Select Your Language

Notifications

webdunia
webdunia
webdunia
webdunia

25 ವರ್ಷ ದಾಟುವ ಮೊದಲು ನಿಮ್ಮ ಚರ್ಮದ ಆರೈಕೆ ಹೀಗಿರಲಿ...!

25 ವರ್ಷ ದಾಟುವ ಮೊದಲು ನಿಮ್ಮ ಚರ್ಮದ ಆರೈಕೆ ಹೀಗಿರಲಿ...!
ಬೆಂಗಳೂರು , ಭಾನುವಾರ, 22 ಆಗಸ್ಟ್ 2021 (08:52 IST)
ಪ್ರತಿ ವ್ಯಕ್ತಿಯು 25 ವರ್ಷ ದಾಟುತ್ತಿದ್ದ ಹಾಗೇ ಮುಖದ ಕಾಂತಿ ಕುಂದಲು ಆರಂಭವಾಗುತ್ತದೆ. ಹಾಗಾಗಿ 25 ವರ್ಷ ದಾಟುವ ಮೊದಲೇ ತ್ವಚೆಯ ಆರೈಕೆಗೆ ಹೆಚ್ಚು ಗಮನ ನೀಡಬೇಕಾಗುತ್ತದೆ. ನಾವು ಆಧುನಿಕ ಕಾಲದಲ್ಲಿ ಕೆಲಸದ ಒತ್ತಡ, ಸ್ಮಾರ್ಟ್ಫೋನ್ ಬಳಕೆ ಹೀಗೆ ಅನೇಕ ಕಾರಣಗಳಿಂದ ವಯಸ್ಸಾದಂತೆ ಕಾಣುತ್ತೇವೆ. ಹಾಗಾಗಿ ಚರ್ಮದ ಆರೈಕೆ ಬಗ್ಗೆ ಕಾಳಜಿ ವಹಿಸಿ 25ರ ನಂತರವೂ ಚರ್ಮಕ್ಕೆ ಹಾನಿಯಾಗದಂತೆ ನೋಡಿಕೊಳ್ಳಬೇಕಾಗುತ್ತದೆ.

ಮಾರುಕಟ್ಟೆಯಲ್ಲಿ ಸಿಗುವ ಯಾವುದೋ ಕ್ರೀಮ್, ಸೋಪುಗಳು, ಫೇಸ್ವಾಶ್ ಬಳಸುವ ಬದಲು ನಿರ್ದಿಷ್ಟ ಉತ್ಪನ್ನಗಳನ್ನು ಮೊದಲು ಬಳಸುವುದನ್ನು ರೂಢಿಸಿಕೊಳ್ಳಬೇಕು. ಕೆಲವೊಮ್ಮೆ ಆಹಾರಗಳು ಸಹ ಚರ್ಮದ ಮೇಲೆ ಪರಿಣಾಮ ಬೀರುವುದರಿಂದ ಉತ್ತಮ ಆಹಾರಗಳತ್ತ ಹೆಚ್ಚು ಗಮನಹರಿಸಬೇಕಾಗುತ್ತದೆ. ನೀವು 25 ದಾಟಿದ ನಂತರ ಗಮನಹರಿಸಬೇಕಾದ ತ್ವಚೆಯ ಸಲಹೆಗಳು ಇಲ್ಲಿವೆ.
1. ತೇವಗೊಳಿಸುವಿಕೆ (ಮಾಯಿಶ್ಚರೈಸರ್)
ನಿಮ್ಮ ಚರ್ಮವನ್ನು ಸ್ವಚ್ಛವಾಗಿಡಲು ನೀವು ಈಗಾಗಲೇ ಫೇಸ್ ವಾಶ್ ಮತ್ತು ಸ್ಕ್ರಬ್ ಬಳಸುತ್ತಿದ್ದರೂ ಮಾಯಿಶ್ಚರೈಸರ್ ಬಳಸಲೇಬೇಕು. ನಿಮ್ಮ ಚರ್ಮದ ಪ್ರಕಾರಕ್ಕೆ ಸೂಕ್ತವಾದ ಮಾಯಿಶ್ಚರೈಸರ್ ಅನ್ನು ನೀವು ಕಂಡುಕೊಂಡಿರಬೇಕು. ಜೊತೆಗೆ ನಿಮ್ಮ ಚರ್ಮದ ಕಾಳಜಿಯತ್ತ ಗಮನಹರಿಸಲೇಬೇಕು.
2. ಸೂರ್ಯನಿಂದ ರಕ್ಷಣೆ
ಸನ್ಸ್ಕ್ರೀನ್ ಚರ್ಮದ ಆರೈಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದನ್ನು ಮನೆಯ ಹೊರಗೆ ಮತ್ತು ಒಳಗಡೆಯೂ ಬಳಸಬೇಕಾಗುತ್ತದೆ. ನೀವು ಮೊದಲು ಸನ್ಸ್ಕ್ರೀನ್ ಬಳಸದಿದ್ದರೆ, ಆದಷ್ಟು ಬೇಗ ಬಳಸಲು ಪ್ರಾರಂಭಿಸಿ. ಮನೆಯಲ್ಲಿದ್ದರೂ ಸನ್ಸ್ಕ್ರೀನ್ ಬಳಸಬೇಕಾಗುತ್ತದೆ. ಡಾರ್ಕ್ ಸ್ಪಾಟ್ಗಳು ನೀವು ಮನೆಯೊಳಗಿದ್ದರೂ ಉಂಟಾಗಬಹುದು. ಹಾಗಾಗಿ ಇದನ್ನು ಬಳಸುವುದು ಉತ್ತಮ.
3. ಆ್ಯಂಟಿ ಏಜಿಂಗ್ ಚಿಕಿತ್ಸೆ
ಕೆಲವರ ವಯಸ್ಸು 25 ಇದ್ದರೂ ವಯಸ್ಸಾದಂತೆ ಕಾಣುತ್ತಾರೆ. ಅಂದರೆ ನೀವು ಈ ವಯಸ್ಸನ್ನು ತಲುಪುವ ಹೊತ್ತಿಗೆ ಮುಖದಲ್ಲಿ ಸುಕ್ಕುಗಳು ಉಂಟಾಗಲು ಶುರುವಾಗುತ್ತದೆ. ಆದ್ದರಿಂದ ಆ್ಯಂಟಿ ಏಜಿಂಗ್ ಚಿಕಿತ್ಸಾ ಕ್ರೀಮ್ಗಳನ್ನು ಬಳಸುವುದು ಉತ್ತಮ. ಒಟ್ಟಾರೆ ಚರ್ಮದ ಆರೈಕೆಗಾಗಿ ಮತ್ತು ಮೊಡವೆಗಳನ್ನು ದೂರವಿರಿಸಲು ರೆಟಿನಾಲ್ ಅನ್ನು ಸೂಚಿಸಲಾಗುತ್ತದೆ.
4. ಮೇಕಪ್ ತೆಗೆಯುವಿಕೆ
ಚರ್ಮದ ಆರೈಕೆಯ ಮತ್ತೊಂದು ಹಂತ ಎಂದರೆ ಮೇಕಪ್ ತೆಗೆಯುವುದು. ಆಯಾಸ ಹಾಗೂ ಸೋಮಾರಿತನದ ಕಾರಣ ಕೆಲವರು ಮೇಕಪ್ ತೆಗೆಯದೇ ಮಲಗುತ್ತಾರೆ. ಮೊದಲು ಈ ಅಭ್ಯಾಸನ್ನು ಬಿಡಬೇಕು. ನಿಮ್ಮ ತ್ವಚೆ ಸುಂದರವಾಗಿರಬೇಕೆಂದರೆ ನೀವು ಮಲಗುವ ಮುನ್ನ ಮೇಕಪ್ ತೆಗೆಯುವ ಅಭ್ಯಾಸವನ್ನು ಕಡ್ಡಾಯವಾಗಿ ರೂಢಿಸಿಕೊಳ್ಳಿ. ಮೇಕಪ್ ಇದ್ದರೆ ಇದು ನಿಮಗೆ ಚರ್ಮದ ತೊಂದರೆ ಉಂಟುಮಾಡುತ್ತದೆ, ನೀವು ಮಲಗುವ ಮುನ್ನ ಮೇಕಪ್ ತೆಗೆಯಲು ರಿಮೂವರ್ಗಳನ್ನು ಆರಿಸಿಕೊಳ್ಳಿ ಮತ್ತು ಹಿಂಜರಿಯಬೇಡಿ.
5. ನೈಟ್ ಕೇರ್
ಈ ವಯಸ್ಸಿನಲ್ಲಿ ಸೌಂದರ್ಯ ಸ್ಥಿರವಾಗಿರಲು ನಿದ್ರೆ ಮುಖ್ಯವಾಗಿದೆ ಮತ್ತು ಇದರ ಜೊತೆಗೆ ಹಿತವಾದ ರಾತ್ರಿ ಜೆಲ್ ಬಳಸಿ ತ್ವಚೆಯ ಸೌಂದರ್ಯ ಕಾಪಾಡಿಕೊಳ್ಳಬಹುದು. ಇದು ನೀವು ಮಲಗುವಾಗ ನಿಮ್ಮ ಚರ್ಮಕ್ಕೆ ಯಾವುದೇ ರೀತಿಯಲ್ಲೂ ಹಾನಿಯಾಗದಂತೆ ತಡೆಯುತ್ತದೆ.

 


Share this Story:

Follow Webdunia kannada

ಮುಂದಿನ ಸುದ್ದಿ

ದಿನಕ್ಕೆರಡು ಲವಂಗ, ಎರಡು ಬಾದಾಮಿ ಸೂತ್ರ