Select Your Language

Notifications

webdunia
webdunia
webdunia
webdunia

ಸೂರ್ಯ ನಮಸ್ಕಾರ ಮಾಡಿ ದೇಹದ ತೂಕ ಇಳಿಸಿ..!

ಸೂರ್ಯ ನಮಸ್ಕಾರ ಮಾಡಿ ದೇಹದ ತೂಕ ಇಳಿಸಿ..!
ಬೆಂಗಳೂರು , ಬುಧವಾರ, 8 ಸೆಪ್ಟಂಬರ್ 2021 (09:03 IST)
Surya Namaskar: ದೇಹದ ತೂಕ ಇಳಿಸಿಕೊಳ್ಳಲು ಇಲ್ಲೊಂದು ಸುಲಭ ಮಾರ್ಗವಿದೆ. ಏನೆಂದರೆ ನೀವು ದಿನನಿತ್ಯ ತಪ್ಪದೆ ‘ಸೂರ್ಯ ನಮಸ್ಕಾರ’ ಮಾಡಿದರೆ ನಿಮ್ಮ ದೇಹದ ತೂಕ ಕಡಿಮೆ ಮಾಡಿಕೊಳ್ಳಬಹುದು ಎಂದು ತಜ್ಞರು ಹೇಳುತ್ತಾರೆ.

ತೂಕ ಇಳಿಸಿಕೊಳ್ಳಲು ತುಂಬಾ ಜನ ಸಿಕ್ಕಾಪಟ್ಟೆ ಸರ್ಕಸ್ ಮಾಡುತ್ತಿರುತ್ತಾರೆ. ತಿಳಿದವರು ಹೇಳಿದ ಮಾರ್ಗಗಳನ್ನೆಲ್ಲ ಅನುಸರಿಸುತ್ತಿರುತ್ತಾರೆ. ಅದರಲ್ಲೂ ಏನು ತಿನ್ನಬೇಕು ಹಾಗೂ ಯಾವುದರಿಂದ ದೂರ ಇರಬೇಕು ಎಂದೆಲ್ಲ ಪಟ್ಟಿ ಮಾಡಿಕೊಳ್ಳಲಾಗುತ್ತೆ. ಹೀಗೆ ಮಾಡಿಕೊಂಡಿರುವ ಪಟ್ಟಿಯಲ್ಲಿ ಹಣ್ಣುಗಳೂ ಇರುತ್ತವೆ. ಆದರೂ ಕೆಲವೊಬ್ಬರು ಅವುಗಳಲ್ಲಿ ಸಿಗುವ ಅಂಶಗಳು ನೈಜವಾಗಿರುವ ಕಾರಣದಿಂದ ಯಾವುದೇ ಸಮಸ್ಯೆ ಆಗೋದಿಲ್ಲ ಎಂದು ಎಲ್ಲ ಹಣ್ಣುಗಳನ್ನು ಸೇವಿಸುತ್ತಾರೆ. ನಾನಾ ರೀತಿಯ ಡಯಟ್ ಅಂತೆಲ್ಲ ಪಾಲಿಸುತ್ತಾರೆ. ದೇಹದ ಅತಿಯಾದ ತೂಕ ಭಾರವಾಗಿರುತ್ತದೆ. ಈ ಭಾರ ಕಡಿಮೆ ಮಾಡಿಕೊಳ್ಳಲು ಜನರು ಪ್ರಯತ್ನಿಸದ ಮಾರ್ಗವೇ ಇರುವುದಿಲ್ಲ.ಯೋಗ ಮಾಡುವುದರಿಂದ ಶುರು ಮಾಡಿ ವ್ಯಾಯಾಮ, ಜಿಮ್ನಲ್ಲಿ ಕಸರತ್ತು ಮತ್ತು ನಾವು ಸೇವಿಸುವ ಆಹಾರದಲ್ಲಿ ಕಡಿತಗೊಳಿಸುವುದು, ಹೀಗೆ ಅನೇಕ ಮಾರ್ಗಗಳನ್ನು ನಾವು ದಿನನಿತ್ಯ ಪ್ರಯತ್ನಿಸುತ್ತಲೇ ಇರುತ್ತೇವೆ.
ದೇಹದ ತೂಕ ಇಳಿಸಿಕೊಳ್ಳಲು ಇಲ್ಲೊಂದು ಸುಲಭ ಮಾರ್ಗವಿದೆ. ಏನೆಂದರೆ ನೀವು ದಿನನಿತ್ಯ ತಪ್ಪದೆ ‘ಸೂರ್ಯ ನಮಸ್ಕಾರ’ ಮಾಡಿದರೆ ನಿಮ್ಮ ದೇಹದ ತೂಕ ಕಡಿಮೆ ಮಾಡಿಕೊಳ್ಳಬಹುದು ಎಂದು ತಜ್ಞರು ಹೇಳುತ್ತಾರೆ. ಈ ‘ಸೂರ್ಯ ನಮಸ್ಕಾರ’ ಯೋಗವು 12 ಭಂಗಿಗಳನ್ನು ಹೊಂದಿದ್ದು, ಒಬ್ಬ ವ್ಯಕ್ತಿಯು ಇದನ್ನು ದಿನನಿತ್ಯ ತಪ್ಪದೆ ಮಾಡಿದರೆ, ಅವರು ತುಂಬಾ ಸದೃಢರಾಗಿರಲು ಮತ್ತು ಅವರ ದೇಹದ ತೂಕವನ್ನು ಕ್ರಮೇಣವಾಗಿ ಕಡಿಮೆ ಮಾಡಿಕೊಳ್ಳಬಹುದಾಗಿದೆ.
ಇದನ್ನು ನೀವು ನಿಮ್ಮ ದಿನನಿತ್ಯದ ವ್ಯಾಯಾಮ ಪಟ್ಟಿಯಲ್ಲಿ ಸೇರಿಸಿಕೊಂಡು ಮಾಡುತ್ತಾ ಹೋಗಿ, ಕೆಲವೇ ತಿಂಗಳುಗಳಲ್ಲಿ ನಿಮಗೆ ನಿಮ್ಮಲ್ಲಾಗುವಂತಹ ಬದಲಾವಣೆ ಗಮನಕ್ಕೆ ಬರುತ್ತದೆ.
‘ಸೂರ್ಯ ನಮಸ್ಕಾರ’ವು ನಮ್ಮ ದೇಹದ ತೂಕ ಕಡಿಮೆ ಮಾಡಿಕೊಳ್ಳುವ ಅತ್ಯಂತ ಪರಿಣಾಮಕಾರಿಯಾದ ಮಾರ್ಗಗಳಲ್ಲಿ ಒಂದು ಎಂದರೆ ತಪ್ಪಾಗಲಾರದು. ಇದನ್ನು ಮಾಡುವುದರಿಂದ ನಿಮ್ಮ ದೇಹದಲ್ಲಿರುವ ಸ್ನಾಯುಗಳು ಬಲಗೊಳ್ಳುತ್ತವೆ ಮತ್ತು ದೇಹದಲ್ಲಿನ ರಕ್ತ ಸಂಚಲನವನ್ನು ಸುಧಾರಿಸುತ್ತದೆ. ನಿಮ್ಮ ಉಸಿರಾಟ ಪ್ರಕ್ರಿಯೆಯನ್ನೂ ಉತ್ತಮಗೊಳಿಸುತ್ತದೆ. ಹಾಗಾಗಿ ನಿಮ್ಮ ದೇಹವನ್ನು ಒಂದು ಆಕಾರದಲ್ಲಿರಿಸಲು ಸಹಾಯ ಮಾಡುತ್ತದೆ.
ಸೂರ್ಯ ನಮಸ್ಕಾರ’ ಮಾಡುವುದರಿಂದಾಗುವ ಪ್ರಯೋಜನಗಳು:
ನಿಮ್ಮ ದೇಹದ ತೂಕ ಕಡಿಮೆ ಮಾಡಿಕೊಳ್ಳಬೇಕು ಎಂಬ ಬಯಕೆ ನಿಮ್ಮಲ್ಲಿದ್ದರೆ, ‘ಸೂರ್ಯ ನಮಸ್ಕಾರ’ವನ್ನು ನೀವು ದಿನನಿತ್ಯ ನಿಯಮಿತವಾಗಿ ಮತ್ತು ಸ್ಥಿರವಾಗಿ ಅಭ್ಯಾಸ ಮಾಡಬೇಕು. ನಮ್ಮ ದೇಹವು ಕಫ, ಪಿತ್ತ ಮತ್ತು ವಾತ ಎಂಬ ಮೂರು ಅಂಶಗಳನ್ನು ಒಳಗೊಂಡಿರುತ್ತದೆ ಮತ್ತು ‘ಸೂರ್ಯ ನಮಸ್ಕಾರ’ ಮಾಡುವುದರಿಂದ ಈ ಮೂರು ಅಂಶಗಳು ಉತ್ತಮ ಸಮತೋಲನದಲ್ಲಿರುತ್ತವೆ. ಇದಷ್ಟೇ ಅಲ್ಲದೆ ಇನ್ನೂ ಅನೇಕ ಪ್ರಯೋಜನಗಳನ್ನು ಈ ಕೆಳಗೆ ಪಟ್ಟಿ ಮಾಡಲಾಗಿದೆ.
1. ನಿಮ್ಮ ದೇಹದ ಚರ್ಮವು ಕಾಂತಿಯುತವಾಗುತ್ತದೆ
2. ಕೀಲುಗಳು ಮತ್ತು ಸ್ನಾಯುಗಳು ಬಲಗೊಳ್ಳುತ್ತವೆ
3. ಉತ್ತಮ ಜೀರ್ಣಾಂಗ ವ್ಯವಸ್ಥೆ
4. ಉತ್ತಮ ಮಾನಸಿಕ ಆರೋಗ್ಯ
5. ದೇಹದಲ್ಲಿ ರಕ್ತ ಸಂಚಲನೆ ಸುಧಾರಿಸುತ್ತದೆ
ನೀವು ಜಿಮ್ಗೆ ಹೋಗಿ ಗಂಟೆಗಟ್ಟಲೆ ವ್ಯಾಯಾಮ ಮಾಡುವ ಅವಶ್ಯಕತೆ ಇಲ್ಲ. ‘ಸೂರ್ಯ ನಮಸ್ಕಾರ’ವನ್ನು ದಿನನಿತ್ಯ ತಪ್ಪದೆ ಮಾಡುವುದರಿಂದ ನಿಮ್ಮ ದೇಹದಲ್ಲಿರುವ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು. ಇದನ್ನು ಮಾಡುವ ಮೊದಲು ಮತ್ತು ಮಾಡಿದ ನಂತರ ಎರಡು ನಿಮಿಷದ ಧ್ಯಾನವನ್ನೂ ಮಾಡುವುದರಿಂದ ಉತ್ತಮ ಫಲಿತಾಂಶ ಪಡೆಯುವಿರಿ.
‘ಸೂರ್ಯ ನಮಸ್ಕಾರ’ದ 12 ಭಂಗಿಗಳನ್ನು ಒಂದು ಸುತ್ತು ಮಾಡುವುದರಿಂದ ಸುಮಾರು 13.90 ಕ್ಯಾಲೋರಿ ಕಳೆದುಕೊಳ್ಳಬಹುದಾಗಿದೆ. ಪ್ರತಿದಿನ ಐದು ಸುತ್ತುಗಳನ್ನು ಮಾಡುವುದರಿಂದ ಪ್ರಾರಂಭಿಸಿ ಕ್ರಮೇಣವಾಗಿ ಇದನ್ನು 10-12 ಸುತ್ತುಗಳವರೆಗೆ ಮಾಡುವುದರಿಂದ ಮನೆಯಲ್ಲಿಯೇ ನೀವು ಸುಮಾರು 400 ಕ್ಯಾಲೋರಿಗಳನ್ನು ಕಳೆದುಕೊಳ್ಳಬಹುದಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಪದೇ ಪದೇ IVF ವಿಫಲವಾಗುದೆಯಾ? ಹಾಗಾದ್ರೆ ಅದಕ್ಕೆ ಈ ಅಂಶಗಳು ಕಾರಣವಾಗಿರಬಹುದು