾಗಿ ಅಧ್ಯಯನಗಳು ತಿಳಿಸಿವೆ. ಕರುಳಿನ ಸೂಕ್ಷ್ಮಜೀವಿಗಳು ಹಾಗೂ ಜೀರ್ಣಾಂಗದಲ್ಲಿನ ಸೂಕ್ಷ್ಮಜೀವಿಗಳು ಹೃದಯರಕ್ತನಾಳ ಕಾಯಿಲೆಯೊಂದಿಗೆ ಸಂಪರ್ಕ ಹೊಂದಿವೆ ಎಂಬುದಾಗಿ ತಿಳಿದುಬಂದಿದ್ದು ವ್ಯಕ್ತಿಗಳ ನಡುವೆ ಕರುಳಿನ ಸೂಕ್ಷ್ಮಾಣುಗಳು ಭಿನ್ನವಾಗಿರುತ್ತವೆ. ವರ್ಣದ್ರವ್ಯಗಳು ಅಥವಾ ಫ್ಲೇವನಾಯ್ಡ್ ಭರಿತ ಆಹಾರ ಸೇವನೆಯಿಂದ ಹೃದ್ರೋಗ ಅಪಾಯವು ಕಡಿಮೆಯಾಗುತ್ತದೆ ಜೊತೆಗೆ ಕರುಳಿನ ಸೂಕ್ಷ್ಮಜೀವಿಯ ಪಾತ್ರವನ್ನು ಈ ಪ್ರಕ್ರಿಯೆಯಲ್ಲಿ ಅವಲೋಕಿಸಲಾಗಿದೆ.
ವರ್ಣದ್ರವ್ಯ ಭರಿತ ಆಹಾರ ಹಾಗೂ ಕರುಳಿನ ಸೂಕ್ಷ್ಮಜೀವಿಗಳ ವೈವಿಧ್ಯತೆಯನ್ನು ಪರಿಶೀಲಿಸಿದಾಗ ರಕ್ತದೊತ್ತಡದ ಮೇಲೆ ಇಂತಹ ಆಹಾರ ಹಾಗೂ ಸೂಕ್ಷ್ಮಜೀವಿಗಳ ಪಾತ್ರವನ್ನು ತನಿಖೆ ಮಾಡಿದೆ. ಇಂತಹ ಆಹಾರಗಳನ್ನು ಸೇವಿಸುವುದರಿಂದ ಕರುಳಿನ ಸೂಕ್ಷ್ಮಜೀವಿಗಳ ಮೇಲೆ ಉಂಟಾಗುವ ವ್ಯತ್ಯಾಸ ಹಾಗೂ ರಕ್ತದೊತ್ತಡದ ಮೇಲೆ ಉಂಟಾಗುವ ಪರಿಣಾಮಗಳನ್ನು ಕೂಲಂಕುಷವಾಗಿ ವಿಷದೀಕರಿಸಿದೆ. 904 ಜನ ವಯಸ್ಕರ ಆಹಾರ ಸೇವನೆ, ಕರುಳಿನ ಸೂಕ್ಷ್ಮಾಣು ಹಾಗೂ ರಕ್ತದೊತ್ತಡವನ್ನು ಇತರ ವೈದ್ಯಕೀಯ, ಆಣ್ವಿಕ ಫಿನೋಟೈಪಿಂಗ್ನೊಂದಿಗೆ ಅನುಸರಣೆಯ ಮೂಲಕ ಮೌಲ್ಯಮಾಪನ ಮಾಡಿದೆ.
ವರ್ಣದ್ರವ್ಯ ಭರಿತ ಆಹಾರ ಸೇವನೆಯನ್ನು ಮಾಡುವುದರಿಂದ ಕರುಳಿನ ಸೂಕ್ಷ್ಮಾಣುಗಳ ವೈವಿಧ್ಯತೆಯನ್ನು ಸುಧಾರಿಸುವುದರ ಜೊತೆಗೆ ಸಂಕುಚನ ರಕ್ತದೊತ್ತಡ ಮಟ್ಟವನ್ನು ನಿಯಂತ್ರಣದಲ್ಲಿಡಬಹುದು ಎಂಬುದು ಅಧ್ಯಯನಗಳಿಂದ ತಿಳಿದು ಬಂದಿದೆ. ಇದರ ಜೊತೆಗೆ ನಿಮ್ಮ ತೂಕ ನಿರ್ವಹಣೆಯ ಮೇಲೆ ಕೇಂದ್ರೀಕರಿಸುವುದು ಮುಖ್ಯವಾಗಿದೆ. ಆರೋಗ್ಯಕರ ಆಹಾರ ಸೇವನೆಯ ಮೂಲಕ ತೂಕ ನಿಯಂತ್ರಿಸುವುದು ಮುಖ್ಯವಾಗಿದೆ.
ಸಸ್ಯಜನ್ಯ ಆಹಾರ ಸೇವನೆಯಿಂದ ಹೆಚ್ಚಿನ ರಕ್ತದೊತ್ತಡವನ್ನು ನಿಯಂತ್ರಣಲ್ಲಿ ಇಡಬಹುದಾಗಿದೆ. ಮಾಂಸಾಹಾರ ಹಾಗೂ ಅನ್ನ ಸೇವನೆಯ ಮೇಲೆ ನಿಯಂತ್ರಣ ಬೇಕು. ಪೊಟ್ಯಾಶಿಯಂ ಹಾಗೂ ಮೆಗ್ನೇಸಿಯಮ್ ಅಧಿಕವಾಗಿರುವ ಆಹಾರ ಸೇವಿಸಿ. ಗೆಣಸು, ಪಾಲಾಕ್ ಬೀಟ್ರೂಟ್ ಮೊಳಕೆ ಕಾಳುಗಳಲ್ಲಿ ಈ ಅಂಶ ಅಧಿಕವಾಗಿರುತ್ತದೆ. ಒತ್ತಡ ಕಡಿಮೆ ಮಾಡುವುದರಿಂದ ಕೂಡ ಬಿಪಿಯನ್ನು ನಿಯಂತ್ರಣಲ್ಲಿ ಇಡಬಹುದಾಗಿದೆ. ಉತ್ತಮ ನಿದ್ದೆಯು ಒತ್ತಡವನ್ನು ಕಡಿಮೆ ಮಾಡಲಿದೆ.