Webdunia - Bharat's app for daily news and videos

Install App

ಶಿವರಾತ್ರಿ ಸ್ಪೆಷಲ್ ಸಿಹಿಯಾದ ತಂಬಿಟ್ಟು

Webdunia
ಶನಿವಾರ, 18 ಫೆಬ್ರವರಿ 2023 (06:53 IST)
ಹಬ್ಬಗಳು ಬಂದರೆ ಸಾಕು ಮನೆಯಲ್ಲಿ ಸಿಹಿಯಾದ ಅಡುಗೆ, ದೇವರಿಗೆ ನೈವೇದ್ಯ ಮಾಡಬೇಕಾಗುತ್ತದೆ.

ಇಂದು ಮಹಾಶಿವರಾತ್ರಿ, ಈ ದಿನ ರಾತ್ರಿಯಿಡೀ ಶಿವನಾಮ ಸ್ಮರಣೆ ಮಾಡಿ ಜಾಗರಣೆ ಮಾಡುತ್ತೀರಿ. ಶಿವನಿಗೆ ಪ್ರಿಯವಾದ ನೈವೇದ್ಯ ಎಂದರೆ ಅದು ತಂಬಿಟ್ಟು. ದೇವರಿಗೆ ನೈವೇದ್ಯ ಮಾಡಿಲ್ಲ ಅಂದರೆ ಶಿವರಾತ್ರಿ ಪೂರ್ಣವೇ ಆಗಲ್ಲ.

ಬೇಕಾಗುವ ಸಾಮಾಗ್ರಿಗಳು

ಅಕ್ಕಿ – ಅರ್ಧ ಕೆಜಿ
ಎಳ್ಳು – 5-6 ಚಮಚ
ಕಡ್ಲೆಕಾಯಿ ಬೀಜ – 50 ಗ್ರಾಂ
ಹುರಿಗಡಲೆ – 50 ಗ್ರಾಂ
ಬೆಲ್ಲ – 1 ಅಚ್ಚು
ಕೊಬ್ಬರಿ ತುರಿ – 1 ಬಟ್ಟಲು
ಏಲಕ್ಕಿ – 2 

ಮಾಡುವ ವಿಧಾನ

* ಒಂದು ಪ್ಯಾನ್ಗೆ ಅಕ್ಕಿ ಹಾಕಿ ಹುರಿದುಕೊಳ್ಳಿ. ತಣ್ಣಗಾದ ಮೇಲೆ ಬಳಿಕ ಮಿಕ್ಸರ್ ಜಾರ್ ಗೆ ಹಾಕಿ ಪುಡಿ ಮಾಡಿಕೊಳ್ಳಿ.
* ಅದೇ ಪ್ಯಾನ್ಗೆ ಕಡ್ಲೆಕಾಯಿ ಬೀಜ ಹಾಕಿ ಹುರಿದು ಸಿಪ್ಪೆ ತೆಗೆದು ಇಟ್ಟುಕೊಳ್ಳಿ.
* ಪ್ಯಾನ್ಗೆ ಎಳ್ಳು ಹಾಕಿ ಬೆಚ್ಚಗೆ ಮಾಡಿ.
* ಈಗ ಒಂದು ಮಿಕ್ಸರ್ ಜಾರ್ ಗೆ ಹುರಿಗಡಲೆ, ಕಡ್ಲೆಕಾಯಿ ಬೀಜ, ಏಲಕ್ಕಿ ಹಾಕಿ ತರಿತರಿ ರುಬ್ಬಿಕೊಳ್ಳಿ.
* ಒಂದು ಪ್ಯಾನ್ ಬಿಸಿಗಿಟ್ಟು ಅದಕ್ಕೆ ಬೆಲ್ಲ ಹಾಕಿ ಒಂದೆಳೆ ಪಾಕ ಮಾಡಿಕೊಳ್ಳಿ.
* ಈ ಕಡೆ ಮಿಕ್ಸಿಂಗ್ ಬೌಲ್ ತೆಗೆದುಕೊಂಡು ಅದಕ್ಕೆ ಪುಡಿ ಮಾಡಿದ ಅಕ್ಕಿ, ಹುರಿದ ಎಳ್ಳು, ಕೊಬ್ಬರಿ ತುರಿ, ಪುಡಿ ಮಾಡಿದ ಹುರಿಗಡಲೆ, ಕಡ್ಲೆಕಾಯಿಬೀಜ, ಏಲಕ್ಕಿ ಹಾಕಿ.
* ಇದಕ್ಕೆ ಒಂದೆಳೆ ಪಾಕವನ್ನು ಬಿಸಿಯಾಗಿರುವಾಗಲೇ ಸೇರಿಸಿ ಕಲಸಿ ಉಂಡೆ ಕಟ್ಟಿ.
* ಪಾಕ ಬಿಸಿ ಇರುವಾಗಲೇ ಉಂಡೆ ಕಟ್ಟಬೇಕು. ಇಲ್ಲವಾದಲ್ಲಿ ಉಂಡೆ ಒಡೆದು ಹೋಗುತ್ತದೆ.

ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಖಾಲಿ ಹೊಟ್ಟೆಯಲ್ಲಿ ಜಾಗಿಂಗ್ ಮಾಡುವಾಗ ಅಡ್ಡಪರಿಣಾಮಗಳ ಬಗ್ಗೆ ಎಚ್ಚರಿಕೆಯಿರಲಿ

ಪುದೀನಾ ಸೊಪ್ಪು ಬಳಸಿ ಕಲೆ ನಿವಾರಿಸಲು ಹೀಗೆ ಮಾಡಿ

ದೇಸೀ ಸನ್ ಸ್ಕ್ರೀನ್ ಲೋಷನ್ ಮನೆಯಲ್ಲಿಯೇ ಮಾಡಿ

ಸೆಕೆಗಾಲದಲ್ಲಿ ಪದೇ ಪದೇ ಕೋಲ್ಡ್ ಡ್ರಿಂಕ್ಸ್ ಸೇವನೆ ಮಾಡುತ್ತಿದ್ದರೆ ಇದನ್ನು ತಪ್ಪದೇ ಓದಿ

ಅಸ್ತಮಾ ರೋಗಿಗಳು ಹಾಲು ಹೇಗೆ ಸೇವಿಸಬೇಕು ಮತ್ತು ಬೆಸ್ಟ್ ಟೈಮ್ ಯಾವುದು ತಿಳಿಯಿರಿ

ಮುಂದಿನ ಸುದ್ದಿ
Show comments